ವಿಜಯಪುರ: ಜಿಲ್ಲೆಯಲ್ಲಿ ೫ ನದಿಗಳು ಹರಿದು, ಪಂಚ ನದಿಗಳ ಬೀಡು ೨ನೇ ಪಂಜಾಬ ಎಂದು ಕರೆಯುತ್ತಿರುವುದು ಹೆಸರಿಗೆ ಮಾತ್ರವಾಗಿದೆ, ಆದರೆ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ರೈತರ ಕೃಷಿಗೆ ನೀರು ಸರಿಯಾಗಿ ಕೊಡುತ್ತಿಲ್ಲ, ಕುಡಿಯಲು ಕೂಡಾ ಪ್ರತಿಭಾರಿ ನೀರಿನ ತತ್ವಾರ ಎದರಾಗುತ್ತಿದೆ, ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ಲಕ್ಷಾಂತರ ಎಕರೆ ಫಲವತ್ತಾದ ಜಮೀನು, ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾದ ರೈತರಿಗೆ ಸರಕಾರ ಅನ್ಯಾಯ ಮಾಡಿದೆ, ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ದೊಡ್ಡ ಮೋಸವಾಗಿದೆ,
ಆದ್ದರಿಂದ ಕೃಷ್ಣಾ ನದಿಯ ನೀರನ್ನು ಮರು ಹಂಚಿಕೆ ಮಾಡುವಂತೆ ಮತ್ತು ನೀರು ನಿರ್ವಹಣಾ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರಮಾಣದ ಚಳುವಳಿ ರೂಪಿಸಲು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಆ.೮ರಂದು ಬೆಳಿಗ್ಗೆ ೧೧.೦೦ ಘಂಟೆಗೆ ಜಿಲ್ಲೆಯ ಎಲ್ಲಾ ರೈತಪರ ಸಂಘಟನೆಗಳು ಹಾಗೂ ನಾಡಿನ ಮಠಾಧಿಶರು, ಪ್ರಗತಿಪರ ಸಂಘಟನೆಗಳ ಸಭೆ ಕರೆಯಲಾಗಿದ್ದು. ಅಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಂದಿನ ಚಳುವಳಿಯ ರೂಪರೇಷಗಳ ಕುರಿತು ನಿರ್ಣಯಿಸಲು ಆಗಮಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
