Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬದುಕಿಯೂ ಸತ್ತಂತೆ?.. ಒಂದು ವಿಸ್ತೃತ ವಾದ
ವಿಶೇಷ ಲೇಖನ

ಬದುಕಿಯೂ ಸತ್ತಂತೆ?.. ಒಂದು ವಿಸ್ತೃತ ವಾದ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

ಸಾವು ಎಂದರೇನು?
ಎಂತಹ ಪ್ರಶ್ನೆಇದು! ಎಲ್ಲರಿಗೂ ಗೊತ್ತು, ಸಾವು ಎಂದರೇನು ಅಂತ, ಈಕೆಗೆ ಗೊತ್ತಿಲ್ಲವೇ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ.

ನಿಜ, ವೈಜ್ಞಾನಿಕ ಪರಿಭಾಷೆಯಲ್ಲಿ ಭೌತಿಕ ದೇಹ ತನ್ನೆಲ್ಲ ದೈಹಿಕ ಚಟುವಟಿಕೆಗಳನ್ನು,ಕ್ರಿಯೆಗಳನ್ನು ಶಾಶ್ವತವಾಗಿ ನಿಲ್ಲಿಸಿ ಅಂತಿಮವಾಗಿ ಉಸಿರು ದೇಹದಿಂದ ಹೊರ ಚೆಲ್ಲಿ ಜೀವರಹಿತವಾದಾಗ ಅದನ್ನು ಸಾವು ಎಂದು ಕರೆಯುತ್ತಾರೆ. ತಾಯಿಯ ಗರ್ಭದಿಂದ ಜನ್ಮ ತಾಳುವ ಮೂಲಕ ನಾವು ಹುಟ್ಟಿ ಜೀವನವನ್ನು ಆರಂಭಿಸಿದರೆ ಸಾವು ಎಂಬ ನಿಷ್ಟುರಸತ್ಯ ನಮ್ಮ ಅಂತಿಮ ದಿನದಂದು ಅನಾವರಣವಾಗುತ್ತದೆ. ಈ ಹುಟ್ಟು ಸಾವುಗಳ ನಡುವಿನ ದಿನಗಳನ್ನು ನಾವು ಬದುಕು ಎಂದು ಕರೆಯುತ್ತೇವೆ.

ಆದರೆ ನಾವು ಬದುಕಿದ್ದಾಗಲೇ ಸಾಯುವ ಸ್ಥಿತಿಯನ್ನು ಏನೆನ್ನಬಹುದು? ಸತ್ತಂತ ಬದುಕು! ಇಲ್ಲವೇ ಬದುಕಿಯೂ ಸತ್ತಂತೆ! ಎಂದಲ್ಲವೇ?
ನಿಜ ಅಂತಹ ಬದುಕನ್ನು ನಮ್ಮ ಸಮಾಜದ ಹಲವಾರು ಜನರು ‘ಇದು ಜೀವ, ಇದುವೇ ಜೀವನ’ ಎಂಬಂತೆ ಸಾಗಿಸಿ ಬಿಡುತ್ತಾರೆ. ಹಾಗಾದರೆ ಬದುಕಿಯೂ ಸತ್ತಂತೆ ಎಂದರೆ ಏನು?

ಮನುಷ್ಯ ಸ್ವಭಾವತಃ ಸಂಘ ಜೀವಿ… ಜೊತೆಗೆ ಆಧ್ಯಾತ್ಮಿಕ ಜೀವಿಯೂ ಹೌದು. ದೇವರ ಅಸ್ತಿತ್ವವನ್ನು ಹುಡುಕುತ್ತಾ ಗುಡ್ಡ, ಬೆಟ್ಟ, ನದಿ, ಕಣಿವೆಗಳಲ್ಲಿ ನಡೆದಾಡಿದವನು, ನಿಸರ್ಗದ ಸವಿಯ ಅನುಭವಿಸಿದವನು. ಅಂತಹ ವ್ಯಕ್ತಿ ಒಂದೇ ವಿಷಯಕ್ಕೆ ಅಂಟಿಕೊಂಡು ನಿಂತಲ್ಲಿಯೇ ನಿಂತರೆ ಸಣ್ಣ ಮಡುವಾಗುತ್ತಾನೆ, ಕೆಟ್ಟ ಯೋಚನೆಗಳೆಂಬ ಕ್ರಿಮಿ ಕೀಟಗಳ ವಾಸಸ್ಥಾನವಾಗುತ್ತಾನೆ. ಕಲ್ಮಶವಾಗುತ್ತಾನೆ ಕೊನೆಗೆ ಬಳಕೆಗೆ ಯೋಗ್ಯವೆನಿಸದ ಕೊಳಚೆ ನೀರಾಗುತ್ತಾನೆ. ಮನುಷ್ಯ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಆಗಾಗ ನಿಸರ್ಗದ ಸವಿ ಸವಿಯಲು, ಈ ಸೃಷ್ಟಿಯ ಅಗಾಧತೆಯನ್ನು ಅರಿಯಲು, ಬದುಕಿನ ಸವಿ ಗಾನದ ಅರ್ಥ ಕಂಡುಕೊಳ್ಳಲು, ಲೋಕದ ರೀತಿ ನೀತಿಗಳನ್ನು ತಿಳಿಯಲು, ಜ್ಞಾನ ಸಂಪಾದಿಸಲು, ವಿದ್ಯೆ ಕಲಿಯಲು, ಜನರ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಲು ನೀವು ಪಯಣಿಸಲೇ ಬೇಕು. ಇಲ್ಲದೆ ಹೋದರೆ ನೀವು ಸತ್ತಂತಹ ಬದುಕನ್ನು ಜೀವಿಸುತ್ತಿದ್ದೀರಿ ಎಂದರ್ಥ.

ನಿಮ್ಮ ಮನದ ದನಿಗೆ ಕಿವಿಯಾಗದಿದ್ದರೆ, ನಿಮ್ಮ ಸಂತೋಷಕ್ಕೆ ಧ್ವನಿಯಾಗದಿದ್ದರೆ, ಬೇರೆಯವರ ಸಂತಸಕ್ಕಾಗಿ ನಿಮ್ಮ ಆತ್ಮಾಭಿಮಾನವನ್ನು ಕೊಂದು ಕೊಂಡರೆ, ನಿಮ್ಮ ಸುಖ ಸಂತೋಷಗಳಿಗೆ ನೀವೇ ಹೆಗಲಾಗದೆ ಬೇರೆಯವರಲ್ಲಿ ನಿಮ್ಮ ಸುಖ ಸಂತೋಷ ನಿರೀಕ್ಷಿಸುವವರಾದರೆ,ಬೇರೆಯವರು ನಿಮ್ಮ ಸಹಾಯಕ್ಕೆ ಬಂದಾಗಲೂ ಅದನ್ನು ತಿರಸ್ಕರಿಸುವವರು ನೀವಾದರೆ …. ನೀವು ಮಾನಸಿಕವಾಗಿ ಇದ್ದೂ ಸತ್ತಂತೆ ಬದುಕುತ್ತಿರುವಿರಿ ಎಂದರ್ಥ.

ದುಷ್ಟಚಟಗಳಿಗೆ ನೀವು ದಾಸರಾದರೆ, ಅವುಗಳಿಂದ ಮುಕ್ತಿ ಪಡೆಯಲು ಪ್ರಯತ್ನಿಸದಿದ್ದರೆ, ನಿಮ್ಮ ದೈನಂದಿನ ಸತ್ವರಹಿತ ಬದುಕಿನಲ್ಲಿ ಬದಲಾವಣೆ ತರದಿದ್ದರೆ, ಬದುಕಿನ ಬಣ್ಣದ ಕನಸುಗಳಿಗೆ ನನಸು ಮಾಡಲು ಪ್ರಯತ್ನಿಸದಿದ್ದರೆ, ವಿವಿಧ ರಂಗಿನ ಬಟ್ಟೆ ತೊಡದಿದ್ದರೆ, ಅರಿಯದ ಜನರೊಂದಿಗೆ ಮಾತಿಗೆ ತೊಡಗದಿದ್ದರೆ, ಬಾವಿಯ ಕಪ್ಪೆಯಂತೆ ನೀವು ಬದುಕಿದರೆ…. ನೀವು ಮಾನಸಿಕವಾಗಿ ಇದ್ದೂ ಸತ್ತಂತಹ ಬದುಕನ್ನು ಬದುಕುತ್ತಿರುವಿರಿ ಎಂದರ್ಥ.

ಬದುಕಿನ ವಿವಿಧ ಭಾವಗಳನ್ನು ಅನುಭವಿಸುವ, ಅದರ ಏರಿಳಿತಗಳನ್ನು ಸವಿಯುವ, ಖುಷಿಗೆ ಕಣ್ಣರಳಿಸುವ, ದುಃಖಕ್ಕೆ ನರಳುವ, ಸೋಲನ್ನು ಅನುಭವಿಸಿದರೂ ಶರಣಾಗತರಾಗದೆ ಗೆಲುವಿಗೆ ಹಪಹಪಿಸುವ ಅಂತಿಮವಾಗಿ ಗೆದ್ದಾಗ ಹೃದಯ ಬಡಿತದ ಏರಿಕೆಯಲ್ಲಿ ಸಂತಸ ಸಂಭ್ರಮದಿಂದ ಭೋರ್ಗರೆಯುತ್ತ ಮರುಕ್ಷಣದಲ್ಲೇ ಅಷ್ಟೇ ವಿನಯದಿಂದ ಧನ್ಯತೆಯಿಂದ ಜಯವನ್ನು ಸ್ವೀಕರಿಸುವ ಬದುಕನ್ನು ನೀವು ಅನುಭವಿಸದಿದ್ದರೆ….. ನೀವು ಮಾನಸಿಕವಾಗಿ ಇದ್ದೂ ಸತ್ತಂತೆ ಬದುಕುತ್ತಿದ್ದೀರಿ ಎಂದು ಅರ್ಥ.

ಜೀವನದಲ್ಲಿ ಕಷ್ಟ ನೋವು ನಿರಾಶೆಗಳ ಸುಳಿಗೆ ಸಿಲುಕಿದಾಗ ಅದರಿಂದ ಹೊರಬರುವ ಅವಕಾಶ ಇದ್ದಾಗಲೂ ಕೂಡ ಸೋಲೊಪ್ಪಿಕೊಂಡರೆ, ನೀವು ಮಾಡುತ್ತಿರುವ ತೃಪ್ತಿಯಿಲ್ಲದ ಕೆಲಸದಿಂದ ನೀವು ಹೊರಬರದಿದ್ದರೆ, ಛಲದಿಂದ ಎದುರಿಸದೆ ಸೋಲನ್ನು ಒಪ್ಪಿಕೊಂಡರೆ, ನೀವು ಕಂಡ ಕನಸುಗಳ ನನಸಾಗಿಸಲು ಅವುಗಳ ಬೆಂಬತ್ತದಿದ್ದರೆ, ನಿಮ್ಮನ್ನು ನೀವು ಅರಿಯುವ ಪ್ರಯತ್ನ ಮಾಡದಿದ್ದರೆ, ತಿಳಿದವರು ಹೇಳುವ ಬುದ್ಧಿವಾದಕ್ಕೆ ಕಿವಿಗೊಡದಿದ್ದರೆ…. ನೀವು ದೈಹಿಕವಾಗಿ ಬದುಕಿಯೂ ಮಾನಸಿಕವಾಗಿ ಸಾಯುತ್ತಿರುವಿರಿ ಎಂದರ್ಥ.

ತುಂಬಾ ದೀರ್ಘವಾಯಿತಲ್ಲವೇ ಸ್ನೇಹಿತರೆ!
ತ್ಯಾಗ ಬದುಕಿನ ಬಹುದೊಡ್ಡ ಮೌಲ್ಯ ನಿಜ, ಆದರೆ ನಮ್ಮ ಅಸ್ತಿತ್ವವನ್ನು ಪಣಕ್ಕಿಟ್ಟು, ನಮ್ಮ
ಆತ್ಮಗೌರವವನ್ನು ಕೊಂದುಕೊಂಡು ಬದುಕಿದರೆ ಏನು ಪ್ರಯೋಜನ? ಅದು ಬದುಕಿದ್ದೂ ಸತ್ತಂತೆ ಅಲ್ಲವೇ?

ಚಿಕ್ಕವಳಿದ್ದಾಗ ನನಗೆ ತುಂಬಾ ಇಷ್ಟವಾದ, ನನ್ನೆಲ್ಲಾ ನೋಟ್ ಪುಸ್ತಕಗಳ ಒಳಪುಟದ ಮೇಲ್ಭಾಗದಲ್ಲಿ ನಾನು ಬರೆದುಕೊಳ್ಳುತ್ತಿದ್ದ ಒಂದು ನುಡಿ ಇದು.
” cowards die many times before their death, the valliant never taste death but once”.
ಇದರರ್ಥ ಹೇಡಿಗಳು ಬದುಕಿನಲ್ಲಿ ಹಲವಾರು ಬಾರಿ ಸಾಯುತ್ತಾರೆ… ಆದರೆ ಶೂರರಾದವರು ಕೇವಲ ಒಂದು ಬಾರಿ ಸಾವಿನ ರುಚಿ ನೋಡುತ್ತಾರೆ ಎಂದು.
ಬದುಕು ಒಡ್ಡುವ ಪ್ರತಿಯೊಂದು ಸಣ್ಣ ಸವಾಲಿಗೂ ಸಾಯುವಂತಹ ಮಾತನ್ನು ಹೇಳುತ್ತಾ ತಮ್ಮ ಹೇಡಿ ತನವನ್ನು ವ್ಯಕ್ತಪಡಿಸುತ್ತಾರೆ.ಇದು ಭೌತಿಕವಾದ ಸಾವಲ್ಲ ನಿಜ ಆದರೆ ಮಾನಸಿಕವಾಗಿ ಸತ್ತು ಸತ್ತು ಬದುಕುತ್ತಾರೆ. ಇದು ಸಲ್ಲದು.

ಬದುಕಿನ ಚೌಕಟ್ಟಿನಲ್ಲಿ ಸುಂದರವಾದ ಚಿತ್ರ ನಮ್ಮದಾಗಬೇಕು ಎಂಬ ಆಶಯದೊಂದಿಗೆ..

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.