ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ಕಲಾಭವನದಲ್ಲಿ ರೈಸ್ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಇಂತಹ ರೈಸ್ ದುಶ್ಚಟಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಕೇವಲ ಇಲಾಖೆಯಿಂದ ಮತ್ತು ಸರ್ಕಾರದಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಈ ದೇಶದ ಪ್ರತಿಯೊಬ್ಬ ಯುವ ಸಮೂಹದ ಜವಾಬ್ದಾರಿ ಇದೆ. ಸಾಕಷ್ಟು ಯುವ ಸಮೂಹ ಬಲಿಯಾಗುತ್ತಿದ್ದು ತಮ್ಮ ಭವಿಷ್ಯದ ಗಮನಹರಿಸದೆ ಇಂತಹ ವ್ಯಸನಕ್ಕೆ ತಮ್ಮ ಜೀವನ ಹಾಳು ಮಾಡಿಕೊಳುತ್ತಿದ್ದಾರೆ. ಯಾವುದೆ ಕಾರಣಕ್ಕೂ ಯುವಕರು ಬಲಿಯಾಗಬಾರದು ಎಂದು ಜಾಗೃತಿ ಮೂಡಿಸಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಯುವಕರು ತಮ್ಮ ಗುರಿ ಮುಟ್ಟುವ ಕಡೆ ಹೆಚ್ಚು ಗಮನ ಹರಿಸಿ ತಂದೆ ತಾಯಿಗಳ ಕನಸು ನನಸಾಗುವ ನಿಟ್ಟಿನಲ್ಲಿ ಬದಕನ್ನು ಕಟ್ಟಿಕೊಳ್ಳಬೇಕು ಎಂದರು.
ಡಾ.ದೀಪಾ ರೆಡ್ಡಿ, ಅಧ್ಯಕ್ಷತೆ ವಹಿಸಿದ ಶರಣಯ್ಯ ಭಂಡಾರಿ ಮಠ ಮಾತನಾಡಿದರು.
ಪ್ರಸ್ತಾವಿಕವಾಗಿ ಸಿಪಿಐ ಪ್ರದೀಪ್ ತಳಕೇರಿ ಮಾತನಾಡಿದರು. ಪ್ರತಿಜ್ಞಾವಿಧಿಯನ್ನು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಆದ ಅಲಿ ಷೇಕ್ ಅವರು ಬೋಧಿಸಿದರು.
ನಗರ ಉಪವಿಭಾಗ ಡಿಎಸ್ಪಿ ನಾಗರಾಜ್ ಜಿ, ವಿನೋದ್ ಮಣ್ಣೂರ, ವೀರೇಶ್ ಗೊಬ್ಬೂರ, ಸಂತೋಷ ಜಳಕಿ, ಗಣೇಶ್ ಕಾಸರ, ಇಮಾಮ ನದಾಫ್ ಇದ್ದರು.
ನಾಗೇಶ ಮುರುಡಿ ನಿರೂಪಿಸಿದರು. ಮಾಂತೇಶ ಮಲ್ಲೂರ ವಂದಿಸಿದರು

