ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಕಾಲೇಜ್ ಪ್ರಾಣಿ ಶಾಸ್ತ್ರ ವಿಭಾಗದಿಂದ ಬೂತನಾಳ ಕೆರೆ ಆವರಣದಲ್ಲಿ ತರಬೇತಿ & ಉಪನ್ಯಾಸ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮತ್ತು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಸಂಯೋಜನ ಅಡಿಯಲ್ಲಿ ಬೂತನಾಳ ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಮತ್ತು ಉಪನ್ಯಾಸವನ್ನು ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮೀನು ಸಾಕಾಣಿಕೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಮೀನುಗಾರಿಕೆ, ಮತ್ತು ಮೀನುಗಳ ಪೌಷ್ಟಿಕಾಂಶದ ಮೌಲ್ಯಗಳು, ಜಲಚರ ಸಾಕಣೆ, ಅಲಂಕಾರಿಕ ಮೀನುಗಳು, ವಿವಿಧ ಜಾತಿಯ ಮೀನುಗಳನ್ನು ಗುರುತಿಸುವುದು ಹೇಗೆ, ಸಂರಕ್ಷಣೆ ತಂತ್ರಗಳು, ಉದ್ಯಮಶೀಲತೆಗೆ ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಫಿಶ್ ಗೇರ್ ಮತ್ತು ಬಲೆಗಳನ್ನು ಉಪಯೋಗಿಸಿ ಮೀನನ್ನು ಹಿಡಿಯುವ ವಿಧಾನಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ವಿಜಯಪುರದ ಭೂತನಾಳ ಕೆರೆ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಮುಖ್ಯಸ್ಥ ಡಾ.ವಿಜಯ್ ಎಸ್ ಅಥನೂರ್, ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಕೆರೆ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಧರ್ಮ ಗುರು ಪ್ರಸಾದ್ ಎಂ. ಪಿ, ಪ್ರೊ. ಮಿಲನ್ ಎಸ್ ರಾಠೋಡ್, ಕವಿತಾ ವೈ ಜಿ ಇದ್ದರು.

