ವಿಜಯಪುರ: ಕಾರ್ಗಿಲ್ ಯುದ್ಧದದಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ನೆನೆಯುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಹೇಳಿದ್ದಾರೆ.
ಶುಕ್ರವಾರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
24 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಗಡಿಯನ್ನು ಅತೀಕ್ರಮಿಸಿದ್ದ ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಯೋಧರು ಸದೆಬಡಿದು ಗೆಲುವು ಸಾಧಿಸಿದರು. ಈ ಯುದ್ಧದಲ್ಲಿ ಹಲವಾರು ಸೈನಿಕರು ಪ್ರಾಣ ತ್ಯಾಗ ಮಾಡಿದರು. ಅಲ್ಲದೇ, ಅನೇಕ ಯೋಧರು ಗಾಯಗೊಂಡಿದ್ದರು. ಈ ಯುದ್ಧದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸೈನಿಕರನ್ನು ನೆನೆದು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಾದ ಅನುಪ್ರಿಯಾ ಕುಲಕರ್ಣಿ ಮತ್ತು ಪೃಥ್ವಿ ಕೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯೋಧರು ಪ್ರತಿಹೆಜ್ಜೆಗೂ ಎದುರಾದ ಪ್ರಾಣಾಪಾಯ ಲೆಕ್ಕಿಸದೇ ನಡೆಸಿದ ಹೋರಾಟದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಯೋಧರ ಉಡುಗೆಯಲ್ಲಿ ಬಂದು ಕಾರ್ಗಿಲ್ ಅಣಕು ಕಾರ್ಯಾಚರಣೆಯ ನೃತ್ಯವನ್ನು ಪ್ರದರ್ಶಿಸಿದರು.
ಸೌಮ್ಯಾ ಕಡೆಮನಿ ಸ್ವಾಗತಿಸಿದರು. ಅಶೋಕ ನವಲೆ ಕಾರ್ಯಕ್ರಮವನ್ನು ನಿರೂಪಿಸಿದರು ನೃತ್ಯ ಸಂಯೋಜಕಿ ಪ್ರವೀಣ ಬಡಿಗೇರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

