ಬಸವನಬಾಗೇವಾಡಿ: ಯುವಜನಾಂಗ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿರುವದು ಖೇದಕರ ಸಂಗತಿ ಎಂದು ಆಂಗ್ಲ ಉಪನ್ಯಾಸಕಿ ಎ.ಪಿ.ದಂಡಾವತಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನಾಂಗ ತಮ್ಮ ಜೀವನದಲ್ಲಿ ದುಶ್ಚಟಗಳಿಂದ ದೂರವಿರುವ ಮೂಲಕ ತಮ್ಮ ಸಾಧನೆಯನ್ನು ಮಾಡುವ ಕಡೆಗೆ ಗಮನ ಹರಿಸಬೇಕು. ಇಂದಿನ ಯುವಜನಾಂಗ ನಾಡಿನ ಭವಿಷ್ಯದ ಪ್ರಜೆಗಳಾಗಿದ್ದಾರೆ. ಯುವಜನಾಂಗ ಅಮೂಲ್ಯ ರತ್ನಗಳಿದ್ದಂತೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಯುವ ಸಮುದಾಯಕ್ಕೆ ಒಂದು ಗೌರವ ಬರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ ಮಾತನಾಡಿ, ಮನುಷ್ಯ ಜೀವನ ಸಿಕ್ಕಿರುವುದು ಭಾಗ್ಯ. ಇದನ್ನು ನಾವು ಅತ್ಯಂತ ಜಾಗರೂಕತೆಯಿಂದ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ಸಾಧನೆಯ ಮಾರ್ಗದಲ್ಲಿ ಸಾಗುವ ಮೂಲಕ ತಂದೆ-ತಾಯಿಯ ಕನಸನ್ನು ನನಸು ಮಾಡುವ ಮೂಲಕ ಸಂತೋಷವನ್ನು ಉಂಟು ಮಾಡಿದಾಗ ಮಾತ್ರ ಬದುಕಿಗೆ ಬೆಲೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರ-ಬೋಧಕೇತರ ಸಿಬ್ಬಂದಿ ಇದ್ದರು. ಪ್ರೊ.ಎಂ.ಕೆ.ಯಾಧವ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

