ಇಂಡಿಯಲ್ಲಿ ಮಧ್ಯವರ್ಜನ ಶಿಬಿರ ಸಮಾರೋಪ | ಕುಡಿತದ ಚಟ ಬಿಟ್ಟ ೭೦೦ ಜನರು
ಇಂಡಿ: ಯುವಜನರು ಮಧ್ಯಪಾನ, ಧುಮಪಾನದಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ಪಟ್ಟಣದ ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನ ಜಾಗೃತಿ ವೇದಿಕೆಯಿಂದ ನಡೆದ ಇಂಡಿ ತಾಲೂಕಿನ ೧೮೨೭ ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜನರನ್ನು ಮಧ್ಯಪಾನದಿಂದ ದೂರವಿಡುವ ಆಶಯದೊಂದಿಗೆ ಮಧ್ಯವರ್ಜನ ಶಿಬಿರಗಳಿಗೆ ಹೆಚ್ಚು ಆಧ್ಯತೆ ನೀಡಿದ್ದಾರೆ. ಆ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದ ಸ್ವಾಸ್ಥ್ಯ ಸಂಕಲ್ಪ ತೊಟ್ಟಿದ್ದಾರೆ. ನನ್ನಲ್ಲಿ ಒಬ್ಬ ನವ ಜೀವನ ಸಮಿತಿ ಸದಸ್ಯ ಬಂದು ಮಾತನಾಡಿದರೆ ಅವರಿಗೆ ತುಂಬಾ ಸಂತೋಷವಾಗುತ್ತದೆ ಎಂಬುದು ಶ್ರೀ ವೀರೇಂದ್ರ ಹೆಗಡೆಯವರ ಆಶಯ ಎಂದು ಹೇಳಿದರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೇವಲ ಅರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಹತ್ತಾರು ಸಮಾಜಮುಖಿ ಜನಪರ ಕಾರ್ಯಕ್ರಮ ನಡೆಸುತ್ತಿದೆ. ಬಡ ಮಹಿಳೆಯರಿಗೆ ಸಂಘಗಳ ರೂಪದಲ್ಲಿ ಸಹಾಯ ಮಾಡುವದು, ಮಧ್ಯವರ್ಜನ ಶಿಬಿರ,ಕೆರೆಗಳ ಅಭಿವೃದ್ದಿ ಯಂತಹ ಹತ್ತಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಯುವ ಜನರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು ಇಂತಹ ಕಾರ್ಯಕ್ರಮಗಳ ಮೂಲಕ ಹೊಸ ಜೀವನ ರೂಪಿಸಿಕೊಳ್ಳಿ ಎಂದರು.
ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಪ್ರಕಾಶ ಬಿರಾದಾರ ಮಾತನಾಡಿ ಹಲವಾರು ದಾನಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೆರವಿನೊಂದಿಗೆ ಈ ಶಿಬಿರ ಯಶಸ್ವಿಯಾಗಿ ನಡೆಯಿತು. ಜನರು ವ್ಯಸನಮುಕ್ತ ಜೀವನ ಸಾಗಿಸಲು ಇದೊಂದು ಸುವರ್ಣಾಕಾಶ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ವಿಜಯಪುರದ ಯೋಜನಾ ಕಚೇರಿ ನಿರ್ದೇಶಕ ಸಂತೋಷಕುಮಾರ, ನಟರಾಜ, ಸರಸ್ವತಿ ಹಾದಿಮನಿ ಮಾತನಾಡಿದರು.
ಜನ ಜಾಗೃತಿ ಸದಸ್ಯ ವಿಠಲ ಆಚಾರ್ಯ, ರುದ್ರಪ್ಪಾ ಪೂಜಾರಿ, ಜನಜಾಗೃತಿ ಸಮಿತಿ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಬೇಟಗೇರಿ ವೇದಿಕೆಯ ಮೇಲಿದ್ದರು.
ಸಮಾರಂಭದಲ್ಲಿ ಭಾರತಿ ಮಾಳಾಬಾಗಿ, ಜಯಶ್ರೀ ಪತ್ತಾರ, ನಿವೃತ್ತ ಪ್ರಾಚಾರ್ಯೆ ಶೈಲಜಾ ತೆಲ್ಲೂರ ಮತ್ತಿತರಿದ್ದರು.

