ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ ಕುರಿತು ಮುಖ್ಯ ಗುರುಗಳ ಸಭೆ
ವಿಜಯಪುರ: ಪರೀಕ್ಷೆ ಶಾಲಾ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗ. ಸದ್ಯ ಶಾಲಾ ಶಿಕ್ಷಣದಲ್ಲಿ ಪರೀಕ್ಷೆ ಒಂದು ಪ್ರಧಾನ ಭಾಗವೇ ಆಗಿ ಬಿಟ್ಟಿದೆ. ಅದರಲ್ಲಿ ಬೇರೆ ಬೇರೆ ತರಗತಿಗಳಲ್ಲಿ ವಿವಿಧ ಹಂತದ ಪರೀಕ್ಷೆಗಳಿರುವುದು ಗೊತ್ತಿರುವ ವಿಷಯವೇ. ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ ಆ ಮೂಲಕ ವಿದ್ಯಾರ್ಥಿಯ ಮುಂದಿನ ಕಲಿಕಾ ಕಾರ್ಯತಂತ್ರಗಳನ್ನು ರೂಪಿ, ವಿದ್ಯಾರ್ಥಿಗಳ ಉತ್ತೀರ್ಣತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪಾಸು ಅಥವಾ ಫೈಲು ಎಂಬುನ್ನು ನಿರ್ಧರಿಸುವುದಕ್ಕೆ ಪರೀಕ್ಷೆ ಪ್ರಧಾನ ಸಲಕರಣೆಯೂ ಆಗಿದೆ ಎಂದು ಶಿಕ್ಷಣ ಸಂಯೋಜಕರಾದ ಎಲ್.ಎಸ್.ಬಿರಾದಾರರವರು ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ ಕುರಿತು ಶಾಲಾ ಮುಖ್ಯ ಗುರುಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು. ಶಾಲೆಯ ಶಿಕ್ಷಕರು ಬೆಳಗಿನ ಜಾವ ಎದ್ದು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ಬೆಳಗಿನ ಓದಿಗೆ ಅಣಿಗೊಳಿಸುವ ಕೆಲಸ ನಿರ್ವಹಿಸುತ್ತಾರೆ. ಮನೆಯ ತಂದೆ-ತಾಯಿ ತಮ್ಮ ಮಗ, ಮಗಳು ಓದುತ್ತಿದ್ದಾರೆಂದು ನಿತ್ಯವೂ ಖಾತರಿ ಮಾಡಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡರವರು ಮಾತನಾಡುತ್ತ. ಶಾಲೆಯ ಒಟ್ಟು ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಅವರನ್ನು ವಿಭಾಗಿಸಿ ಎಲ್ಲಾ ಶಿಕ್ಷಕರಿಗೂ ಇಂತಿಷ್ಟು ವಿದ್ಯಾರ್ಥಿಗಳೆಂದು ದತ್ತು ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದು, ಆಯಾ ಶಿಕ್ಷಕರು ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಇದೇ ರೀತಿ ಚೆನ್ನಾಗಿ ಓದುವ ವಿದ್ಯಾರ್ಥಿಗಳ ಜತೆ ಸುಧಾರಣಾ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಜತೆ ಮಾಡಿ ಓದಲು ಬಿಡುತ್ತಾರೆ. ಇದರಿಂದಾಗಿ ಸಾಧಾರಣ ವಿದ್ಯಾರ್ಥಿ ಪಾಸಿಂಗ್ ವಿದ್ಯಾರ್ಥಿಯಾಗಲು ಸಹಕಾರಿ. ಇಲ್ಲೂ ಶಿಕ್ಷಕರ ಮಾರ್ಗದರ್ಶನಲ್ಲಿಯೇ ಇವೆಲ್ಲಾ ನಡೆಯುತ್ತದೆ.
ಈ ಸಂದರ್ಭದಲ್ಲಿ ಇ.ಡಿ.ಲಮಾಣಿ, ಸಿಆರ್‌ಪಿ ಸಂತೋಷ ತಳವಾರ ಸೇರಿದಂತೆ ವಿಜಯಪುರ ನಗರದ ಸಿದ್ದೇಶ್ವರ ವಲಯದ ಎಲ್ಲ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಉಪಸ್ಥಿತರಿದ್ದರು.

