Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕ್ರೀಡೆಗಳಿಗೆ ಬದ್ದತೆಯ ಆದ್ಯತೆ ನೀಡಿ :ಅನಂತಪುರ
(ರಾಜ್ಯ ) ಜಿಲ್ಲೆ

ಕ್ರೀಡೆಗಳಿಗೆ ಬದ್ದತೆಯ ಆದ್ಯತೆ ನೀಡಿ :ಅನಂತಪುರ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಕ್ಕಪಡಸಲಗಿ: ಇಂದಿನ ಯುವಜನತೆ ಟಿ.ವಿ. ಮೊಬೈಲ್ ನಲ್ಲಿ ಅನಗತ್ಯ ಮುಳುಗಿ ತಮ್ಮ ಭವಿಷ್ಯತ್ತಿನ ಜೀವನ ಪಯಣ ಮುಸುಕು ಮಾಡಿಕೊಳ್ಳುತ್ತಲ್ಲಿದ್ದಾರೆ. ಮೊಬೈಲ್ ವ್ಯಸನದಿಂದ ಹೊರಬಂದು ಕ್ರೀಡಾ ಆಟೋಟಗಳತ್ತ ಗಮನ ಹರಿಸಿ. ಕ್ರೀಡೆಗಳಿಗೆ ಪ್ರಾಮುಖ್ಯತೆಯ ಬದ್ದತೆಯಿಂದ ಆದ್ಯತೆ ನೀಡಿ ಜೀವನೋತ್ಸಾಹ ವೃದ್ಧಿಸಿಕೊಳ್ಳಿ ಕ್ರೀಡಾ ರಂಗದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿ.ಅಗ ಜಗವೇ ತಮ್ಮನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮೆಚ್ಚಿಕೊಳ್ಳುತ್ತದೆ ಎಂದು ಯುವ ವಿದ್ಯಾರ್ಥಿ ಸಮೂಹಕ್ಕೆ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಮಾರ್ಗದಶಿ೯ ಬಸವರಾಜ ಅನಂತಪುರ ಸಲಹೆ ನೀಡಿದರು.
ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಮಕ್ಕಳಿಗೆ ಕಡೆಗುಳ್ಳವ್ವ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಜನಪದ ಹಿನ್ನೆಲೆಯ ವಿವಿಧ ಮನರಂಜನೆ ಕ್ರೀಡಾ ಆಟೋಟಗಳ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಹು ಅಮೂಲ್ಯ.ದುಶ್ಚಟಗಳಿಗೆ ಸಿಲುಕಿ ಬದುಕು ನರಕ ಮಾಡಕೊಳ್ಳಬೇಡಿ. ಆಟಪಾಠಗಳತ್ತ ಏಕಚಿತ್ತದ ಗಮನ ಹರಿಸಿ ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು.
ಕ್ರೀಡೆಗಳು ವ್ಯಕ್ತಿತ್ವ ವಿಕಸನದ ಮಾಲೆಯಾಗಿದೆ.ಆತಂಕ,ಒತ್ತಡ ತಡೆಗಟ್ಟಿ ಒಳ್ಳೆಯ ಕ್ರಿಯಾಶೀಲ ಭಾವನೆ ಮೂಡಿಸುತ್ತದೆ. ಆರೋಗ್ಯಕರ ಶೈಲಿಯಿಂದ ಜೀವನ ಸಾಗಿಸಲು ಸಹಕಾರಿಯಾಗಿದೆ. ಶೈಕ್ಷಣಿಕ ಪ್ರಗತಿ, ತಾಜಾತನದ ಭಾವ ಅರಳಿಸುತ್ತದೆ.ಕಾರಣ ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿ ಹಲಬಗೆಯ ವೈಶಿಷ್ಟ್ಯತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಶಾರೀರ, ದೈಹಿಕ ಬಲ ಹೊಂದಿ ಆರೋಗ್ಯಯುತ ಆತ್ಮವಿಶ್ವಾಸ ಉತ್ತೇಜಿಸಿಕೊಳ್ಳಬೇಕೆಂದು ಸಲಹೆಯಿತ್ತರು.
ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಮಾತನಾಡಿ, ಆಧುನೀಕರಣದ ಭರಾಟೆಯಲ್ಲಿ ಕೆಟ್ಟ ಪ್ರಭಾವಕ್ಕೆ ಮಾರು ಹೋಗದೆ ಸದ್ಗುಣಗಳ ದಾರಿಯಲ್ಲಿ ಯುವಕರು ಪ್ರಸನ್ನತೆ ಕಾಣಬೇಕು. ಉತ್ತಮ ದೇಶಿ ಕ್ರೀಡೆಗಳ ಪ್ರಭಾವಳಿಗೆ ಒಲವು ತೋರಿ ಜೀವನ ರೂಪಿಸಿಕೊಳ್ಳಬಹುದು. ಮನರಂಜನಾ ಚಟುವಟಿಕೆಯಂತೆ ಓದು,ಅಭ್ಯಾಸದ ಜೊತೆಗೆ ಕ್ರೀಡೆ ಆಟಗಳಿಗೆ ಮಹತ್ವ ನೀಡಬೇಕು. ಕ್ರೀಡೆಗಳಲ್ಲಿ ಖುಷಿಭಾವ ಹುದುಗಿದೆ ಅದು ಪರಸ್ಪರ ಸಾಮರಸ್ಯದ ವಾತಾವರಣ ಸೃಜಿಸುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನಪದ ಸೊಗಡಿನ ಪ್ರಾಚೀನ ಕ್ರೀಡೆಗಳು ಮರೆಯಾಗುತ್ತಿರುವಂಥ ದಿನಮಾನಗಳಲ್ಲಿಂದು ಆ ಗ್ರಾಮೀಣ ಪ್ರದೇಶದ ಆಟಗಳಿಗೆ ಮಹತ್ವ ನೀಡಿ ಸಾಂಪ್ರದಾಯಿಕ ಶೈಲಿಯ ದೇಶಿ ಹಲ ಆಟಗಳನ್ನು ಇಲ್ಲಿ ಶಾಲಾ ಮಕ್ಕಳಿಗೆ ಆಡಿಸಿ ಸಂತಸ ಮೂಡಿಸಲಾಗಿದೆ. ಪಾಠದ ಜೊತೆಗೆ ಕ್ರೀಡೆಗಳ ಅಭಿರುಚಿ ಹಿರಿಯರಾದ ಅನಂತಪುರ ಗುರುಗಳು ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.
ಬಾಲಕರ ವಿಭಾಗದ ಪಾದರಕ್ಷೆ ಹುಡುಕಾಟದ ಸ್ಪಧೆ೯ಯಲ್ಲಿ ಪಾರೀಸ ದಡ್ಡಿ ಪ್ರಥಮ, ಅಜು೯ನ ಹರುಜನ ದ್ವೀತಿಯ, ಪ್ರತೀಕ ಲವಟೆ ತೃತೀಯ, ಬಾಲಕಿಯರ ವಿಭಾಗದಲ್ಲಿ ಸಮೀಕ್ಷಾ ಕ್ವಾಟಿ ಪ್ರಥಮ, ನಜರಾನಾ ಕುಡಚಿ ದ್ವೀತಿಯ, ಅಂಜನಾ ಬಿರಾದಾರ ತೃತೀಯ ಸ್ಥಾನ ಪಡೆದರೆ ಬಾಲಕರ ವಿಭಾಗದ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಕಿರಣ ಕಲ್ಯಾಣಿ ಹಾಗೂ ಸುದೀಪ್ ಹೊಸಮನಿ ಪ್ರಥಮ ಸ್ಥಾನ, ಪಾರೀಸ ದಡ್ಡಿ, ಪ್ರತೀಕ ಲವಟೆ ದ್ವೀತಿಯ, ಸಚಿನ್ ಮುತ್ತೂರ, ಅರುಣ ತೌಗಲಾ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕೀತಿ೯ ಹರಿಜನ, ಮಹಾಲಕ್ಷ್ಮೀ ಮಲವಾಗಣಿ ಪ್ರಥಮ, ಲಕ್ಷ್ಮೀ ಕಡಕೋಡ, ರಂಜಿತಾ ಹುಣಸಿಕಟ್ಟೆ ದ್ವೀತಿಯ, ಕೀತಿ೯ ಕಲ್ಯಾಣಿ, ಸ್ನೇಹಾ ಸಿದ್ದಾಪುರ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ಲಿಂಬು ಚಮಚ ಸ್ಪಧೆ೯ಯಲ್ಲಿ ಸುದೀಪ ಹೊಸಮನಿ ಪ್ರಥಮ, ಪ್ರತೀಕ ಲವಟೆ ದ್ವೀತಿಯ, ಕಿರಣ ಕಲ್ಯಾಣಿ ತೃತೀಯ, ಬಾಲಕಿಯರ ವಿಭಾಗದಲ್ಲಿ ರಂಜಿತಾ ಹುಣಸಿಕಟ್ಟಿ ಪ್ರಥಮ, ಭಾಗ್ಯಶ್ರೀ ಉಳ್ಳಾಗಡ್ಡಿ ದ್ವೀತಿಯ, ಪೂಣಿ೯ಮಾ ಎಣಗಾಯಿ ತೃತೀಯ ಪಡೆದಿದ್ದಾರೆ.
ಬಾಲಕರ ವಿಭಾಗದ ಸೂಜಿದಾರ ಪೋಣಿಸುವ ಸ್ಪಧೆ೯ಯಲ್ಲಿ ಮುತ್ತಪ್ಪ ಅಂಬಿ ಪ್ರಥಮ, ಸಚಿನ ಮುತ್ತೂರ ದ್ವೀತಿಯ, ದಾನಪ್ಪ ದಡ್ಡಿ ತೃತೀಯ, ಬಾಲಕಿಯರ ವಿಭಾಗದಲ್ಲಿ ಭೂಮಿಕಾ ಕಂಕಣವಾಡಿ ಪ್ರಥಮ, ಕಲ್ಯಾಣಿ ಮಾಂಗ ದ್ವೀತಿಯ, ರಂಜಿತಾ ಹುಣಸಿಕಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರ ವಿಭಾಗದ ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ದಾನಪ್ಪ ದಡ್ಡಿ ಪ್ರಥಮ, ಸಚಿನ ಮುತ್ತೂರ ದ್ವೀತಿಯ, ಸುಶಾಂತ ನ್ಯಾಮಗೌಡ ತೃತೀಯ, ಬಾಲಕಿಯರ ವಿಭಾಗದಲ್ಲಿ ಜ್ಯೋತಿ ತೇರದಾಳ ಪ್ರಥಮ, ಪ್ರೀತಿ ಬಿರಾದಾರ ದ್ವೀತಿಯ, ಮಧುರಾ ಕೋಳಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ಮ್ಯೂಸಿಕಲ್ ಚೇರ್ ಸಂಗೀತ ಕುಚಿ೯ ಸ್ಪಧೆ೯ಯಲ್ಲಿ ಪ್ರಜ್ವಲ ಲವಟೆ ಪ್ರಥಮ, ಪಾರೀಸ ದಡ್ಡಿ ದ್ವೀತಿಯ, ಶಿವಾನಂದ ಕರಗೂಳ ತೃತೀಯ. ಬಾಲಕಿಯರ ವಿಭಾಗದಲ್ಲಿ ಪ್ರಭಾವತಿ ಮುರಗುಂಡಿ ಪ್ರಥಮ, ರಂಜಿತಾ ಹುಣಸಿಕಟ್ಟಿ ದ್ವೀತಿಯ, ಲಕ್ಷ್ಮೀ ಕಡಕೋಳ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದ ಹಣೆಬಟ್ಟು ಕುಂಕುಮ ಇಡುವ ಸ್ಪಧೆ೯ಯಲ್ಲಿ ಬಸಮ್ಮ ಡವಶೇಶ್ವರ ಪ್ರಥಮ, ಸ್ನೇಹಾ ಸಿದ್ದಾಪುರ ದ್ವೀತಿಯ, ಅಂಜನಾ ಬಿರಾದಾರ ತೃತೀಯ ಪಡೆದರೆ ಬಾಲಕರ ವಿಭಾಗದ ಮಡಿಕೆ ಒಡೆಯುವ ಸ್ಪಧೆ೯ಯಲ್ಲಿ ದರ್ಶನ ಪಡಸಲಗಿ ಪ್ರಥಮ, ಚಂದ್ರಶೇಖರ ಮಾಂಗ ದ್ವೀತಿಯ ಸ್ಥಾನ ಪಡೆದು ಆಟೋಟಗಳಲ್ಲಿ ಮಿಂಚಿದರು.
ಹೌಸ್ ಸದನಗಳ ಮುಖ್ಯಸ್ಥರ ನೇತೃತ್ವದಲ್ಲಿ ಸ್ಪಧಾ೯ ವಿಜೇತ ಎಲ್ಲ ಮಕ್ಕಳಗೆ ಪೆನ್, ನೋಟಬುಕ್ ಪ್ರಶಸ್ತಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಶಿಕ್ಷಕರಾದ ಲೋಹಿತ ಮಿಜಿ೯, ಸದಾಶಿವ ಸಿದ್ದಾಪುರ, ಈರಣ್ಣ ದೇಸಾಯಿ, ಜಿ.ಆರ್.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಪ್ರಶಿಕ್ಷಣಾಥಿ೯ ಅಕ್ಷತಾ ಮೂತ್ತೂರ ಇತರರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 12, 2026
    In ದಿನಪತ್ರಿಕೆ
  • ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
    In (ರಾಜ್ಯ ) ಜಿಲ್ಲೆ
  • ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!
    In (ರಾಜ್ಯ ) ಜಿಲ್ಲೆ
  • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು
    In (ರಾಜ್ಯ ) ಜಿಲ್ಲೆ
  • ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಜಯ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಿ.ವಿ.ರಾಮನ್ ಪ.ಪೂ ಕಾಲೇಜ್ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಗುರು ಸಂಗನಬಸವ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ & ಅಗ್ನಿ ಪ್ರವೇಶ
    In (ರಾಜ್ಯ ) ಜಿಲ್ಲೆ
  • ಬೊಗಸೆಯಲ್ಲಿ ಅರಳುವ ನಿನ್ನಂದದ ಮುಖಕೆ
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ.ಪೂ ಕಾಲೇಜು ಅತ್ಯುತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.