Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಗ್ರಾಮೀಣ ಕೂಲಿಕಾರ್ಮಿಕರಿಗೆ ಯೋಜನೆಯಿಂದ ಮತ್ತಷ್ಟು ಅನುಕೂಲ | ಜಿಪಂ ಸಿಇಒ ರಿಷಿ ಆನಂದ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೂಲಿ ದರವನ್ನು ೩೭೦ ರಿಂದ ೩೮೨ ರೂ ಹೆಚ್ಚಿಸಲಾಗಿದೆ. ಮಹಿಳೆ ಮತ್ತು ಪುರುಷ ಕೂಲಿಕಾರ್ಮಿಕರಿಗೆ ಸಮಾನ ಕೂಲಿ ನೀಡುವ ವ್ಯವಸ್ಥೆ ಮುಂದುವರಿಯಲಿದ್ದು, ಕೂಲಿ ಮೊತ್ತವನ್ನು ಕೆಲಸ ಪೂರ್ಣಗೊಂಡ ದಿನಾಂಕದಿಂದ ಗರಿಷ್ಠ ೧೫ ದಿನಗಳೊಳಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.ವಿಬಿ-ಜಿ ರಾಮ್-ಜಿ ಯೋಜನೆಯು ಜುಲೈ ೧ರಿಂದ ದೇಶಾದ್ಯಂತ ಜಾರಿಗೊಂಡಿದ್ದು, ಜಿಲ್ಲೆಯಲ್ಲೂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಎಲ್ಲ ರೀತಿಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮಗಳ ಸಮಗ್ರ, ಗುಣಮಟ್ಟದ ಹಾಗೂ ಸ್ಯಾಚುರೇಷನ್ ಆಧಾರಿತ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೊಂಡಿದೆ. ಈ ಯೋಜನೆಯಡಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ಹಿಂದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಧನೆಗೈಯ್ಯುವವರಿಗೆ ಬಡತನ ಎಂದೂ ಅಡ್ಡಿ ಬರುವುದಿಲ್ಲ ಮತ್ತು ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ದಿಟ್ಟ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದೆಂಬುದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗೀತಾ ಮಿಸ್ಕಿನ್ (ಆಂಗ್ಲ ಮಾಧ್ಯಮ) ಇವಳು ಶೇ ೯೫.೪% ಅಂಕ ಪಡೆದು ಪ್ರಥಮ ಕಾಲೇಜಿಗೆ ಸ್ಥಾನ, ಅಶ್ವೀನಿ ಕುಂಬಾರ ಇವಳು ಶೇ. ೯೪.೮% ಅಂಕ ಗಳಿಸಿ ದ್ವೀತಿಯ ಸ್ಥಾನ ಹಾಗೂ ಶಂಕ್ರಮ್ಮ ನಾಗಠಾಣ ಇವಳು ಶೇ. ೮೭.೨೮%% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವಿಜಯಪುರ ನಗರ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಬಸನಗೌಡ. ಆರ್. ಪಾಟೀಲ (ಯತ್ನಾಳ) ಇವರು, ಕಾಲೇಜಿನ ಸಿ.ಡಿ.ಸಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು & ಕಾರ್ಯಕಾರಿಣಿ ಸದಸ್ಯರಿಂದ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ಭವನ ನವೀಕರಣ ಕಾರ್ಯಕ್ಕೆ ಆರ್ಥಿಕ ಸಹಾಯ ಅಥವಾ ನವೀಕರಣ ಮಾಡಬೇಕೆಂದು ಒತ್ತಾಯಿಸಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲರಿಗೆ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.ನಗರದ ಸೊಲ್ಲಾಪುರ ರಸ್ತೆಯಲ್ಲಿರೋ ಸಚಿವ ಎಂ ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕಾರಿಣಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.ಸಚಿವರಿಗೆ ಮನವಿ ನೀಡಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಅಧ್ಯಕ್ಷ ಅಶೋಕ ಯಡಳ್ಳಿ, ಶತಮಾನದ ಹೊಸ್ತಿಲಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಕಚೇರಿ ಪತ್ರಿಕಾ ಭವನವು ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದು, ಅದಕ್ಕೆ ತುರ್ತಾಗಿ ಕಾಯಕಲ್ಪ ಒದಗಿಸಲು ಮುಂದಾಗಬೇಕಿದೆ. ವಿಜಯಪುರ ಜಿಲ್ಲಾ ಪಂಚಾಯತ ರಸ್ತೆಯಲ್ಲಿರುವ, ಜಿಲ್ಲೆಯ ಪತ್ರಕರ್ತರ ಶಕ್ತಿಕೇಂದ್ರವಾಗಿರುವ ಈ…
ಕೊಲ್ಹಾರ ಕೃಷ್ಣಾ ನದಿಯ ಸೇತುವೆ ದುರಂತ | ಸೇತುವೆ ಮೇಲಿಂದ ಬುಧವಾರ ಬಿದ್ದಿದ್ದ ಟಿಪ್ಪರ್ ವಾಹನ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೃಷ್ಣಾ ನದಿಯ ಕೊರ್ತಿ–ಕೊಲ್ಹಾರ ಸೇತುವೆ ಮೇಲಿಂದ ಬುಧವಾರ ಬಿದ್ದಿದ್ದ ಟಿಪ್ಪರ್ ವಾಹನವನ್ನು ಶುಕ್ರವಾರ ಮಧ್ಯಾಹ್ನ ಬ್ರಹತ್ ಕ್ರೇನ್ ಸಹಾಯದಿಂದ ಮೇಲಕ್ಕೆ ತೆಗೆದರು.ಕೊಲ್ಹಾರ ಹಾಗೂ ಬೀಳಗಿ ಪೊಲೀಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೋಲಾಪೂರದಿಂದ ತರಿಸಿದ ಭಾರೀ ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.ಕ್ರೇನ್ ಚಾಲಕರ ಚಾಣಾಕ್ಷತನದಿಂದ ನದಿಯಲ್ಲಿ ಮುಳುಗಿದ್ದ ಟಿಪ್ಪರ್ ಅನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು. ಟಿಪ್ಪರ್ ವಾಹನ ಸಂಪೂರ್ಣವಾಗಿ ತುಂಡು-ತುಂಡಾಗಿರುವುದು ಕಂಡುಬಂದಿದೆ.ದುರಂತದಲ್ಲಿ ಮೃತಪಟ್ಟ ಚಾಲಕ ಸಂತೋಷ ಕೋಟಿ ಅವರ ಶವವನ್ನು ಕೂಡ ಹೊರತೆಗೆದಿದ್ದು, ದೇಹ ಸಂಪೂರ್ಣ ಚಪ್ಪಟೆಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಡಚಣ ಸೂರ್ಯ ಲಾಡ್ಜ್ ಸಮೀಪ ಭೀಕರ ಅಪಘಾತ | ಓರ್ವ ಮಹಿಳೆಗೆ ಗಂಭೀರ ಗಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಸೂರ್ಯ ಲಾಡ್ಜ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಲಭ್ಯವಾದ ಮಾಹಿತಿಯ ಪ್ರಕಾರ, ಸೂರ್ಯ ಲಾಡ್ಜ್ ಸಮೀಪ ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಈ ದುರ್ಘಟನೆ ನಡೆದಿದೆ. ದ್ವಿಚಕ್ರ ವಾಹನವು ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಪಘಾತದಲ್ಲಿ ಧುಮುಕನಾಳ ಗ್ರಾಮದ ನಿವಾಸಿಯಾದ 55 ವರ್ಷದ ದಿಲೀಪ್ ಪಾಟೀಲ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪತ್ನಿ 50 ವರ್ಷದ ಲಲಿತಾಬಾಯಿ ಪಾಟೀಲ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಚನಗಳಿಗಾಗಿ ಇದ್ದ ಶ್ರೀಮಂತಿಕೆಯನ್ನು ತ್ಯಜಿಸಿದವರು, ವಕೀಲಿ ವೃತ್ತಿಯನ್ನು ಬಿಟ್ಟವರು, ಮನೆಯನ್ನೇ ಮಾರಿ ಮುದ್ರಣಾಲಯ ತೆರೆದವರು, ಹರಕು ಅಂಗಿ ತೊಟ್ಟು ಹೊಸ ಪುಸ್ತಕ ನೀಡಿದವರು, ಕರುನಾಡಿನಲ್ಲಿ ವಚನಗಳ ಗುಡಿ ಕಟ್ಟಿ ಎಲ್ಲರ ಮನೆಮನಗಳಿಗೆ ವಚನಗಳ ಮುಟ್ಟಿಸಿದವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಪ್ರಾತ: ಸ್ಮರಣೀಯರು ಎಂದು ಮುಖ್ಯೋಪಾಧ್ಯಾಯ ಆಶು ಕವಿ ನಾರಾಯಣ ಶಾಸ್ತ್ರಿ ಹೇಳಿದರು.ಅವರು ಪಿ.ಎಂ.ಶ್ರೀ.ಕರ್ನಾಟಕ ಪಬ್ಲಿಕ್ ಶಾಲೆ ಕುಂಬಾರಹಳ್ಳದಲ್ಲಿ ನಡೆದ ಹಳಕಟ್ಟಿಯವರ ಜನ್ಮ ದಿನೋತ್ಸವದಲ್ಲಿ ಮಾತನಾಡುತ್ತಾ, ಮೊಟ್ಟ ಮೊದಲ ಬಾರಿಗೆ ವಚನಗಳನ್ನು ಮುದ್ರಿಸಿದ್ದು, ಇಂಗ್ಲಿಷ್ ಬಾಷೆಗೆ ಭಾಷಾಂತರಿಸಿದ್ದು, ವಚನ ಗಾಯನ ಮಾಡಿಸಿದ್ದು ತ್ಯಾಗಜೀವಿ ಹಳಕಟ್ಟಿಯವರು. ವಚನಗಳ ಉಳುವಿಗಾಗಿ ಉಳವಿಯತ್ತ ಸಾಗಿದ ಎಲ್ಲಾ ಶರಣಶರಣೆಯರ ವಚನಗಳನ್ನು ರಕ್ಷಿಸಿ ಜಗತ್ತಿಗೆ ವಚನಗಳ ಬೆಳಕನ್ನು ಹರಡಿದವರು. ನಾವೆಲ್ಲರೂ ಪ್ರತಿದಿನವೂ ವಚನಗಳನ್ನು ಓದುತ್ತಾ, ಆ ತತ್ತ್ವಗಳನ್ನು ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸಬೇಕಾದ ಶ್ರದ್ಧಾಂಜಲಿ ಎಂದು ಹೇಳಿದರು.ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ ಹಳಕಟ್ಟಿಯವರು ವಚನಗಳ ಬಟ್ಟೆಯನ್ನು ನೇಯ್ದರು. ಇಡೀ ಜೀವನವನ್ನು ವಚನಕ್ಕೆ ಅರ್ಪಿಸಿದರು. ಬಂದ ಅಧಿಕಾರವನ್ನು…
ಉದಯರಶ್ಮಿ ದಿನಪತ್ರಿಕೆ ಅಥಣಿ: ಚುನಾವಣಾ ಆಯೋಗ ಹಮ್ಮಿಕೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಭಾಗವಹಿಸಿ, ಮನೆಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣಾ ಆಯೋಗವು ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವನ್ನು ಜೂನ್ 30ರಿಂದ ಜುಲೈ 29ರವರೆಗೆ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಅಗತ್ಯ ನಮೂನೆಗಳನ್ನು (ಫಾರ್ಮ್) ವಿತರಿಸಲಿದ್ದಾರೆ. ಮತದಾರರು ಅವುಗಳನ್ನು ಸರಿಯಾಗಿ ಭರ್ತಿ ಮಾಡಿ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.ಯಾರಾದರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸದೇ ನಿರ್ಲಕ್ಷ್ಯ ವಹಿಸಿದರೆ, ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಯಾವುದೇ ನಿರ್ಲಕ್ಷ್ಯ ತೋರದೆ ಎಲ್ಲರೂ ಈ ಅಭಿಯಾನದಲ್ಲಿ ಸಕ್ರಿಯವಾಗಿ…
ಲೇಖನ- ಶೀತಲ್ ಹೆಗಡೆ’ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ಅಲ್ಲಲ್ಲಿ ತೇಪೆ ಹಾಕಿದ ಹರಿದ ಅಂಗಿ ಹಾಕಿದ್ದರೂ, ಕಳ್ಳಕಿಂಡಿಯ ಹಾಗೇ ಕಾಣ್ತಿರೋ ಮುರುಕಲು ಗುಡಿಸಲೊಳಗಿದ್ದರೂ, ತಲೆಗೆ ಎಣ್ಣೆ ಕಾಣದೇ ಸುಕ್ಕುಸುಕ್ಕಾದ ಕೂದಲು ಹೊಂದಿದ್ದರೂ, ಗುಡಿಸಲಿನ ಹೊರಗೆ ಎರಡು ಇಟ್ಟಂಗಿಗಳನ್ನಿಟ್ಟು ಅದರ ಮೇಲೆ ಅನ್ನ ಬೇಯಿಸಿಕೊಳ್ಳುತ್ತಿದ್ದರೂ, ಗಮ್ಮತ್ತಿಗೇನೂ ಕಡಿಮೆಯಿಲ್ಲ, ಅವರ ಮೊಗದಲ್ಲಿನ ನಗುವಿಗೆ ಬರವಿಲ್ಲ, ಆಡೋ ಕೀಟಲೆಗಳಿಗೆ ಕೊನೆಯಿಲ್ಲ ಎಂಬುದನ್ನು ನೋಡಿದಾಗ ಅನಿಸುತ್ತೆ ಹೊಟ್ಟೆತುಂಬ ಊಟಕ್ಕಿಲ್ಲದಿದ್ದರೂ ಅದೆಷ್ಟು ಖುಷಿಯಾಗಿ, ನೆಮ್ಮದಿಯಾಗಿ ಇದ್ದಾರಲ್ಲ ಎಂದು..!ಸಂತೋಷಕ್ಕೆ ದೊಡ್ಡ ದೊಡ್ಡ ಮಹಲುಗಳು ಬೇಕಿಲ್ಲ, ಪ್ರೀತಿಸುವ ಜೀವ, ಕಾಳಜಿ ಪಡುವ ಸಂಗಾತಿ, ಮನವನ್ನರಿತು ಮುದನೀಡುವ ಬೆಸುಗೆ ಬಾಂಧವ್ಯ ಇವಿದ್ದರೆ ಸಾಕು. “ಸ್ವರ್ಗಕ್ಕೆ ಮೂರೇ ಗೇಣು”. ಅರಮನೆ ಅಂದ ತಕ್ಷಣ ನೆನಪಾಗುವುದು, ದೊಡ್ಡ ದೊಡ್ಡ ಸುಂದರ ವಿನ್ಯಾಸದ ಗೋಡೆ, ಝಗಮಗಿಸುವ ಬೆಳಕಿನ ಮಿಂಚು, ಐಶಾರಾಮಿ ಜೀವನ. ಆದರೆ ಈ ಭವ್ಯತೆ ತಾಯಿ ತನ್ನ ಮಗುವಲ್ಲಿ ಕಾಣುವ ಮುಗ್ಧ ನಗುವಿಗೆ ಸಮಾನವಾ, ಮಗುವು ಅಮ್ಮನಲ್ಲಿ ಬಯಸುವ ಮಮತೆ, ಕಾಳಜಿ ಅವಳ ಲಾಲಿಹಾಡಿನ ಮೋಡಿಯಲ್ಲಿ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇವತ್ತಿನ ಮಾಹಿತಿ ಯುಗದಲ್ಲಿ ನಮಗೆ ಬೇಕಾದ ಬೇಡವಾದ ಹತ್ತು ಹಲವು ವಿಷಯಗಳು ನಮಗೆ ಮಾಹಿತಿಯ ರೂಪದಲ್ಲಿ ಲಭ್ಯವಾಗುತ್ತದೆ. ಈ ಹಿಂದೆ ಯಾವುದೇ ಹೊಸ ವಿಷಯವನ್ನು ನಮಗೆ ಪಾಲಕರು ಕಲಿಸುತ್ತಿದ್ದರು, ಪುಸ್ತಕಗಳ ಮೂಲಕ ವಿಷಯದ ಅರಿವಾಗುತ್ತಿತ್ತು ನಿಜ ಆದರೆ ಪುಸ್ತಕಗಳ ಲಭ್ಯತೆಯು ಕೂಡ ಅಷ್ಟೇ ಕಠಿಣವಾಗಿದ್ದು ಪುಸ್ತಕಗಳ ಮೂಲಕ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಅರಿವು ಬಹಳಷ್ಟು ಜನರಿಗೆ ಇರಲಿಲ್ಲ.ಮೊಬೈಲ್ ನಲ್ಲಿಯೇ ಜಗತ್ತನ್ನು ಕಾಣುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬ ಕುರಿತು ಪಾಲಕರಿಗೆ ಅರಿವು ಮೂಡಿಸಬೇಕಾಗಿದ್ದು ಮಕ್ಕಳ ನಡವಳಿಕೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಪಾಲಕರ ನಡವಳಿಕೆ ಹೇಗಿರಬೇಕು ಎಂಬುದು ಒಂದು ಸವಾಲಿನ, ಗೋಜಲಿನ ಸಂಗತಿಯೇ ಆಗಿದೆ.ಕೆಲ ದಶಕಗಳ ಹಿಂದೆ ಮಕ್ಕಳ ಮೇಲೆ ಪ್ರಭಾವ ಬೀರುವವರಲ್ಲಿಮೊದಲು ಪಾಲಕರು ನಂತರ ಶಿಕ್ಷಕರು ಮೂರನೆಯದಾಗಿ ಸ್ನೇಹಿತರು ಮತ್ತು ಕೊನೆಯದಾಗಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಮನೆಯಲ್ಲಿ ಪಾಲಕರು ಹೇಳಿದ ಮಾತೇ ಮೊದಲ ಮತ್ತು ಕೊನೆಯ…
