ಬಿಜೆಪಿ ಕೈಗೊಂಡಿರುವ ಮೈಸೂರು ಪಾದಯಾತ್ರೆಯ ಕುರಿತು ಬಿಜೆಪಿ ಪೂರ್ವಭಾವಿ ಸಭೆ
ದೇವರಹಿಪ್ಪರಗಿ: ಕಾಂಗ್ರೆಸ್ ಸರ್ಕಾರ ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಗಳಂತ ಹಗರಣಗಳ ಮೂಲಕ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರದಂದು ದೇವರಹಿಪ್ಪರಗಿ ಬಿಜೆಪಿ ಮಂಡಲದದಿಂದ ಮೈಸೂರು ಪಾದಯಾತ್ರೆಯ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಿದ್ಧರಾಮಯ್ಯ ಸರ್ಕಾರದ ಭ್ರಷ್ಟ ಆಡಳಿತ ನೀತಿಯ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳು ಮೈಸೂರಿನಿಂದ ಪಾದಯಾತ್ರೆ ಕೈಗೊಂಡಿದ್ದು, ಈ ಪಾದಯಾತ್ರೆಯಲ್ಲಿ ಕಾಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆನೀಡಿದರು.
ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹಗರಣಗಳು ದಿನಕ್ಕೊಂದು ರೂಪ ಪಡೆಯುತ್ತಿವೆ. ಇದರ ವಿರುದ್ಧ ಎರಡು ಪಕ್ಷಗಳ ಪ್ರಬಲ ಹೋರಾಟದ ಅಂಗವಾಗಿ ಮೈಸೂರು ಪಾದಯಾತ್ರೆ ಆರಂಭಗೊಂಡಿದೆ ಎಂದರು.
ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಕೋಶಾಧ್ಯಕ್ಷ ಸೋಮಶೇಖರ ಹಿರೇಮಠ, ಶ್ರೀಮಂತ ತಳವಾರ, ಬಸವರಾಜ ಕಲ್ಲೂರ, ರಾವುತ ಅಗಸರ, ಶಿವರಾಜ್ ತಳವಾರ, ಶ್ರೀಶೈಲ ಯಂಭತ್ನಾಳ, ಕಲ್ಮೇಶ ಬುದ್ನಿ, ರಮೇಶ ಈಳಗೇರ, ಆಕಾಶ ಕಬ್ಬಿನ, ಶೇಖರಗೌಡ ಬಿರಾದಾರ, ಭೀಮನಗೌಡ ಲಚ್ಯಾಣ, ಮಾಂತೇಶ ಬೇವೂರ, ಹುಸೇನ್ ಗೌಂಡಿ, ದಾವುಲ್ ಇನಾಮದಾರ, ಮಲ್ಕು ಬಾಗೇವಾಡಿ, ಸುಧಾಕರ ಅಡಕಿ, ದಯಾನಂದ ರಾಠೋಡ, ಇದ್ದರು.

