Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬರಗಾಲದ ನಡುವೆ ಗ್ರಾಮೀಣರಿಗೆ ನಿರಂತರ ಉದ್ಯೋಗ

ವಿವಿಧ ಯೋಜನೆಗಳ ಕಾಮಗಾರಿ ೩ ತಿಂಗಳಲ್ಲಿ ಪೂರ್ಣಗೊಳಿಸಿ

ಧರ್ಮದ ಹೆಸರಿನಲ್ಲಿ ಅಸಹನೆ ಬೇಡ :ಕನ್ನೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ :ಡಾ.ಮಾವಿನಮರ
(ರಾಜ್ಯ ) ಜಿಲ್ಲೆ

ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ :ಡಾ.ಮಾವಿನಮರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಜಗತ್ತಿಗೆ ಸಂಸ್ಕೃತಿ ಸಾರಿದ ದೇಶ ಭಾರತ ಅಂತಹ ದೇಶದಲ್ಲಿ ಬದುಕುತ್ತಿರುವ ನಾವುಗಳು ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶ ನಮ್ಮದು ನಿಜಕ್ಕೂ ನಾವು ಹಮ್ಮೆ ಪಡುವಂಥದ್ದು ಎಂದು ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಮಾವಿನಮರ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಕ್ರತಿಯು ಅಂತರಂಗದ ಕುಸುಮವಾಗಿದೆ. ನಮ್ಮ‌ಲ್ಲಿ ಉತ್ತಮ ಸಂಸ್ಕೃತಿಯ ಅವಶ್ಯಕತೆ ಯಿದೆ. ಪ್ರಸ್ತುತ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಇಂದಿನ ಯುವಕದ ಪಾತ್ರ ಅವಶ್ಯಕತೆ ಇದೆ. ಆಧುನೀಕರಣದಿಂದಾಗಿ ಇಂದಿನ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ಯುವಕರ ಆದ್ಯ ಕರ್ತವ್ಯವಾಗಿದೆ. ಉತ್ತಮ ಸನ್ಮಾರ್ಗದಲ್ಲಿ ಬದುಕುವ ಕಲೆಯನ್ನು ರೂಡಿಸಿಕೊಳ್ಳಬೇಕು. ಅದರಂತೆ ನಾವು ಸೇವಿಸುವ ಉತ್ತಮ ಆಹಾರವು ಒಂದು ಸಂಸ್ಕೃತಿಯಾಗಿದೆ ಅದಕ್ಕೆ ಉತ್ತಮ ಆರೋಗ್ಯದ ಅವಶ್ಯಕತೆ ಇದೆ ಎಂದು ಹೇಳಿದರು.
ಅಲ್ಲದೆ ಮಾನವ ತನ್ನ ಸ್ವಾರ್ಥಕ್ಕೆ ಪ್ರಕೃತಿ ವಿರುದ್ಧ ಕೆಲಸ ಮಾಡುತ್ತಿದ್ದಾನೆ ಇದರಿಂದ ಮಾನವನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಆದ್ದರಿಂದ ಪ್ರಕೃತಿ ಉಳಿಸಿ, ಪ್ರೀತಿಸಿ ಗೌರವಿಸುವಂತಾಗಬೇಕು.
ನಾವು ಮಾಡುವ ಕೆಲಸದಲ್ಲಿ ಎಲ್ಲದರಲ್ಲಿಯೂ ಸಂಸ್ಕೃತಿ ಇದೆ. ಅದನ್ನು ನೋಡುವ ದೃಷ್ಟಿಕೋನ ನಮ್ಮದಾಗಿದೆ ಆದ್ದರಿಂದ ಅದನ್ನು ಸರಿಯಾಗಿ ನೋಡಿಕೊಳ್ಳಬೇಕು. ಅಲ್ಲದೆ ನಮ್ಮ ವ್ಯಕ್ತಿತ್ವದಲ್ಲಿ ಚಾರಿತ್ರ್ಯವು ಪ್ರಮಖ ಪಾತ್ರವಹಿಸುತ್ತದೆ
ಅದನ್ನು ಉಳಿಸಿಕೊಂಡು ಹೋಗಬೇಕು.ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶ, ವಿದ್ಯಾರ್ಥಿವೇತನ ಇದ್ದು ಅವುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾದ ಎಸ್.ಹೆಚ್ ಹೂಗಾರ ಮಾತನಾಡಿದರು.
ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯವಾದುದ್ದು ಆದ್ದರಿಂದ ಇಂತಹ ಉಪನ್ಯಾಸ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನ ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಕ್ಷಯ್ ಜನಾಯ್, ವಿಭಾಗದ ಉಪನ್ಯಾಸಕಿ ಶೋಭಾ ರುದ್ರಗೌಡರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಲಿಕ್ ಎಲ್. ಜಮಾದಾರ, ಶಿಕ್ಷಣ ಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ.ಸಿ.ಎನ್.ಕುನ್ನೂರ ಇದ್ದರು. ವಿದ್ಯಾರ್ಥಿನಿಯರಾದ ದೀಪಾ ಮತ್ತು ರೂಪಾ ಪ್ರಾರ್ಥಿಸಿದರು,ಕುಮಾರ ವಿಷ್ಣು ಸ್ವಾಗತಿಸಿದರು, ಕುಮಾರಿ ರೇವತಿ ನಿರೂಪಿಸಿದರು. ಪ್ರೊ.ಅಕ್ಷಯ್ ಜನಾಯ್ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬರಗಾಲದ ನಡುವೆ ಗ್ರಾಮೀಣರಿಗೆ ನಿರಂತರ ಉದ್ಯೋಗ

ವಿವಿಧ ಯೋಜನೆಗಳ ಕಾಮಗಾರಿ ೩ ತಿಂಗಳಲ್ಲಿ ಪೂರ್ಣಗೊಳಿಸಿ

ಧರ್ಮದ ಹೆಸರಿನಲ್ಲಿ ಅಸಹನೆ ಬೇಡ :ಕನ್ನೂರ

ಯಾವ ಮಾನದಂಡದ ಮೇಲೆ ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿದ್ದೀರಿ?

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬರಗಾಲದ ನಡುವೆ ಗ್ರಾಮೀಣರಿಗೆ ನಿರಂತರ ಉದ್ಯೋಗ
    In (ರಾಜ್ಯ ) ಜಿಲ್ಲೆ
  • ವಿವಿಧ ಯೋಜನೆಗಳ ಕಾಮಗಾರಿ ೩ ತಿಂಗಳಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಧರ್ಮದ ಹೆಸರಿನಲ್ಲಿ ಅಸಹನೆ ಬೇಡ :ಕನ್ನೂರ
    In (ರಾಜ್ಯ ) ಜಿಲ್ಲೆ
  • ಯಾವ ಮಾನದಂಡದ ಮೇಲೆ ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿದ್ದೀರಿ?
    In (ರಾಜ್ಯ ) ಜಿಲ್ಲೆ
  • ವಿವಿಧ ಯೋಜನೆಗಳ ಕಾಮಗಾರಿ ೩ ತಿಂಗಳಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 10,2026
    In ದಿನಪತ್ರಿಕೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 09,2026
    In ದಿನಪತ್ರಿಕೆ
  • ಬಂಗ್ಲೆ ಮಲ್ಲಿಕಾರ್ಜುನ ಮೇಲೆ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ’ದೇವರ ದ್ಯಾಮವ್ವ’ ಕೃತಿ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಬಂಗ್ಲೆ ವಿರುದ್ಧ ಕ್ರಮಕ್ಕೆ ಕಾನಿಪ ಸಿಂದಗಿ ಘಟಕ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.