ತಾಳಿಕೋಟಿ: ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ. ಮುಸ್ಲಿಮ್ ಕೋ-ಆಪರೇಟಿವ್ಹ ಬ್ಯಾಂಕ್ ಲಿ.ಇದರ 2023-24 ನೇ ಸಾಲಿನ ವರ್ಷದಲ್ಲಿ ರೂ. 53.57 ಲಕ್ಷ ಲಾಭವನ್ನು ಹೊಂದಿದ್ದು ಇದರಲ್ಲಿ ರೂ.15 ಲಕ್ಷ ಆದಾಯ ತೆರಿಗೆಯನ್ನು ಸಲ್ಲಿಸಿ ರೂ.38.57 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಡಿ.ಎಲ್.ಚೌದ್ರಿ ಹೇಳಿದರು.
ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವರದಿ ವರ್ಷದಲ್ಲಿ ಬ್ಯಾಂಕ್ ಗ್ರೇಡ್ 1 ರಲ್ಲಿ ಮುಂದುವರೆದಿದೆ. 2023-24 ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನ ಒಟ್ಟು ಸದಸ್ಯರ ಸಂಖ್ಯೆ 5514 ಇದ್ದು, ರೂ.183.70 ಲಕ್ಷ ಶೇರು ಬಂಡವಾಳ ಹೊಂದಿದೆ.ರೂ.139.38 ಲಕ್ಷ ಕಾಯ್ದಿಟ್ಟ ನಿಧಿಗಳು. ರೂ.4697.74ಲಕ್ಷ ಠೇವು ಹಣ ಸಂಗ್ರಹವಾಗಿದ್ದು. ವರ್ಷಂತ್ಯಕ್ಕೇರೂ. 2931.45 ಲಕ್ಷ ಸಾಲವನ್ನು ನೀಡಲಾಗಿದೆ ಎಂದರು.
ಈ ಬ್ಯಾಂಕ್ ಪ್ರತಿವರ್ಷ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣೀಕರ್ತರು ಯಾವತ್ತೂ ಬ್ಯಾಂಕಿನ ಸದಸ್ಯರು, ಗ್ರಾಹಕರು, ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ವಿಶೇಷವಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕಳಕಳಿ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಇದೇ ತಿಂಗಳ 27 ರಂದು ಶನಿವಾರ ಮುಂಜಾನೆ 11:00 ಘಂಟೆಗೆ ಪಟ್ಟಣದ ಈದಗಾ ಶಾದಿ ಮಹಲ್ ನಲ್ಲಿ ಬ್ಯಾಂಕನ 88 ನೇ ವಾರ್ಷಿಕ ಮಹಾಸಭೆ ನಡೆಯಲಿದ್ದು ಯಾವತ್ತೂ ಬ್ಯಾಂಕಿನ ಸದಸ್ಯರು ಸಕಾಲಕ್ಕೆ ಸಭೆಗೆ ಹಾಜರಾಗಿ ಬ್ಯಾಂಕಿನ ಅಭಿವೃದ್ಧಿಗೆ ಸಹಾಯಕವಾಗುವ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

