ಕೆಂಭಾವಿ: ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಯಾದ ಕಾಶೀನಾಥ್ ನಾಟಿಕಾರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ : ಕೆಂಭಾವಿ ಹೋಬಳಿಯ ಅಧ್ಯಕ್ಷನ್ನಾಗಿ ಪರಶುರಾಮ್. ಎಮ್.ಭೋನ್ಹಾಳ ಹಾಗೂ ಉಪಾಧ್ಯಕ್ಷನ್ನಾಗಿ ರವಿ. ಮಾಳೊಳ್ಳಿಕ್ಕರ್(ಚಿಕ್ಕಣ್ಣ) ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷೆ ಪರಶುರಾಮ್. ಎಮ್. ಭೋನ್ಹಾಳ ಮಾತನಾಡಿ ಬಡವರ ನೊಂದವರ ಹಾಗೂ ದಲಿತರ ದ್ವನಿಯಾಗಲಿದೆ ಪಟ್ಟಣದ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುವುದು .ನಮ್ಮ ದಲಿತ ಸಮುದಾಯದ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಯನ್ನು ನಮ್ಮ ಸಂಘಟನೆ ಖಂಡಿಸಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಸದ್ಯಸ ಶಿವಪ್ಪ ಕಂಬಾರ, ಬಸವರಾಜ್ ಕಕ್ಕೇರಾ, ಜುಮ್ಮಣ್ಣ ಗುಡಿಮನಿ, ಭೀಮಣ್ಣ ಖ್ಯಾತನಾಳ, ವಿರೂಪಾಕ್ಷ ಕಚಕನೂರ, ಚನ್ನಬಸಪ್ಪ ತಾಳೊಳ್ಳಿ, ಶಿವಲಿಂಗ ಮಾರನೊಳ, ಸಾಯಬಣ್ಣ ಎಂಟಮನ್, ಲಕ್ಶ್ಮಣ ಬಸರಿಗಿಡ, ಮಂಜುನಾಥ್ ಮಲ್ಲಾ ಹಾಗೂ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

