Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿಕ್ಷಕರು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ :ಭೂಸನೂರ
(ರಾಜ್ಯ ) ಜಿಲ್ಲೆ

ಶಿಕ್ಷಕರು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ :ಭೂಸನೂರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ಸಿಂದಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರೀಫ ಬಿರಾದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ “ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯ ವಿರುದ್ದ ನ್ಯಾಯಕ್ಕಾಗಿ ಸಮಾನ ಮನಸ್ಕರ ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಕುರಿತು ಅವರು ಮಾತನಾಡಿ ಸರಕಾರ
2016 ಕ್ಕಿಂತ ಮುಂಚಿತವಾಗಿ ಒಂದರಿಂದ ಏಳನೇ ತರಗತಿಗೆ ಸಹಶಿಕ್ಷಕರೆಂದು ನೇಮಕಾತಿ ಹೊಂದಿದ ಶಿಕ್ಷಕರನ್ನು ಪಿ ಎಸ್ಟಿ ಎಂದು ಪದನಾಮಕರಣ ಗೊಳಿಸಿ ಒಂದರಿಂದ ಐದನೇ ತರಗತಿಗೆ ಯಾವುದೇ ಸರ್ಕಾರಿ ನೌಕರರಿಗೆ ಇಲ್ಲದ ಹಿಂಬಡ್ತಿ ನೀಡಿದ್ದು ಎಷ್ಟು ಸಮಂಜಸ ಎಂದು ಪ್ರಶ್ನೆ ಮಾಡಿ ಶಿಕ್ಷಕರು 2016ಕ್ಕಿಂತ ಪೂರ್ವದಲ್ಲಿ ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿ
ಸರ್ಕಾರದಿಂದ ಆದೇಶ ಆಗುವರಿಗೆ ನಾವು ಹೋರಾಟ ಮಾಡಬೇಕಾಗುತ್ತದೆ.ಪದವಿ ಹೊಂದಿದ ಎಲ್ಲಾ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಿಕರಣ ಮಾಡಿ ಜಿಪಿಟಿ ವೃಂದದಲ್ಲಿ ವಿಲೀನಗೊಳಿಸಬೇಕು.
ಈಗಾಗಲೇ ಬಿ.ಇಡಿ ಪದವಿ ಹೊಂದಿದ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ತಾಲೂಕಿನ ಶಿಕ್ಷಕರ ಪರವಾಗಿ ಆಗ್ರಹಿಸಿದರು.ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರವು ರಾಜ್ಯದ ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರ ಭವಿಷ್ಯವನ್ನು ಬುಡಮೇಲು ಮಾಡಿದೆ, ವಿದ್ಯಾರ್ಹತೆ ಪರಿಗಣಿಸದೆ ವಿಷಯವಾರು ಬಡ್ತಿ, ವರ್ಗಾವಣೆಯಲ್ಲಿ ಆಗಿರುವ ಅನ್ಯಾಯದಿಂದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಿತಿ ಡೋಲಾಯಮಾನವಾಗಿದೆ. ಆಗಸ್ಟ್ 12ರಂದು ರಾಜ್ಯಮಟ್ಟದ ಹೋರಾಟದಲ್ಲಿ ಪಾಲ್ಗೊಂಡು ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ‌ ಎಂದರು
ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಾಪುರ ಮಾತನಾಡಿ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನ ಪ್ರತಿಯೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು ಸ್ವಯಂ ಪ್ರೇರಿತವಾಗಿ ಈ ಒಂದು ನಿರ್ಣಾಯಕ ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕಾಗಿದೆ. ನಮ್ಮ ಹಕ್ಕಿಗಾಗಿ ನಾವೆಲ್ಲರೂ ಮುಂದಡಿ ಇಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸೊನ್ನ, ಎಸ್ ಎಂ ಮಸಳಿ, ಎಂ.ಎಸ್ ಚೌಧರಿ, ಡಿ. ಎಂ.ಮಾಹುರ, ಬಿ.ಎಸ್ ಹಿರೇಮಠ, ಆರ್ ಬಿ ಇವಣಗಿ, ಜೆ ಬಿ ಭಾಸಗಿ,ಬಿ ಎನ್ ಭಜಂತ್ರಿ, ಎಸ್ ಜಿ ನಾರಾಯಣಕರ,ಎಸ್ ಎಂ ಚಿಗರಿ ಅವರು ಮಾತನಾಡಿ, ಹೋರಾಟದ ಕುರಿತು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಹಾಗೂ ಸಮಸ್ತ ಶಿಕ್ಷಕರ ಬಳಗದಿಂದ ಬೃಹತ್ ಹೋರಾಟದ ಕುರಿತು ಸನ್ಮಾನ್ಯ ಅಶೋಕ ಮನಗೂಳಿ ಶಾಸಕರು ಸಿಂದಗಿ ಮತಕ್ಷೇತ್ರ,
ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸಿಂದಗಿ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರವಾಗಿ ಸರ್ಕಾರಕ್ಕೆ ಮನವಿ ನೀಡಿರುವ ಎಸ್ ಐ ರಾಂಪುರ,ಎಸ್ ಎಚ್ ಬಿರಾದಾರ,ವೈ ಬಿ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಹಣಮಂತ ನಾಗಣಸೂರ, ಝೆಡ್ ಎಸ್ ಮನಿಯಾರ, ರಮೇಶ ಅಡಕಿ, ರಾಚಪ್ಪ ಯಾತನೂರ, ವಿಜಯ ಕುಮಾರ ಹಿರೇಮಠ, ಸೂರ್ಯಕಾಂತ ಚೋರಗಸ್ತಿ.ವಿ ಎ ಅಗಸರ, ಡಿ ಎಸ್. ಬಿರಾದಾರ, ಬಸವರಾಜ ಹಳ್ಳಿ, ಹಣಮಂತ ಶಿರಶ್ಯಾಡ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಶಿಕ್ಷಕರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026
    In ದಿನಪತ್ರಿಕೆ
  • ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
    In (ರಾಜ್ಯ ) ಜಿಲ್ಲೆ
  • ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!
    In (ರಾಜ್ಯ ) ಜಿಲ್ಲೆ
  • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು
    In (ರಾಜ್ಯ ) ಜಿಲ್ಲೆ
  • ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಜಯ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಿ.ವಿ.ರಾಮನ್ ಪ.ಪೂ ಕಾಲೇಜ್ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಗುರು ಸಂಗನಬಸವ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ & ಅಗ್ನಿ ಪ್ರವೇಶ
    In (ರಾಜ್ಯ ) ಜಿಲ್ಲೆ
  • ಬೊಗಸೆಯಲ್ಲಿ ಅರಳುವ ನಿನ್ನಂದದ ಮುಖಕೆ
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ.ಪೂ ಕಾಲೇಜು ಅತ್ಯುತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.