Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಕ್ರೀಡೆಗಳು ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಬೆಳವಣಗೆಗೆ ಸಹಕಾರಿಯಾಗಿದ್ದು, ಕ್ರೀಡೆಗಳು ನಾಯಕತ್ವದ ಗುಣ ಬೆಳೆಸುವುದಲ್ಲದೇ ಆರೋಗ್ಯವಂತ ಶರೀರವನ್ನುಂಟು ಮಾಡುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಅಪ್ಪಣ್ಣ ಕಲ್ಲೂರ ಹೇಳಿದರು.ತಾಲ್ಲೂಕಿನ ತಾಂಬಾ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಹಾಪ್ ಪಿಚ್ ಟೆನಿಸ್‌ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿ ಕ್ರಿಕೆಟ, ಕಬಡ್ಡಿ, ಖೋ ಖೋ, ಇಂತಹದ ಆಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಬಲಗೊಳ್ಳುತ್ತೆ. ಆದ್ದರಿಂದ ಆಸ್ಪತ್ರೆ ಹೋಗುವ ಪ್ರಮೇಯ ಬರುವುದಿಲ್ಲೆಂದು ಹೇಳಿದರು.ಶ್ರೀ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ನಿರ್ದೇಶಕ ಸಿದ್ದು ಹತ್ತಳ್ಳಿ ಮಾತನಾಡಿ, ಕ್ರೀಡಾ ಕೂಟಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವಲ್ಲದೆ, ಸಹೋದರ ಭಾವವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸದೃಢ ಶರೀರವನ್ನು ಹೊಂದಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಹಿಂದಿನ ಪೂರ್ವಜರು ಕುಸ್ತಿಗಳನ್ನು ಆಡುವ ಮೂಲಕ ಅವರು ಆಯಸ್ಸು ಹೆಚ್ಚಾಗಿರುವುದನ್ನು ಸ್ಮರಿಸಿದರು. ಅವರು ಸೇವಿಸಿಸುವ ಆಹಾರ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಪಾಂಡವರಲ್ಲಿ ಒಬ್ಬರಾದ ಅರ್ಜುನನ ಮಗ ಅಭಿಮನ್ಯು ವಿನ ಪುತ್ರ ಪರೀಕ್ಷಿತ ಮಹಾರಾಜ. ಈ ಪರೀಕ್ಷಿತ ಮಹಾರಾಜನಿಗೆ ಜ್ಯೋತಿಷಿಗಳು ತಿಳಿಸಿದಂತೆ ರಕ್ಷಕ ಎಂಬ ಸರ್ಪವು ಕಚ್ಚಿ ಆತನ ಸಾವಾಯಿತು. ಇದರಿಂದ ದುಃಖಕ್ಕೀ ಡಾದ ಪರೀಕ್ಷಿತ ಮಹಾರಾಜನ ಪುತ್ರಜನಮೇಜಯ ಮಹಾರಾಜನು ಹಾವುಗಳನ್ನೇ ಸರ್ವ ನಾಶ ಮಾಡುವೆನೆಂದು ಪಣತೊಟ್ಟನು.ಹಾವುಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಆತನು ಸರ್ಪ ಯಜ್ಞ ಆರಂಭಿಸಿದನು. ಯಜ್ಞವನ್ನು ನೆರವೇರಿಸುತ್ತಿದ್ದ ಮುನಿಗಳು ನಾಗಗಳ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆಯಿಂದಲೂ ಸರ್ಪಗಳು ತಾನೇ ತಾನಾಗಿ ಆತನ ಯಜ್ಞ ಕುಂಡಕ್ಕೆ ಬಂದು ಆಹುತಿಯಾಗತೊಡಗಿದವು..ತಪೋನಿರತನಾಗಿದ್ದ ಆಸ್ತಿಕ ಎಂಬ ಮುನಿವರನಿಗೆ ಆತನ ಶಿಷ್ಯರು ಈ ವಿಷಯವನ್ನು ಅರುಹಿದರು. ಹಾವುಗಳು ಮನುಷ್ಯನಿಗೆ ಶತ್ರುಗಳಲ್ಲ ನಿರುಪದ್ರವ ಜೀವಿಗಳು.. ಅವುಗಳ ಕುಲ ವಿನಾಶ ಮಾಡುವುದರಿಂದ ಸಾಕಷ್ಟು ಅನಾಹುತಗಳಾಗುತ್ತವೆ ಎಂಬುದನ್ನು ಮನಗಂಡ ಆಸ್ತಿಕ ಮುನಿಯ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿ ಬಂದನು. ಮುನಿಗಳ ಮೇಲೆ ಅಪಾರ ಭಯ ಭಕ್ತಿಯನ್ನು ಹೊಂದಿದ್ದ ಜನಮೇಜಯ ಮಹಾರಾಜನು ಮುನಿಗಳಿಗೆ…
ವಿಜಯಪುರ: ಪುಸ್ತಕಗಳಿಲ್ಲದ ಕೊಠಡಿಯು ಆತ್ಮವಿಲ್ಲದ ಶರೀರಕ್ಕೆ ಸಮಾನ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು.ಅವುಗಳಿಂದ ಪಡೆದ ಜ್ಞಾನ ನಮ್ಮ ಬದುಕಿಗೆ ಶಕ್ತಿ ಸಂಜೀವಿನಿ.’ಪುಸ್ತಕಂ ಹಸ್ತ ಭೂಷಣಂ’ ಎಂಬಂತೆ ಯುವಕರು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಗ್ರಂಥಾಲಯದಲ್ಲಿ ಶುಕ್ರವಾರದಂದು ಹಮ್ಮಿಕೊಂಡ ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’ವನ್ನು ಉದ್ದೇಶಿಸಿ ಮಾತನಾಡಿದರು.ಕಲಿಕೆ ಮತ್ತು ಜ್ಞಾನವನ್ನು ಹುಡುಕುವ ಉದ್ದೇಶಕ್ಕಾಗಿ ಪುಸ್ತಕಗಳನ್ನು ಓದುವ ಮತ್ತು ಆನಂದಿಸುವ ಅಭ್ಯಾಸವನ್ನು ಇಂದಿನ ಮಕ್ಕಳು-ಯುವಕರಲ್ಲಿ ಮರಳಿ ತರಲು ಪುಸ್ತಕ ಪ್ರೇಮಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.ಓದು ಕಲಿಕೆಯ ಹೆಬ್ಬಾಗಿಲು. ಅದು ಅನಿವಾರ್ಯ ಕೌಶಲ. ವಿಶೇಷವಾಗಿ ಯುವಪೀಳಿಗೆಯನ್ನು ಬಾಧಿಸುವ ನಾನಾ ವ್ಯಸನ, ದುಶ್ಚಟ, ದುರಭ್ಯಾಸಗಳಿಗೆ ಓದುವ ಹವ್ಯಾಸವೇ ಸಂಜೀವಿನಿಯಾಗಿದೆ ಎಂದು ಹೇಳಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಬಾಲ್ಯದಿಂದಲೇ ಓದುವ ಪ್ರವೃತ್ತಿಯು ಸ್ವಕಲಿಕೆಗೆ ಅನುಕೂಲಕರ ವೇದಿಕೆ ನಿರ್ಮಿಸಿಕೊಡುತ್ತದೆ. ಪುಸ್ತಕವು ಸರ್ವರ ಪಾಲಿಗೂ ಅಧಿಕಾರಯುತ ಜ್ಞಾನ ನೀಡುತ್ತದೆ.ಓದುವಿಕೆಯು ವಿಮರ್ಶಾತ್ಮಕ ಚಿಂತನೆ, ಕಲ್ಪನೆ ಮತ್ತು ಸಾಕ್ಷರತೆಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಮನುಷ್ಯನು…
ವಿಜಯಪುರ: ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಶುಕ್ರವಾರ ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಅಕ್ಕಮಹಾದೇವಿ ಗುಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಅಕ್ಕಮಹಾದೇವಿ ನಮಗೆಲ್ಲರಿಗೂ ತಮ್ಮ ಆಚಾರ, ವಿಚಾರ, ವಚನಗಳ ಮೂಲಕ ಮಾದರಿಯಾಗಿದ್ದಾರೆ. ಶರಣ, ಶರಣೆಯರ ದೇವಸ್ಥಾನ ನಿರ್ಮಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗುತ್ತದೆ. ಶ್ರಾವಣ ಮಾಸ ಪ್ರಾರಂಭವಾದಾಗ ಕೆಲವರು ತಮ್ಮ ಆಚಾರ, ವಿಚಾರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಈ ನಡವಳಿಕೆ ಕೇವಲ ಶ್ರಾವಣ ಮಾಸಕ್ಕೆ ಸೀಮಿತವಾಗದೇ, ಜೀವನದುದ್ದಕ್ಕೂ ಪಾಲಿಸುವ ಮೂಲಕ ಶರಣರ ಆಶಯದಂತೆ ಜೀವನ ಸಾಗಿಸಬೇಕು ಎಂದು ಅವರು ಹೇಳಿದರು.ಇದಕ್ಕೂ ಮೊದಲು ಮದಗುಣಕಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಳ್ಳಲಾಗಿರುವ ರೂ. 25 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಭೂಮಿಪೂಜೆ, ಪಿ.ಆರ್.ಇಡಿ ವತಿಯಿಂದ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಅವರು, ಅವರು, ಅಂಗನವಾಡಿ ಸಿಬ್ಬಂದಿ ಮತ್ತು ಅಧಿಕಾರಿಗಳು ಮಕ್ಕಳ ಶಿಕ್ಷಣದ…
ವಿಜಯಪುರ: ಜಗತ್ತಿಗೆ ಸಂಸ್ಕೃತಿ ಸಾರಿದ ದೇಶ ಭಾರತ ಅಂತಹ ದೇಶದಲ್ಲಿ ಬದುಕುತ್ತಿರುವ ನಾವುಗಳು ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶ ನಮ್ಮದು ನಿಜಕ್ಕೂ ನಾವು ಹಮ್ಮೆ ಪಡುವಂಥದ್ದು ಎಂದು ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಮಾವಿನಮರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಕ್ರತಿಯು ಅಂತರಂಗದ ಕುಸುಮವಾಗಿದೆ. ನಮ್ಮಲ್ಲಿ ಉತ್ತಮ ಸಂಸ್ಕೃತಿಯ ಅವಶ್ಯಕತೆ ಯಿದೆ. ಪ್ರಸ್ತುತ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಇಂದಿನ ಯುವಕದ ಪಾತ್ರ ಅವಶ್ಯಕತೆ ಇದೆ. ಆಧುನೀಕರಣದಿಂದಾಗಿ ಇಂದಿನ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ಯುವಕರ ಆದ್ಯ ಕರ್ತವ್ಯವಾಗಿದೆ. ಉತ್ತಮ ಸನ್ಮಾರ್ಗದಲ್ಲಿ ಬದುಕುವ ಕಲೆಯನ್ನು ರೂಡಿಸಿಕೊಳ್ಳಬೇಕು. ಅದರಂತೆ ನಾವು ಸೇವಿಸುವ ಉತ್ತಮ ಆಹಾರವು ಒಂದು…
ಬಸವನಬಾಗೇವಾಡಿ: ಕಳೆದ ಐದು ವರ್ಷದಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶ ಹೊರಡಿಸಿ ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಲತಾಯಿ ಮಕ್ಕಳಂತೆ ನೋಡಿಕೊಳ್ಳುವ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವತಂತ್ರ ಹರಣ ಮಾಡುವ ಜೊತೆಗೆ ಅವೈeನಿಕ ನಿಯಮಗಳನ್ನು ಜಾರಿಗೆ ತಂದಿರುವದನ್ನು ಖಂಡಿಸಿ ಆಗಷ್ಟ್ ೧೫ ರಂದು ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥರು, ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಯಾವ ನಿಯಮಗಳನ್ನು ಪಾಲಿಸದೇ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ರಚಿಸಿದ ನಿಯಮವನ್ನು ಯಥಾವತ್ತಾಗಿ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮೂಲಕ…
ಬಸವನಬಾಗೇವಾಡಿ: ಯುವಜನಾಂಗ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿರುವದು ಖೇದಕರ ಸಂಗತಿ ಎಂದು ಆಂಗ್ಲ ಉಪನ್ಯಾಸಕಿ ಎ.ಪಿ.ದಂಡಾವತಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನಾಂಗ ತಮ್ಮ ಜೀವನದಲ್ಲಿ ದುಶ್ಚಟಗಳಿಂದ ದೂರವಿರುವ ಮೂಲಕ ತಮ್ಮ ಸಾಧನೆಯನ್ನು ಮಾಡುವ ಕಡೆಗೆ ಗಮನ ಹರಿಸಬೇಕು. ಇಂದಿನ ಯುವಜನಾಂಗ ನಾಡಿನ ಭವಿಷ್ಯದ ಪ್ರಜೆಗಳಾಗಿದ್ದಾರೆ. ಯುವಜನಾಂಗ ಅಮೂಲ್ಯ ರತ್ನಗಳಿದ್ದಂತೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಯುವ ಸಮುದಾಯಕ್ಕೆ ಒಂದು ಗೌರವ ಬರಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ ಮಾತನಾಡಿ, ಮನುಷ್ಯ ಜೀವನ ಸಿಕ್ಕಿರುವುದು ಭಾಗ್ಯ. ಇದನ್ನು ನಾವು ಅತ್ಯಂತ ಜಾಗರೂಕತೆಯಿಂದ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ಸಾಧನೆಯ ಮಾರ್ಗದಲ್ಲಿ ಸಾಗುವ ಮೂಲಕ ತಂದೆ-ತಾಯಿಯ ಕನಸನ್ನು ನನಸು ಮಾಡುವ ಮೂಲಕ ಸಂತೋಷವನ್ನು ಉಂಟು ಮಾಡಿದಾಗ ಮಾತ್ರ ಬದುಕಿಗೆ ಬೆಲೆ ಬರಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರ-ಬೋಧಕೇತರ…
– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಯರನಾಳ, ಇಂಗಳೇಶ್ವರ, ದಿಂಡವಾರ, ರಬಿನಾಳ, ಮಸಬಿನಾಳ, ನರಸಲಗಿ, ಇವಣಗಿ, ಕಣಕಾಲ, ಕಾನ್ನಾಳ, ಟಕ್ಕಳಕಿ, ಜೈನಾಪೂರ, ಜಾಯವಾಡಗಿ, ಬ್ಯಾಕೋಡ, ಸೋಲವಾಡಗಿ, ಹೂವಿನಹಿಪ್ಪರಗಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಮಳೆ ಸುರಿಯಿತು.ಹಲವಾರು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತಬಾಂಧವರಿಗೆ ನಾಗಪಂಚಮಿಯಂದು ಬಂದ ಮಳೆ ಮಂದಹಾಸ ಮೂಡಿಸಿದೆ.ನಾಗರ ಪಂಚಮಿ ಹಬ್ಬದ ಸಿಹಿ ತಿನ್ನುತ್ತಾ ಮಳೆಯನ್ನು ರೈತರು ನೋಡಿ ಹರ್ಷವ್ಯಕ್ತಪಡಿಸಿದರು. ಬಿತ್ತನೆ ಮಾಡಿದ ನಂತರ ಅಷ್ಟಾಗಿ ಮಳೆ ಬಂದಿರಲಿಲ್ಲ. ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿ ಬಂದೊದಗಿತ್ತು. ಮೆಕ್ಕೆಜೋಳ, ತೊಗರಿ ಪ್ರಮುಖ ಆದಾಯ ಬೆಳೆಯಾಗಿರುವದರಿಂದಾಗಿ ಇವುಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಬಿತ್ತನೆಯಾದ ನಂತರ ಮಳೆಯೇ ಆಗಿರಲಿಲ್ಲ. ಆಷಾಢ ಗಾಳಿಗೆ ನಾಟಿದ ಬೆಳೆ ಒಣಗಿ ಹೋಗುತ್ತಿತ್ತು. ಮಳೆಯಿಲ್ಲದೇ ಇರುವದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯಲು ಆರಂಭವಾಗಿತ್ತು. ಇಂದು ಸಂಜೆ ಬಂದ ಮಳೆಯು ಬೆಳೆಗಳಿಗೆ ಆಸರೆಯಾಗಿದೆ.ಬಿತ್ತುವ ಮೊದಲು ಉತ್ತಮ ಮಳೆಯಾಗಿರುವದರಿಂದಾಗಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಒಂದೂವರೆ ತಿಂಗಳಿಂದ ಉತ್ತಮ ಮಳೆಯಾಗಿರಲಿಲ್ಲ. ಇದರಿಂದಾಗಿ ಬೆಳೆಗೆ…
ವಿಜಯಪುರ: ಬಸವ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿಗಳಾದ ಟಿ ಭೂಬಾಲನ್ ಅವರು ಭೇಟಿ ಮಾಡಿ ಬಸವೇಶ್ವರರ ಪುತ್ತಳಿ ನಿರ್ಮಾಣ ಕುರಿತು ಸಮೀಕ್ಷೆ ನಡೆಸಿ ಮತ್ತೆ ಸ್ಮಾರಕಕ್ಕೆ ತೆರಳಿ ವೀಕ್ಷಣೆ ಮಾಡಿ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ವೀಕ್ಷಣೆ ಮಾಡಿದರು.ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಬೇಟಿ ಶ್ರೀ ಬಸವೇಶ್ವರ ಸರ್ಕಲ್ & ಮೂರ್ತಿ ಪ್ರತಿಷ್ಠಾಪನಾ ನಿರ್ಮಾಣ ಕುರಿತು ಸಂಬಂಧಿಸಿದ ತಹಶೀಲ್ದಾರರಿಂದ ಮಾಹಿತಿ ಪಡೆದ ಅವರು, ಗಾವಠಾಣ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು.ಬಸವೇಶ್ವರ ಬಸವ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿರ್ಮಾಣ ಹಂತದಲ್ಲಿರುವ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.ಹಾಲು ಬಾವಿ ಹಾಗೂ ವಿರಕ್ತಮಠದ ವಚನ ಶಿಲಾ ಮಂಟಪ ವೀಕ್ಷಣೆ ಮಾಡಿದರು.ಬಸವನ ಬಾಗೇವಾಡಿಯ ಮೆಗಾ ಮಾರ್ಕೆಟ್ ಮತ್ತು ನಂದಿ ಮಾರ್ಕೆಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೆ ಬಸವನ ಬಾಗೇವಾಡಿಯಲ್ಲಿರುವ ಇಂದಿರಾ ಕ್ಯಾಂಟೀನಗೆ ದಿಢೀರ ಭೇಟಿ…
ಮುದ್ದೇಬಿಹಾಳ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ವೆಂಕನಗೌಡ ಪಾಟೀಲ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಅಶೋಕ ಚಟ್ಟೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
