Author: editor.udayarashmi@gmail.com

ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾಹಿತಿ ವಿಜಯಪುರ: ಕರ್ನಾಟಕ ಸುವರ್ಣ-ಸಂಭ್ರಮ-೫೦ರ ಅದ್ದೂರಿಯಾಗಿ ಆಚರಣೆಯೊಂದಿಗೆ ಸಂಭ್ರಮವನ್ನು ವೈಶಿಷ್ಟ ಪೂರ್ಣವಾಗಿ ಆಯೋಜಿಸಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಸುವರ್ಣ-ಸಂಭ್ರಮ-೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹೊರನಾಡಿನಲ್ಲಿ ಆಯೋಜಿಸುವ ಕಾರ್ಯಕ್ರಮ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದ ವಿಜಯಪುರ ಸೇರಿದಂತೆ ರಾಯಚೂರ, ಮಂಗಳೂರು, ಮೈಸೂರು ೪ ಗಡಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬೆಳಗಾವಿ ವಿಭಾಗದ ಪ್ರಥಮ ಕಾರ್ಯಕ್ರಮವಾಗಿದೆ.ಜಿಲ್ಲೆಯಲ್ಲಿ ಆಯೋಜಿಸುವ ಕಾರ್ಯಕ್ರಮವನ್ನು ಅತ್ಯಂತ ವೈಶಿಷ್ಟಪೂರ್ಣವಾಗಿ ಹಮ್ಮಿಕೊಂಡಿದ್ದು, ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆಗಸ್ಟ ೨೮ ರಂದು ಮಾನ್ಯ ಮುಖ್ಯ ಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕರ್ನಾಟಕದ ಹಿರಿಯ ಚೇತನಗಳಾದ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ,…

Read More

ವೀಣಾಂತರಂಗ “- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ತಲೆಮಾರುಗಳ ಅಂತರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಅಜ್ಜ ಮೊಮ್ಮಗನ ಸಂವಾದದ ವಿಷಯವೊಂದು ಮನಸ್ಸಿಗೆ ಬಹಳಷ್ಟು ಹಿಡಿಸಿ ನನ್ನ ಭಾವನೆಗಳನ್ನು ಕೂಡ ಅದರಲ್ಲಿ ಬೆರೆಸಿ ತಲೆಮಾರುಗಳ ಅಂತರದ ಒಂದು ಸುಂದರ ಚಿತ್ರಣವನ್ನು ನಿಮ್ಮ ಮುಂದಿರಿಸಿದ್ದೇನೆ. ಹರೆಯದ ಯುವಕನೊಬ್ಬ ತನ್ನ ಅಜ್ಜನನ್ನು”. ಅದು ಹೇಗೆ ನೀವು ತಂತ್ರಜ್ಞಾನವಿಲ್ಲದ ಸಮಯದಲ್ಲಿ ಜೀವನ ಸಾಗಿಸುತ್ತಿದ್ದಿರಿ ಎಂದು ನನಗೆ ಸೋಜಿಗವಾಗುತ್ತದೆ ಅಜ್ಜ! ಕಂಪ್ಯೂಟರ್, ಟಿವಿ, ಇಂಟರ್ನೆಟ್, ಕಾರುಗಳು, ಏರ್ ಕಂಡೀಷನರ್ಗಳು, ಮೊಬೈಲ್ಗಳು, ವಿವಿಧ ಬಗೆಯ ವಿದ್ಯುನ್ಮಾನ ಯಂತ್ರಗಳು ಇಲ್ಲದೆ ಅದು ಹೇಗೆ ಅಷ್ಟು ವರ್ಷಗಳ ಕಾಲ ನೀವು ಜೀವಿಸಿದಿರಿ ಎಂದು ನೆನೆದರೆ ಆಶ್ಚರ್ಯವಾಗುತ್ತದೆ ಎಂದು ಹೇಳಿದ. ನಸುನಗುತ್ತಾ ಅಜ್ಜ “ಯಾವ ರೀತಿ ಇಂದಿನ ಪೀಳಿಗೆಯ ನೀವು ಪ್ರಾರ್ಥನೆ ಮಾಡದೆ, ಸಹಾನುಭೂತಿ ಇಲ್ಲದೆ, ಗೌರವಾದರೆಗಳಿಲ್ಲದೆ, ಮೌಲ್ಯಯುತ ಶಿಕ್ಷಣವಿಲ್ಲದೆ, ಮಾನವೀಯಅಂತಃಕರಣವಿಲ್ಲದೇ, ಒಳ್ಳೆಯ ವಿಚಾರಧಾರೆಗಳಿಲ್ಲದೆ ಲಜ್ಜೆಗಳಿಲ್ಲದೆ ವ್ಯಕ್ತಿತ್ವರಹಿತರಾಗಿ ಬದುಕುತ್ತಿರುವಿರೋ ಅಂತೆಯೇ ನಾವು ಬದುಕಿದ್ದೆವು” ಎಂದು ಉತ್ತರಿಸಿದರು . ಮತ್ತೆ ಮುಂದುವರೆದು…

Read More

ಕೆಂಭಾವಿ: ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಯಾದ ಕಾಶೀನಾಥ್ ನಾಟಿಕಾರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಪದಾಧಿಕಾರಿಗಳ ಆಯ್ಕೆ : ಕೆಂಭಾವಿ ಹೋಬಳಿಯ ಅಧ್ಯಕ್ಷನ್ನಾಗಿ ಪರಶುರಾಮ್. ಎಮ್.ಭೋನ್ಹಾಳ ಹಾಗೂ ಉಪಾಧ್ಯಕ್ಷನ್ನಾಗಿ ರವಿ. ಮಾಳೊಳ್ಳಿಕ್ಕರ್(ಚಿಕ್ಕಣ್ಣ) ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷೆ ಪರಶುರಾಮ್. ಎಮ್. ಭೋನ್ಹಾಳ ಮಾತನಾಡಿ ಬಡವರ ನೊಂದವರ ಹಾಗೂ ದಲಿತರ ದ್ವನಿಯಾಗಲಿದೆ ಪಟ್ಟಣದ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುವುದು .ನಮ್ಮ ದಲಿತ ಸಮುದಾಯದ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಯನ್ನು ನಮ್ಮ ಸಂಘಟನೆ ಖಂಡಿಸಲಿದೆ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಪುರಸಭೆ ಸದ್ಯಸ ಶಿವಪ್ಪ ಕಂಬಾರ, ಬಸವರಾಜ್…

Read More

ಢವಳಗಿ: ಸೋಲು ಮುಂದಿನ ಸಾಧನೆಯ ಹಾದಿಯನ್ನಾಗಿಸಿಕೊಂಡು ವಿದ್ಯಾರ್ಥಿಗಳು ಸೋಲು-ಗೆಲುವನ್ನು ಅನುಸರಿಸಿಕೊಂಡು ಆಟದಲ್ಲಿ ಮುನ್ನಡೆಯಬೇಕು. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಆಟವಾಡಬೇಕು ಎಂದು ದೈಹಿಕ ಪರಿವೀಕ್ಷಕ ಬಿ ವಾಯ್ ಕವಡಿ ಹೇಳಿದರು.ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಅಗಸ್ಟ 6 ಮಂಗಳವಾರದಂದು ಹಮ್ಮಿಕೊಂಡ ಢವಳಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದರು.ಮುಖ್ಯ ಅತಿಥಿಯಾದ ಸುಭಾಷ ಗುಡಿಮನಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಭ್ಯಾಸದ ಜೊತೆಗೆ ಕ್ರೀಡೆಯು ಮುಖ್ಯವಾಗಿದೆ. ಆಟದಲ್ಲಿ ಸೋಲು-ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದರೆ ಮಾತ್ರ ನಿಜವಾದ ಆಟಗಾರ ಎಂದು ಮಾತನಾಡಿದರು.ಢವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದ್ರಾಕ್ಷಾಯಿಣಿ ಮೇಲಿನಮನಿ ಕ್ರೀಡಾಕೂಟವನ್ನು ಗುಂಡು ಎಸೆಯುವುದರ ಮುಖಾಂತರ ಚಾಲನೆ ನೀಡಿದರು.ಬಸವ ಸಮಿತಿಯ ಉಪಾಧ್ಯಕ್ಷ ನಾನಾಗೌಡ ಕೊಣ್ಣುರ ಧ್ವಜಾರೋಹಣ ನೆರವೇರಿಸಿದರು.ಶಿಕ್ಷಣ ಸಂಯೋಜಕ ಡಿ ವಾಯ್ ಗುರಿಕಾರ, ಎಮ್ ಎಸ್ ಗುರಿಕಾರ, ಎಮ್ ಎಸ್ ಮಾಕೋಂಡ, ಜಿ ಎಸ್ ಕೋರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಹೀರೆಮಠ, ಉಪಾಧ್ಯಕ್ಷ ಸುರೇಶಗೌಡ…

Read More

ವಿಜಯಪುರ: ನಗರಕ್ಕೆ ಆಗಮಿಸಿದನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಂಗಳೂರಿನ, ಎ.ಡಿ.ಜಿ.ಪಿ ಅರುಣ ಚಕ್ರವರ್ತಿ ಐ.ಪಿ.ಎಸ್ ಅವರನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರ ಸಮ್ಮುಖದಲ್ಲಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಾವು ರಚಿಸಿದ “ಅಂಬೇಡ್ಕರ್ ಮಾರ್ಗ ” ಎಂಬ ಪುಸ್ತಕವನ್ನು ನೀಡಿ ಗೌರವಿಸಿದರು.ಅದಕ್ಕೆ ಎ.ಡಿ.ಜಿ.ಪಿ ಅರುಣ್ ಚಕ್ರವರ್ತಿ ಐ. ಪಿ. ಎಸ್ ಅವರು ಸಂತಸ ವ್ಯಕ್ತಪಡಿಸಿ, ಈ ಪುಸ್ತಕವನ್ನು ಇಂಗ್ಲೀಷಗೆ ತಾರ್ಜುಮೆ ಮಾಡಿಸಿದರೆ ಒಳ್ಳೆಯದು ಎಂದು ಶುಭ ಹಾರೈಸಿದರು.

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಪ್ರಾರಂಭಿಸಲಾಗಿರುವ ಶ್ರವಣಶಾಸ್ತ್ರ ಮತ್ತು ಮಾತು ಕಲಿಕೆ(Audiography And Speech Therapy) ಕೇಂದ್ರವನ್ನು ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಸೋಮವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಅಮೆರಿಕಾ ಮೂಲದ ಕಂಪನಿಯಿಂದ ರೂ. 13 ಲಕ್ಷ ವೆಚ್ಚದ ವಿಶ್ವದರ್ಜೆಯ ಅತ್ಯಾಧುನಿಕ ಯಂತ್ರ ಬೇರಾ (Brainnsten Evoked Response Audiometry) ವಿಶೇಷ ಮಿದುಳುಬಳ್ಳಿಯ ನರಗಳ ಶ್ರವಣ ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದ್ದು, ಇದರಿಂದ ನವಜಾತ ಶಿಶುಗಳ ಕಿವುಡುತನ ತಪಾಸಣೆಗೆ ನೇರವಾಗಲಿದೆ ಎಂದು ಹೇಳಿದರು.ಈ ವಿಶೇಷ ಯಂತ್ರಗಳ ಮೂಲಕ ಹುಟ್ಟಿನಿಂದ ಕಿವುಡುತನ, ಕಿವಿಯ ಸೋಂಕಿನಿಂದ ನರದೌರ್ಬಲ್ಯ, ಹಿರಿಯ ನಾಗರಿಕರರಲ್ಲಿ ಕಾಯಿಲೆಗಳಿಂದ ಉಂಟಾಗುವ ಕಿವುಡುತನ ತಪಾಸಣೆಗೆ ಸಹಾಯಕವಾಗಲಿದೆ. ಮುಂಬರುವ ದಿನಗಳಲ್ಲಿ ಹುಟ್ಟಿನಿಂದ ಇರುವ ಕಿವುಡುತನದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಕಾಂಕ್ಲಿಯರ ಇಂಪ್ಲಾಂಟ್ ಯೋಜನೆಯನ್ನು ಪ್ರಾರಂಭಿಸಲಾಗುವುದು. ವಿಮಾ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ…

Read More

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಷಡ್ಯಂತ್ರಕ್ಕೆ ನಾವು ಮಣಿಯುವುದಿಲ್ಲ. ಜನರ ಬಳಿಗೆ ಹೋಗಿ ವಾಸ್ತವವನ್ನು ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಬಿಜೆಪಿಯು ಸರ್ಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ. ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದ ಬೆಂಬಲಕ್ಕೆ ಬರುತ್ತಿಲ್ಲ. ಬಜೆಟ್‌ನಲ್ಲಿ ರಾಜ್ಯದ ವಿರುದ್ಧ ತಾರತಮ್ಯ ಮಾಡಿದೆ, ಮತ್ತೊಂದೆಡೆ, ಹಿಂದಿನಂತೆ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನ ನಡೆಸುತ್ತಿದ್ದಾರೆ, ಆದರೆ, ಈಗ ಸಮಯ ಬದಲಾಗಿದೆ. ಕೇಂದ್ರ ಸರ್ಕಾರ ಮೊದಲಿನಷ್ಟು ಬಲಿಷ್ಠವಾಗಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ನಮಗೆ ವಿಶ್ವಾಸವಿದೆ, ಪಕ್ಷದಲ್ಲಿ ವಿಶ್ವಾಸವಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಗಳನ್ನು ರಾಜ್ಯದ ಜನತೆಗೆ ವಿವರಿಸಲಾಗುವುದು ಎಂದು ಹೇಳಿದರು.

Read More

ಅಕ್ಟೋಬರ್‌ನಲ್ಲಿ ಸಂಪುಟ ಪುನಾರಚನೆ ಸಾಧ್ಯತೆ | ಕಾರ್ಯವೈಖರಿ ಬದಲಾಯಿಸಿಕೊಳ್ಳದಿದ್ದರೆ ತಲೆದಂಡ | ೧೦ ಸಚಿವರಿಗೆ ಎಚ್ಚರಿಕೆ ಬೆಂಗಳೂರು: ಅಕ್ಟೋಬರ್ ತಿಂಗಳಿನಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ಇನ್ನೆರಡು ತಿಂಗಳುಗಳಲ್ಲಿ ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳದಿದ್ದರೆ ತಲೆದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಜೊತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಚಿವರ ಜೊತೆಗೆ ಮಹತ್ವದ ಸಬೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಈ ಸಂದೇಶ ರವಾನಿಸಿದ್ದಾರೆಂದು ತಿಳಿದುಬಂದಿದೆ.ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಸತ್ಯಶೋಧನಾ ಸಮಿತಿಯ ವರದಿ ಮತ್ತು ಗುಪ್ತಚರ ವರದಿಯನ್ನು ಆಧರಿಸಿ, ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.ಸಚಿವರು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದರೆ ಪಕ್ಷ 15 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ವೇಣುಗೋಪಾಲ್ ಹೇಳಿದ್ದಾರೆಂದು ವರದಿಗಳು ತಿಳಿಸಿವೆ.ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಸಾವು ಎಂದರೇನು?ಎಂತಹ ಪ್ರಶ್ನೆಇದು! ಎಲ್ಲರಿಗೂ ಗೊತ್ತು, ಸಾವು ಎಂದರೇನು ಅಂತ, ಈಕೆಗೆ ಗೊತ್ತಿಲ್ಲವೇ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ. ನಿಜ, ವೈಜ್ಞಾನಿಕ ಪರಿಭಾಷೆಯಲ್ಲಿ ಭೌತಿಕ ದೇಹ ತನ್ನೆಲ್ಲ ದೈಹಿಕ ಚಟುವಟಿಕೆಗಳನ್ನು,ಕ್ರಿಯೆಗಳನ್ನು ಶಾಶ್ವತವಾಗಿ ನಿಲ್ಲಿಸಿ ಅಂತಿಮವಾಗಿ ಉಸಿರು ದೇಹದಿಂದ ಹೊರ ಚೆಲ್ಲಿ ಜೀವರಹಿತವಾದಾಗ ಅದನ್ನು ಸಾವು ಎಂದು ಕರೆಯುತ್ತಾರೆ. ತಾಯಿಯ ಗರ್ಭದಿಂದ ಜನ್ಮ ತಾಳುವ ಮೂಲಕ ನಾವು ಹುಟ್ಟಿ ಜೀವನವನ್ನು ಆರಂಭಿಸಿದರೆ ಸಾವು ಎಂಬ ನಿಷ್ಟುರಸತ್ಯ ನಮ್ಮ ಅಂತಿಮ ದಿನದಂದು ಅನಾವರಣವಾಗುತ್ತದೆ. ಈ ಹುಟ್ಟು ಸಾವುಗಳ ನಡುವಿನ ದಿನಗಳನ್ನು ನಾವು ಬದುಕು ಎಂದು ಕರೆಯುತ್ತೇವೆ. ಆದರೆ ನಾವು ಬದುಕಿದ್ದಾಗಲೇ ಸಾಯುವ ಸ್ಥಿತಿಯನ್ನು ಏನೆನ್ನಬಹುದು? ಸತ್ತಂತ ಬದುಕು! ಇಲ್ಲವೇ ಬದುಕಿಯೂ ಸತ್ತಂತೆ! ಎಂದಲ್ಲವೇ?ನಿಜ ಅಂತಹ ಬದುಕನ್ನು ನಮ್ಮ ಸಮಾಜದ ಹಲವಾರು ಜನರು ‘ಇದು ಜೀವ, ಇದುವೇ ಜೀವನ’ ಎಂಬಂತೆ ಸಾಗಿಸಿ ಬಿಡುತ್ತಾರೆ. ಹಾಗಾದರೆ ಬದುಕಿಯೂ ಸತ್ತಂತೆ ಎಂದರೆ ಏನು? ಮನುಷ್ಯ…

Read More

ಇಂಡಿಯಲ್ಲಿ ಮಧ್ಯವರ್ಜನ ಶಿಬಿರ ಸಮಾರೋಪ | ಕುಡಿತದ ಚಟ ಬಿಟ್ಟ ೭೦೦ ಜನರು ಇಂಡಿ: ಯುವಜನರು ಮಧ್ಯಪಾನ, ಧುಮಪಾನದಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.ಪಟ್ಟಣದ ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನ ಜಾಗೃತಿ ವೇದಿಕೆಯಿಂದ ನಡೆದ ಇಂಡಿ ತಾಲೂಕಿನ ೧೮೨೭ ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಜನರನ್ನು ಮಧ್ಯಪಾನದಿಂದ ದೂರವಿಡುವ ಆಶಯದೊಂದಿಗೆ ಮಧ್ಯವರ್ಜನ ಶಿಬಿರಗಳಿಗೆ ಹೆಚ್ಚು ಆಧ್ಯತೆ ನೀಡಿದ್ದಾರೆ. ಆ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದ ಸ್ವಾಸ್ಥ್ಯ ಸಂಕಲ್ಪ ತೊಟ್ಟಿದ್ದಾರೆ. ನನ್ನಲ್ಲಿ ಒಬ್ಬ ನವ ಜೀವನ ಸಮಿತಿ ಸದಸ್ಯ ಬಂದು ಮಾತನಾಡಿದರೆ ಅವರಿಗೆ ತುಂಬಾ ಸಂತೋಷವಾಗುತ್ತದೆ ಎಂಬುದು ಶ್ರೀ ವೀರೇಂದ್ರ ಹೆಗಡೆಯವರ ಆಶಯ ಎಂದು ಹೇಳಿದರು.ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೇವಲ ಅರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಹತ್ತಾರು ಸಮಾಜಮುಖಿ ಜನಪರ ಕಾರ್ಯಕ್ರಮ ನಡೆಸುತ್ತಿದೆ. ಬಡ ಮಹಿಳೆಯರಿಗೆ…

Read More