ವಿಜಯಪುರ: ಜು.೨೬ “ಕಾರ್ಗಿಲ್ ವಿಜಯ ದಿವಸ್” ನಮ್ಮ ದೇಶದ ಗಡಿಯನ್ನು ಅತಿಕ್ರಮಿಸುವ ಮೂಲಕ ಯುದ್ಧಕ್ಕೆ ಬಂದ ಶತ್ರು ದೇಶ ಪಾಕಿಸ್ತಾನದ ಸೈನಿಕರನ್ನು, ನಮ್ಮ ದೇಶದ ಹೆಮ್ಮಯ ಸೈನಿಕರು ಹೊಡೆದೋಡಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದ ದಿನ.
ನಮ್ಮ ತಾಯಿ ಭಾರತಾಂಬೆಯ ರಕ್ಷಣೆಗಾಗಿ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಹಾಗೂ ಗಾಯಗೊಂಡ ಸಾವಿರಾರು ವೀರ ಯೋಧರನ್ನು ಸ್ಮರಿಸುತ್ತಾ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವ ಈ ಸುಸಂದರ್ಭದಲ್ಲಿ ಶುಕ್ರವಾರ ತಾಲೂಕು ಪಂಚಾಯತ ವಿಜಯಪುರ ಸಭಾಭವನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ ಹಾಗೂ ಸಹಾಯಕ ನಿರ್ದೇಶಕ (ಗ್ರಾ.ಉ) ಮಸಳಿ ಅವರ ಸಮ್ಮುಖದಲ್ಲಿ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರೆಲ್ಲರ ಉಪಸ್ಥಿತಿಯಲ್ಲಿ ತಾಯ್ನಾಡಿಗಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಮಾಜಿ ಸೈನಿಕರಾದ ಎಸ್ ಆರ್ ಕಟ್ಟಿ ಮತ್ತು ಬಿ ಆರ್ ರಾಥೋಡ ಸರ್ ಅವರಿಗೆ ಹೃದಯ ಸ್ಪರ್ಶಿ ನಮನಗಳನ್ನು ತಿಳಿಸಿ ಈರ್ವರಿಗೂ ಸತ್ಕರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

