Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಮೂಲ ಸೌಲಭ್ಯವನ್ನು ಒದಗಿಸವುದೇ ನನ್ನ ಆದ್ಯ ಕರ್ತವ್ಯ, ಹಾಗೂ ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯಕ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ ಚಿಕ್ಕಗಸಿ ಹೇಳಿದರು.ಅವರು ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಕಾಂಪೌಡ ಕಟ್ಟಡದ ನಿರ್ಮಾಣದ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು ರೂ ೧೨ ಲಕ್ಷ ಅನೂದಾನದಲ್ಲಿ ನಿರ್ಮಾಣದ ಕಾಮಗಾರಿ ಆರಂಭವಾಗುತ್ತಿದೆ. ೩೯ ಜನ ಗ್ರಾಮ ಪಂಚಾಯತ್ ಸದಸ್ಯರು ಒಂದುಗೂಡಿ ನನ್ನನ್ನು ಆ ವಿರೋಧವಾಗಿ ಆಯ್ಕೆ ಮಾಡಿದ್ದಾರೆ ನನ್ನ ಮೇಲೆ ಇಷ್ಟೊಂದು ಪ್ರೀತಿ, ಗೌರವ ನೀಡಿ ಗ್ರಾಮದ ಸೇವೆ ಸಲ್ಲಿಸಲು ಅಧ್ಯಕ್ಷಯಾಗಿ ಆಯ್ಕೆ ಆಗಿದ್ದು ತಮ್ಮೆಲ್ಲರ ಆರ್ಶಿರ್ವಾದ ಕಾರಣ ಎಂದರು.ಈ ಸಂದರ್ಭದಲ್ಲಿ ಪ್ರಕಾಶ ಮುಂಜಿ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ರಾಮಚಂದ್ರ ದೊಡ್ಡಮನಿ, ಯೊಗಪ್ಪ ಹೋರಪೇಟಿ, ಜಕ್ಕಪ್ಪ ಹತ್ತಳ್ಳಿ, ಬಸವರಾಜ ಅವಟಿ, ಮಾಸೀಮ ಚಿಕ್ಕಗಸಿ, ಮಹ್ಮದ ದಡೇದ, ರವಿ ನಡಗಡ್ಡಿ,…
ಬಿಜೆಪಿ ಕೈಗೊಂಡಿರುವ ಮೈಸೂರು ಪಾದಯಾತ್ರೆಯ ಕುರಿತು ಬಿಜೆಪಿ ಪೂರ್ವಭಾವಿ ಸಭೆ ದೇವರಹಿಪ್ಪರಗಿ: ಕಾಂಗ್ರೆಸ್ ಸರ್ಕಾರ ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಗಳಂತ ಹಗರಣಗಳ ಮೂಲಕ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರದಂದು ದೇವರಹಿಪ್ಪರಗಿ ಬಿಜೆಪಿ ಮಂಡಲದದಿಂದ ಮೈಸೂರು ಪಾದಯಾತ್ರೆಯ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಿದ್ಧರಾಮಯ್ಯ ಸರ್ಕಾರದ ಭ್ರಷ್ಟ ಆಡಳಿತ ನೀತಿಯ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳು ಮೈಸೂರಿನಿಂದ ಪಾದಯಾತ್ರೆ ಕೈಗೊಂಡಿದ್ದು, ಈ ಪಾದಯಾತ್ರೆಯಲ್ಲಿ ಕಾಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆನೀಡಿದರು.ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹಗರಣಗಳು ದಿನಕ್ಕೊಂದು ರೂಪ ಪಡೆಯುತ್ತಿವೆ. ಇದರ ವಿರುದ್ಧ ಎರಡು ಪಕ್ಷಗಳ ಪ್ರಬಲ ಹೋರಾಟದ ಅಂಗವಾಗಿ ಮೈಸೂರು ಪಾದಯಾತ್ರೆ ಆರಂಭಗೊಂಡಿದೆ ಎಂದರು.ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಕೋಶಾಧ್ಯಕ್ಷ ಸೋಮಶೇಖರ ಹಿರೇಮಠ, ಶ್ರೀಮಂತ ತಳವಾರ, ಬಸವರಾಜ ಕಲ್ಲೂರ, ರಾವುತ ಅಗಸರ, ಶಿವರಾಜ್ ತಳವಾರ, ಶ್ರೀಶೈಲ ಯಂಭತ್ನಾಳ, ಕಲ್ಮೇಶ…
ಚಿಕ್ಕಪಡಸಲಗಿ: ಇಂದಿನ ಯುವಜನತೆ ಟಿ.ವಿ. ಮೊಬೈಲ್ ನಲ್ಲಿ ಅನಗತ್ಯ ಮುಳುಗಿ ತಮ್ಮ ಭವಿಷ್ಯತ್ತಿನ ಜೀವನ ಪಯಣ ಮುಸುಕು ಮಾಡಿಕೊಳ್ಳುತ್ತಲ್ಲಿದ್ದಾರೆ. ಮೊಬೈಲ್ ವ್ಯಸನದಿಂದ ಹೊರಬಂದು ಕ್ರೀಡಾ ಆಟೋಟಗಳತ್ತ ಗಮನ ಹರಿಸಿ. ಕ್ರೀಡೆಗಳಿಗೆ ಪ್ರಾಮುಖ್ಯತೆಯ ಬದ್ದತೆಯಿಂದ ಆದ್ಯತೆ ನೀಡಿ ಜೀವನೋತ್ಸಾಹ ವೃದ್ಧಿಸಿಕೊಳ್ಳಿ ಕ್ರೀಡಾ ರಂಗದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿ.ಅಗ ಜಗವೇ ತಮ್ಮನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮೆಚ್ಚಿಕೊಳ್ಳುತ್ತದೆ ಎಂದು ಯುವ ವಿದ್ಯಾರ್ಥಿ ಸಮೂಹಕ್ಕೆ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಮಾರ್ಗದಶಿ೯ ಬಸವರಾಜ ಅನಂತಪುರ ಸಲಹೆ ನೀಡಿದರು.ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಮಕ್ಕಳಿಗೆ ಕಡೆಗುಳ್ಳವ್ವ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಜನಪದ ಹಿನ್ನೆಲೆಯ ವಿವಿಧ ಮನರಂಜನೆ ಕ್ರೀಡಾ ಆಟೋಟಗಳ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಹು ಅಮೂಲ್ಯ.ದುಶ್ಚಟಗಳಿಗೆ ಸಿಲುಕಿ ಬದುಕು ನರಕ ಮಾಡಕೊಳ್ಳಬೇಡಿ. ಆಟಪಾಠಗಳತ್ತ ಏಕಚಿತ್ತದ ಗಮನ ಹರಿಸಿ ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು.ಕ್ರೀಡೆಗಳು ವ್ಯಕ್ತಿತ್ವ ವಿಕಸನದ ಮಾಲೆಯಾಗಿದೆ.ಆತಂಕ,ಒತ್ತಡ ತಡೆಗಟ್ಟಿ ಒಳ್ಳೆಯ ಕ್ರಿಯಾಶೀಲ ಭಾವನೆ ಮೂಡಿಸುತ್ತದೆ. ಆರೋಗ್ಯಕರ ಶೈಲಿಯಿಂದ…
ವಿಜಯಪುರ: ಜಿಲ್ಲೆಯಲ್ಲಿ ೫ ನದಿಗಳು ಹರಿದು, ಪಂಚ ನದಿಗಳ ಬೀಡು ೨ನೇ ಪಂಜಾಬ ಎಂದು ಕರೆಯುತ್ತಿರುವುದು ಹೆಸರಿಗೆ ಮಾತ್ರವಾಗಿದೆ, ಆದರೆ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ರೈತರ ಕೃಷಿಗೆ ನೀರು ಸರಿಯಾಗಿ ಕೊಡುತ್ತಿಲ್ಲ, ಕುಡಿಯಲು ಕೂಡಾ ಪ್ರತಿಭಾರಿ ನೀರಿನ ತತ್ವಾರ ಎದರಾಗುತ್ತಿದೆ, ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ಲಕ್ಷಾಂತರ ಎಕರೆ ಫಲವತ್ತಾದ ಜಮೀನು, ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾದ ರೈತರಿಗೆ ಸರಕಾರ ಅನ್ಯಾಯ ಮಾಡಿದೆ, ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ದೊಡ್ಡ ಮೋಸವಾಗಿದೆ,ಆದ್ದರಿಂದ ಕೃಷ್ಣಾ ನದಿಯ ನೀರನ್ನು ಮರು ಹಂಚಿಕೆ ಮಾಡುವಂತೆ ಮತ್ತು ನೀರು ನಿರ್ವಹಣಾ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರಮಾಣದ ಚಳುವಳಿ ರೂಪಿಸಲು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಆ.೮ರಂದು ಬೆಳಿಗ್ಗೆ ೧೧.೦೦ ಘಂಟೆಗೆ ಜಿಲ್ಲೆಯ ಎಲ್ಲಾ ರೈತಪರ ಸಂಘಟನೆಗಳು ಹಾಗೂ ನಾಡಿನ ಮಠಾಧಿಶರು, ಪ್ರಗತಿಪರ ಸಂಘಟನೆಗಳ ಸಭೆ ಕರೆಯಲಾಗಿದ್ದು. ಅಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಂದಿನ ಚಳುವಳಿಯ ರೂಪರೇಷಗಳ…
ವಿಜಯಪುರ: ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು.ಸಿಂದಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರೀಫ ಬಿರಾದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ “ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯ ವಿರುದ್ದ ನ್ಯಾಯಕ್ಕಾಗಿ ಸಮಾನ ಮನಸ್ಕರ ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಕುರಿತು ಅವರು ಮಾತನಾಡಿ ಸರಕಾರ2016 ಕ್ಕಿಂತ ಮುಂಚಿತವಾಗಿ ಒಂದರಿಂದ ಏಳನೇ ತರಗತಿಗೆ ಸಹಶಿಕ್ಷಕರೆಂದು ನೇಮಕಾತಿ ಹೊಂದಿದ ಶಿಕ್ಷಕರನ್ನು ಪಿ ಎಸ್ಟಿ ಎಂದು ಪದನಾಮಕರಣ ಗೊಳಿಸಿ ಒಂದರಿಂದ ಐದನೇ ತರಗತಿಗೆ ಯಾವುದೇ ಸರ್ಕಾರಿ ನೌಕರರಿಗೆ ಇಲ್ಲದ ಹಿಂಬಡ್ತಿ ನೀಡಿದ್ದು ಎಷ್ಟು ಸಮಂಜಸ ಎಂದು ಪ್ರಶ್ನೆ ಮಾಡಿ ಶಿಕ್ಷಕರು 2016ಕ್ಕಿಂತ ಪೂರ್ವದಲ್ಲಿ ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿಸರ್ಕಾರದಿಂದ ಆದೇಶ ಆಗುವರಿಗೆ ನಾವು ಹೋರಾಟ ಮಾಡಬೇಕಾಗುತ್ತದೆ.ಪದವಿ ಹೊಂದಿದ ಎಲ್ಲಾ ಸೇವಾನಿರತ…
ವಿಜಯಪುರ: ಸೋಮವಾರ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-೩ರ ವಿಜ್ಞಾನ ಪರೀಕ್ಷೆಗೆ ಒಟ್ಟು ೨೩೯೯ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ೧೮೨೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೫೭೮ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರದವು ಕೆಇಎ ಮೂಲಕ ನಡೆಸಲಿರುವ ರಾಜ್ಯ ಮಟ್ಟದ ಪದವಿ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ-ಸೆಟ್) ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೊಗದವರು ನಡೆಸಲಿರುವ ರಾಷ್ಟç ಮಟ್ಟದ ಕಾಲೇಜ್ ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (ಜೆಆರ್‌ಎಫ್) ಪರೀಕ್ಷೆಗಳಿಗೆ ೪೫ ದಿನಗಳ ತರಬೇತಿ ಶಿಬಿರ ಏರ್ಪಡಿಸಲಾಗಿದೆ.ಆಸಕ್ತರು ದಿನಾಂಕ : ೯-೮-೨೦೨೪ರೊಳಗಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೨೧-೨೫೧೫೯೪೪ ಸಂಖ್ಯೆಗೆ ಸಂಪರ್ಕಿಸುವಂತೆ ಕುಲಸಚಿವ ಕೆ.ಬಿ.ಪ್ರವೀಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವಿಜಯಪುರದ ಪ್ರಾದೇಶಿಕ ಕೇಂದ್ರದಲ್ಲಿ ೨೦೨೪-೨೫ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.ವಿವಿಯಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ (ಐಟಿ), ಬಿಎಸ್ಸಿ(೧೪ ಕಾಂಬಿನೇಷನ್ಸ್), ಬಿಎಸ್‌ಡಬ್ಲೂ, ಬಿಎಲ್‌ಐಎಸ್ಸಿ, ಎಂಎ(೧೪ ವಿಷಯಗಳಲ್ಲಿ) ಎಂ.ಕಾಂ, ಎಂಬಿಎ (೮ಕಾಂಬಿನೇಷನ್ಸ), ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ (೧೬ ವಿಷಯಗಳಲ್ಲಿ) ಎಂಸಿಎ, ಎಂಎಸ್‌ಡಬ್ಲೂ, ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್ಸ್ ಡಿಪ್ಲೋಮಾ ಪ್ರೊಗ್ರಾಮ್ಸ್ ಮತ್ತು ಸರ್ಟಿಫಿಕೆಟ್ ಪ್ರೊಗ್ರಾಮ್ಸ್ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.ಆಸಕ್ತ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ ಕೋರ್ಸ್ಗಳಿಗೆ ಆನ್‌ಲೈನ್ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪವೆಶ ಪಡೆಯಬಹುದಾಗಿದೆ.ಬಿಪಿಎಲ್ ಕಾರ್ಡ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳು, ಅಟೋ-ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ, ಕೆಎಸ್‌ಆರ್‌ಟಿಸಿ ನೌಕರರಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಕೋವಿಡ್-೧೯ರ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಪೋಷಕರ ಮಕ್ಕಳಿಗೆ, ತೃತೀಯ ಲಿಂಗದ ವಿದ್ಯಾರ್ಥಿಗಳಿಗೆ, ದೃಷ್ಟಿಹೀನ…
ವಿಜಯಪುರ: ಜಿಲ್ಲೆಯಲ್ಲಿ ಸುಮಾರು ೪.೫ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಅಲ್ಲಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ವಿಜ್ಞಾನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ತೊಗರಿ ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಡಿ.ಡಬ್ಲು ರಾಜಶೇಖರ ಮನವಿ ಮಾಡಿಕೊಂಡಿದ್ದಾರೆ.ಗೊಣ್ಣೆ ಹುಳು ಮಣ್ಣಿನ ಒಂದು ಕೀಟವಾಗಿದ್ದು, ಆರಂಭಿಕ ಹಂತದಲ್ಲಿ ಮರಿಹುಳುಗಳು ಸಾವಯವ ಪದಾರ್ಥದ ಮೇಲೆ ತನ್ನ ಜೀವನ ಚಕ್ರವನ್ನು ಮುಗಿಸುತ್ತವೆ ಆದರೆ ನಂತರದ ಹಂತದಲ್ಲಿ ಅವು ಬೇರುಗಳನ್ನು ಹಾಳು ಮಾಡುತ್ತವೆ. ಬಾಧೆಗೊಳಗಾದ ಸಸ್ಯಗಳು ಒಣಗುತ್ತವೆ ಮತ್ತು ಸುಲಭವಾಗಿ ಕಿತ್ತು ತೆಗೆಯಬಹುದು. ಅಲ್ಲಲ್ಲಿ ಅಂತರ ಬಿಟ್ಟು ಈ ರೋಗ ಬಾಧೆಯಾಗಿದ್ದರೂ ಇಡೀ ಹೊಲವನ್ನೇ ಹಾಳು ಮಾಡುತ್ತದೆ. ಆದ್ದರಿಂದ ಜೈವಿಕ ನಿರ್ವಹಣಾ ಕ್ರಮವಾಗಿ ಮೆಟಾರೈಝಿಯಂ ಅನಿಸೋಪ್ಲಿಯೆ ಶಿಲೀಂದ್ರವನ್ನು ಪ್ರತಿ ಎಕರೆಗೆ ೫-೧೦ ಕಿ.ಗ್ರಾಂ (ಬಾಧೆಗನುಸಾರವಾಗಿ) ೨೫೦-೫೦೦ ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬೆಳೆಯ ಸಾಲಿನಲ್ಲಿ ಹಾಕಿ ಅಥವಾ ರಸಾಯನಿಕವಾದ ಕ್ಲೊರ್ ಪೈರಿಫಾಸ್ ೫೦ ಇ.ಸಿ.@ ೪ಮಿ.ಲೀ.…
ವಿಜಯಪುರ: ಆಗಸ್ಟ್ 12 ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸಲು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಬೃಹತ್ ಹೋರಾಟದ ಭಾಗವಾಗಿ ಸೋಮವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ತಿಕೋಟಾ, ವಿಜಯಪುರ ಗ್ರಾಮೀಣವಲಯ ಹಾಗೂ ನಗರ ಘಟಕಗಳ ವತಿಯಿಂದ ವಿಜಯಪುರ ಗ್ರಾಮೀಣ ವಲಯ ಹಾಗೂ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಿಕೋಟಾ ಹಾಗೂ ವಿಜಯಪುರ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿದ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತ: 1ರಿಂದ 7/8 ಕ್ಕೆ ನೇಮಕ ಹೊಂದಿದವರನ್ನು ಪಿ.ಎಸ್.ಟಿ ಎಂದು ಪದನಾಮ ಮಾಡಿ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆಯಬೇಕು. 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಎನ್.ಸಿ.ಟಿ.ಈ ನಿಯಮಾವಳಿ ಪ್ರಕಾರ ಪದವಿ…
