Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾಗರ ಪಂಚಮಿಯ ಕಥೆ
(ರಾಜ್ಯ ) ಜಿಲ್ಲೆ

ನಾಗರ ಪಂಚಮಿಯ ಕಥೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

ಪಾಂಡವರಲ್ಲಿ ಒಬ್ಬರಾದ ಅರ್ಜುನನ ಮಗ ಅಭಿಮನ್ಯು ವಿನ ಪುತ್ರ ಪರೀಕ್ಷಿತ ಮಹಾರಾಜ. ಈ ಪರೀಕ್ಷಿತ ಮಹಾರಾಜನಿಗೆ ಜ್ಯೋತಿಷಿಗಳು ತಿಳಿಸಿದಂತೆ ರಕ್ಷಕ ಎಂಬ ಸರ್ಪವು ಕಚ್ಚಿ ಆತನ ಸಾವಾಯಿತು. ಇದರಿಂದ ದುಃಖಕ್ಕೀ ಡಾದ ಪರೀಕ್ಷಿತ ಮಹಾರಾಜನ ಪುತ್ರ
ಜನಮೇಜಯ ಮಹಾರಾಜನು ಹಾವುಗಳನ್ನೇ ಸರ್ವ ನಾಶ ಮಾಡುವೆನೆಂದು ಪಣತೊಟ್ಟನು.
ಹಾವುಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಆತನು ಸರ್ಪ ಯಜ್ಞ ಆರಂಭಿಸಿದನು. ಯಜ್ಞವನ್ನು ನೆರವೇರಿಸುತ್ತಿದ್ದ ಮುನಿಗಳು ನಾಗಗಳ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆಯಿಂದಲೂ ಸರ್ಪಗಳು ತಾನೇ ತಾನಾಗಿ ಆತನ ಯಜ್ಞ ಕುಂಡಕ್ಕೆ ಬಂದು ಆಹುತಿಯಾಗತೊಡಗಿದವು..
ತಪೋನಿರತನಾಗಿದ್ದ ಆಸ್ತಿಕ ಎಂಬ ಮುನಿವರನಿಗೆ ಆತನ ಶಿಷ್ಯರು ಈ ವಿಷಯವನ್ನು ಅರುಹಿದರು. ಹಾವುಗಳು ಮನುಷ್ಯನಿಗೆ ಶತ್ರುಗಳಲ್ಲ ನಿರುಪದ್ರವ ಜೀವಿಗಳು.. ಅವುಗಳ ಕುಲ ವಿನಾಶ ಮಾಡುವುದರಿಂದ ಸಾಕಷ್ಟು ಅನಾಹುತಗಳಾಗುತ್ತವೆ ಎಂಬುದನ್ನು ಮನಗಂಡ ಆಸ್ತಿಕ ಮುನಿಯ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿ ಬಂದನು. ಮುನಿಗಳ ಮೇಲೆ ಅಪಾರ ಭಯ ಭಕ್ತಿಯನ್ನು ಹೊಂದಿದ್ದ ಜನಮೇಜಯ ಮಹಾರಾಜನು ಮುನಿಗಳಿಗೆ ನಮಸ್ಕರಿಸಿ ಸೂಕ್ತ ಉಪಚಾರ ನೆರವೇರಿಸಿದನು. ನಂತರ ಮುನಿಗಳ ಆಗಮನದ ಕಾರಣವನ್ನು ಕೇಳಲು ಆಸ್ತಿಕ ಮುನಿಯ ಆತನಿಗೆ ಸರ್ಪ ಯಜ್ಞ ಮಾಡುವುದರಿಂದ ಉಂಟಾಗುವ ಅನಾಹುತಗಳನ್ನು ತಿಳಿ ಹೇಳಿ ಯಜ್ಞವನ್ನು ನಿಲ್ಲಿಸಲು ಕೇಳಿಕೊಂಡನು ಋಷಿ ಮುನಿಗಳ ಮೇಲೆ ಅಪಾರ ಗೌರವವನ್ನು ಹೊಂದಿದ್ದ ಜನಮೇಜಯರಾಜನು ಋಷಿಗಳ ಮಾತಿನಂತೆ ತನ್ನ ಯಜ್ಞವನ್ನು ನಿಲ್ಲಿಸಿದನು.
ಇನ್ನೂ ಹಲವಾರು ಸರ್ಪಗಳು ಯಜ್ಞದ ಉರಿಯಲ್ಲಿ ಬೆಂದು ಹೋಗುತ್ತಿದ್ದವು. ಆಗ ಆಸ್ತಿಕನು ಹಾವುಗಳನ್ನು ಯಜ್ಞ ಕುಂಡದಿಂದ ಹೊರತೆಗೆದು ಅವುಗಳ ಮೇಲೆ ಪನ್ನೀರಿನ ಮತ್ತು ಹಾಲಿನ ಸಿಂಚನ ಮಾಡಿದನು. ಗುರುವನ್ನು ಅನುಕರಿಸಿದ ಆತನ ಸಹಚರರು ಉಳಿದೆಲ್ಲ ಹಾವುಗಳ ತಾಪ ಶಮನ ಮಾಡಲು ಅವುಗಳ ಮೇಲೆ ತಮ್ಮ ಗುರುಗಳನ್ನು ಅನುಸರಿಸಿ ತೆಂಗಿನ ತಿಳಿನೀರು ಮತ್ತು ಹಾಲಿನ ಅಭಿಷೇಕ ಮಾಡಿದರು. ಆ ದಿನ ಶ್ರಾವಣ ಮಾಸದ ಪಂಚಮಿಯ ದಿನವಾಗಿತ್ತು. ಅಂದಿನಿಂದ ಪ್ರತಿ ವರ್ಷವೂ ನಾಗಗಳನ್ನು ರಕ್ಷಿಸುವ ಸಲುವಾಗಿ, ನಾಗ ಸಂತತಿಯು ಮನುಷ್ಯ ಕುಲಕ್ಕೆ ಮಾಡುವ ಉಪಕಾರ ಸ್ಮರಣೆಯ ದಿನವಾಗಿ ನಾಗರ ಪಂಚಮಿಯ ಹಬ್ಬವನ್ನು ಆಚರಿಸಲಾಗುತ್ತದೆ.

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026
    In (ರಾಜ್ಯ ) ಜಿಲ್ಲೆ
  • ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026
    In ದಿನಪತ್ರಿಕೆ
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.