Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ಬೆಳಿಗ್ಗೆ ೧೦ ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆ-ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.ಸರ್ಕಾರಿ ಅಧಿಕಾರಿ-ನೌಕರರು ಕಾನೂನು ರಿತ್ಯ ಕಾರ್ಯ ಮಾಡಲು ವಿಳಂಬವಾಗುತ್ತಿದ್ದಲ್ಲಿ, ಅಥವಾ ಅಧಿಕಾರಿ-ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದಲ್ಲಿ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷಾಧಾರಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ರವರೆಗೆ ಮತ್ತು ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಚಾರಣೆ ನಡೆಸಲಿದ್ದಾರೆ.…
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪು ವಿಭಾಗದಿಂದ ಶಿಶುಕ್ಷ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲು ಐಟಿಐ ವಿದ್ಯಾರ್ಹತೆಯನ್ನು ಹೊಂದಿದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆ.೨೩ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ, ಅಥಣಿ ರಸ್ತೆ ವಿಜಯಪುರದಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.ಐಟಿಐನಲ್ಲಿ ಎಲೆಕ್ಟ್ರಿಷಿಯನ್, ಮ್ಯೆಕ್ಯಾನಿಕ್, ಡಿಸೆಲ್ ಮೆಕ್ಯಾನಿಕ್, ಮೋಟಾರ ವೆಹಿಕಲ್, ಫಿಟರ್, ಪೇಂಟರ್ ಹಾಗೂ ವೆಲ್ಡರ್ ವೃತ್ತಿಯಲ್ಲಿ ಉತ್ತೀರ್ಣರಾದ ೬೦ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು www.apprenticeshipindia.gov.inಪೋರ್ಟಲ್‌ನಲ್ಲಿ ಕ್ಯಾಂಡಿಡೇಟ್ ರಜಿಸ್ಟ್ರೇಶನ್ ನಲ್ಲಿ ವಿವರವಾದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೊಂದಣಿಯೊಂದಿಗೆ ಅರ್ಜಿ ಸಲ್ಲಿಸಿ, ಸಲ್ಲಿಸಿದ ಅರ್ಜಿ ಹಾಗೂ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೭೭೬೦೯೯೨೨೫೬, ೯೬೦೬೯೦೮೮೬೨ ಸಂಖ್ಯೆಗೆ ಸಂಪರ್ಕಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಕೋಟಾ ಉಪನೊಂದಣಾಧಿಕಾರಿ ಕಚೇರಿ ಕಾರ್ಯಾರಂಭ | ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಚಾಲನೆ ವಿಜಯಪುರ: ವಿವಿಧ ಸಭೆ-ಸಮಾರಂಭಗಳಲ್ಲಿ ಅನಗತ್ಯ ಹಾರ್-ತುರಾಯಿ ಖರ್ಚು ಮಾಡದೇ ಬದಲಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನೋಟ್‌ಬುಕ್ ವಿತರಣೆ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಭಿಪ್ರಾಯಿಸಿದರು.ಜಿಲ್ಲೆಯ ತಿಕೋಟಾದಲ್ಲಿ ತಾಲೂಕಾ ಸೌಧದಲ್ಲಿನ ಉಪನೊಂದಣಾದಿಕಾರಿ ಕಚೇರಿ ಕಾರ್ಯಾರಂಭ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರವನ್ನು ಬುಧವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಯಾವುದೇ ಸಭೆ-ಸಮಾರಂಭಗಳಲ್ಲಿ ನೋಟ್‌ಪುಸ್ತಕ ನೀಡುವ ಪದ್ಧತಿ ರೂಢಿಸಿಕೊಂಡಲ್ಲಿ ಇದರಿಂದ ವಿದ್ಯಾರ್ಥಿಗಳಿಗೆ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಹಾರ ತುರಾಯಿಗಳಿಗೆ ವ್ಯಯಿಸುವ ವೆಚ್ಚವನ್ನು ಶೈಕ್ಷಣಿಕ ಗುಣಮಟ್ಟಕ್ಕೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ನೋಟ್‌ಪುಸ್ತಕ ಅಥವಾ ಪುಸ್ತಕ ಒದಗಿಸುವ ಮೂಲಕ ಬಡ ಮಕ್ಕಳಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಶಿಕ್ಷಣಕ್ಕೆ ಒತ್ತು ನೀಡಿ ಶೈಕ್ಷಣಿಕ ಪ್ರಗತಿಯಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕ…
ವಿಜಯಪುರ: ಬುಧವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಟೆಕಡೆಗಲ್ಲಿಯಲ್ಲಿರುವ ಸರಕಾರಿ ಉರ್ದು ಶಾಲೆ ನಂ.೫ಗೆ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಪರಿಶೀಲನೆ ನಡೆಸಿ, ಮಕ್ಕಳಿಗೆ ಪಾಠ ಬೋಧನೆ ಮಾಡಿದರು.ಶಾಲೆಯ ಶಿಕ್ಷಕರಿಂದ ಶಾಲೆಯಲ್ಲಿ ಕುರಿತಾಗಿ ಮಾಹಿತಿ ಪಡೆದುಕೊಂಡ ಅವರು, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಶುಚಿತ್ವ, ಶಿಸ್ತು ಮತ್ತು ಅಧ್ಯಯನ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದು ಸೂಚಿಸಿದ ಅವರು ಶಾಲೆಯ ಹಲವು ಕಡತ ಮತ್ತು ವಹಿಗಳನ್ನು ಪರಿಶೀಲಿಸಿದರು.ನಗರದ ಟೆಕಡೆಗಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಆಹಾರದ ವೇಳಾಪಟ್ಟಿಯಂತೆ ಗುಣಮಟ್ಟದ ಆಹಾರ ವಿತರಿಸಲು ಕ್ರಮ ವಹಿಸಬೇಕು, ದಾಖಲಾತಿಗಳ ನಿರ್ವಹಣೆ, ಪಾಲಕರ ಸಭೆಯ ಮಾಹಿತಿ, ಆಗಾಗ ಕಡ್ಡಾಯವಾಗಿ ಸಭೆಗಳನ್ನು ಹಮ್ಮಿಕೊಂಡು ಇಲಾಖೆ ಯೋಜನೆಗಳ ಸದುಪಯೋಗದ ಬಗ್ಗೆ ಸಾರ್ವಜನಿಕರಿಗೆ ವಿವರವಾಗಿ ಮಾಹಿತಿಯನ್ನು ನೀಡಬೇಕು. ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಈ ದಿಶೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು…
ವಿಜಯಪುರ:ನಗರದ ಯತ್ನಾಳ ರಸ್ತೆಯಲ್ಲಿರುವ ಮಹೇಂದ್ರಗಿರಿ ಕ್ಷೇತ್ರದಲ್ಲಿ ಭಗವಾನ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಮಹೋತ್ಸವವನ್ನು ಪರಮ ಪೂಜ್ಯ ಶ್ರೀಮಧ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರವಣಬೆಳಗೋಳ ಇವರ ಪಾವನ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಬೆಳಿಗ್ಗೆ ೫.೩೦ ರಿಂದ ಮಂಗಲ ವಾದ್ಯ ಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ, ರಥಯಾತ್ರೆ, ಜನಕಲ್ಯಾಣ ಯೋಜನೆಗಳ ಉದ್ಘಾಟನೆ ಭಗವಂತರಿಗೆ ಮಹಾ ಮಸ್ತಾಭಿಷೇಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನಪ್ರಸಾದ ನೆರವೇರಿತು. ಕೊನೆಯಲ್ಲಿ ನಡೆದ ಧರ್ಮಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಾದ ಸುಭಾಸ ಹೊಸಕಲ್ಲೆ ಹಾಗೂ ನಿವೃತ್ತರಾದ ಬಾಬು ಕೆ ಅನಾಜೆ, ಶಾಂತಿನಾಥ ಎಸ್ ಶಿವಣ್ಣವರ ಅವರನ್ನು ಸನ್ಮಾನಿಸಲಾಯಿತು.ಧರ್ಮಸಭೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಸೌ.ಸ್ಮೀತಾ ಮಾಲಗುಂದಿ, ಲೋಕೇಶ ಹವಲೆ, ರಮೇಶ ಮಹಾಜನ ಹಾಗೂ ಕೆ.ಜೆ.ಎ. ಸದಸ್ಯರಾದ ಪ್ರವೀಣ ಕಾಸಾರ, ಟ್ರಸ್ಟಿಗಳಾದ ಪ್ರಕಾಶ ಚಂಕೇಶ್ವರ, ಸಮಾಜದ ಗಣ್ಯರಾದ ಮಿಲಿಂದ ಪಾಟೀಲ, ಭರಮಣ್ಣ ಶೆಟ್ಟಿ, ಶೀತಲ ಪಾಟೀಲ, ಬಾಹುಬಲಿ ಕಡಕೋಳ, ಅಶೋಕ ಬೋಗಾರ, ಚೇತನ ಸಗರೆ,ರವಿ ನಾಗಾವಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ…
ವಿಜಯಪುರ: ಅಂಚೆ ಇಲಾಖೆಯಿಂದ ೬ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ ಸ್ಪರ್ಷ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಅಂಚೆ ಚೀಟಿಗಳ ಮೌಲ್ಯ ಮತ್ತು ಸಂಶೋಧನೆಯ ಕುರಿತಾದ ಹವ್ಯಾಸವನ್ನು ಬೆಳೆಸಲು ವಿದ್ಯಾರ್ಥಿವೇತನ ನೀಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜನೆ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೆ.೬೦ ರಷ್ಟು ಅಂಕ ಪಡೆದಿರಬೇಕು ಮತ್ತು ಅಂಚೆ ಚೀಟಿಗಳ ಠೇವಣಿ ಖಾತೆಯನ್ನು ಅಥವಾ ಅಂಚೆ ಚೀಟಿಗಳ ಕ್ಲಬ್‌ನಲ್ಲಿ ಸದಸ್ಯರಾಗಿರಬೇಕು.ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೬ ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.ಅರ್ಜಿ ಸಲ್ಲಿಸಲು ದಿನಾಂಕ : ೦೩-೦೯-೨೦೨೪ ಕೊನೆಯ ದಿನಾಂಕವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಂತರ್ಜಾಲಗಳಾದ www.indiapost.govin and www.karnatakapost.gov.inಮತ್ತು ದೂ: ೦೮೩೫೨-೨೫೦೨೬೫, ೨೫೩೦೦೦, ಮೊ: ೯೯೪೫೪೫೭೯೭೬,…
ಇಂಡಿ:ನಾಟಕ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಕಲಿಕೆಯು ಕರಗತ ಮಾಡಿಕೊಳ್ಳುವ ಪೂರಕ ವಾತಾವರಣ ಒದಗಿಸಿ ಕೊಟ್ಟಂತೆ ಆಗುತ್ತದೆ ಎಂದು ಉಪನ್ಯಾಸಕ ಸದಾನಂದ ಈರನಕೇರಿ ಹೇಳಿದರು.ಪಟ್ಟಣದ ಅಮರ ಫಂಕ್ಷನ್ ಹಾಲನಲ್ಲಿ ವಿಜಯಪುರ ರಂಗಸಿರಿ ಪ್ರತಿಷ್ಠಾನ ಹಾಗೂ ವಿವಿಧ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾಟಕ ಪ್ರದರ್ಶನ ವೀಕ್ಷಿಸಿ ಮಾತನಾಡುತ್ತಾ, ಮೌಲ್ಯಯುತ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಪಿಯುಸಿ ದ್ವಿತೀಯ ವರ್ಷದ ದೀರ್ಘ ಗದ್ಯ ಕೃಷ್ಣೇಗೌಡನ ಆನೆ, ಡಾಕ್ಟರ್ ಚಂದ್ರಶೇಖರ ಕಂಬಾರ ಬರೆದಿರುವ ಬೋಳೇಶಂಕರ ನಾಟಕಗಳು ಪ್ರದರ್ಶನಗೊಂಡವು. ವಿವಿಧ ಕಾಲೇಜು ವಿದ್ಯಾರ್ಥಿಗಳು, ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.ವೇದಿಕೆಯ ಮೇಲೆ ಅಂಜುಮನ್ ಕಾಲೇಜು ಪ್ರಾಚಾರ್ಯ ಜೆ.ಡಿ. ಪೂಜಾರಿ, ದೂಮಗೊಂಡ, ಶಕೀನಾ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಹಿರಿಯ ಉಪನ್ಯಾಸಕರು ಹಾಜರಿದ್ದರು.
ವಿಜಯಪುರ:ಸ್ವಾತಂತ್ರ್ಯ ಎಂದರೆ ಕತ್ತಲೆಯಿಂದ ಬೆಳಕಿನಡೆಗೆ ಬರುವುದು. ಆದಿ ಕಾಲದಿಂದಲೂ ಬ್ರಿಟಿಷರಿಂದ ತುಳಿತಕ್ಕೊಳಗಾಗಿ ನಮ್ಮ ಹಕ್ಕನ್ನು ಕಳೆದುಕೊಂಡು ಜೀವಂತ ಶವದಂತಾಗಿರುವ ಜೀವನವೂ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬರು ತಮ್ಮ ಹಕ್ಕಿನಂತೆ ಬದುಕುವುದಕ್ಕಾಗಿ ನಾನಾರೀತಿಯ ಹೋರಾಟಗಾರರು ತಮ್ಮ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಎಂದು ಪ್ರಕಾಶ ಆರ್ ಕೆ ಹೇಳಿದರು.ಅವರು ನಗರದ ಹೊರವಲಯದ ಭೂತನಾಳ ಕ್ರಾಸ್, ಸೋಲಾಪೂರ ಬೈಪಾಸ್ ರಸ್ತೆಗೆ ಅಂಟಿಕೊಂಡಿರುವ ಅಂಡರ್‌ಗ್ರೌಂಡ್ ಮೇಲೆ ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಕೆಚ್ಚದೆಯ ಹೋರಾಟಗಾರ ಕಿತ್ತೂರ ಸಾಮ್ರಾಜ್ಯದ ಅಪ್ರತಿಮ ವೀರ, ಭಾರತ ಮಾತೆಯ ಹೆಮ್ಮೆಯ ಪುತ್ರ ಕ್ರಾಂತಿವೀರ ಸಂಗೋಳ್ಳಿರಾಯಣ್ಣನ ಭಾವಚಿತ್ರವು ಗಾನಯೋಗಿ ಸಂಘದ ವತಿಯಿಂದ ಬಿಡಿಸುವುದರ ಮೂಲಕ ನಮ್ಮ ಯುವ ಪೀಳಿಗೆಗೆ ಸಂದೇಶ ನೀಡವಲ್ಲಿ ಮುಂದಾಗಿದೆ ಎಂದರು.ಆಧುನಿಕ ಯುಗದಲ್ಲಿ ಯುವಜನತೆ ಮೊಬೈಲ್ ಬಂಧನಗೊಂಡು ನಮ್ಮ ಭಾರತೀಯ ಸಂಸ್ಕೃತಿ, ನಮ್ಮ ದೇಶದ ಪ್ರಗತಿಯ ಚಿಂತನಗಳು ಮರೀಚಿಕೆಯಾದಂತಿವೆ. ಆದ ಕಾರಣ ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ದೇಶಕ್ಕಾಗಿ ಜೀವ ತ್ಯಾಗಗೈದ ಮಹನೀಯರ ಕುರಿತು ಸ್ಮರಿಸಬೇಕು. ಹಾಗೂ ದುಶ್ಚಟದಿಂದ ಹೊರಬಂದು…
ವಿಜಯಪುರದಲ್ಲಿ ಕನೆಕ್ಟ್-೨೦೨೪ ಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಐತಿಹಾಸಿಕ ಪ್ರವಾಸಿ ಸ್ಥಳಗಳ ಅಭಿವೃದ್ಧಿಯಿಂದ ಪ್ರವಾಸೋಧ್ಯಮಕ್ಕೆ ಉತ್ತೇಜನ ದೊರೆತು ಆದಾಯ ವೃದ್ದಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ.ಪಾಟೀಲ ಅವರು ಹೇಳಿದರು.ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಇವರ ಸಹಯೋಗದಲ್ಲಿ ಬುಧವಾರ ನಡೆದ ಕನೆಕ್ಟ್-೨೦೨೪ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲೆಯಲ್ಲಿನ ಗೊಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ, ತಾಜಬಾವಡಿ ಬಾಗಲಕೋಟೆ ಜಿಲ್ಲೆಯ ಬದಾಮಿ-ಐಹೊಳೆಯ ಗುಹಾಂತರ ದೇವಾಲಯ, ಪಟ್ಟದಕಲ್ಲು, ಕೂಡಲ ಸಂಗಮ, ಜಮಖಂಡಿಯ ಅರಮನೆ, ಸೇರಿದಂತೆ ಅನೇಕ ಸ್ಮಾರಕಗಳು, ಐತಿಹಾಸಿಕ ವಾಸ್ತುಶಿಲ್ಪಗಳು, ಪ್ರವಾಸಿ ತಾಣಗಳಲ್ಲಿ ಹೊರ ರಾಜ್ಯ ಮತ್ತು ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿಗೆ…
ಇಂಡಿ: ಸತ್ತ ಮೇಲೆ ಏನನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಇರುವುದರೊಳಗೆ ಸಮಾಜದಲ್ಲಿ ಉತ್ತಮ ಕಾರ್ಯಗಳು ಮಾಡಬೇಕು. ಉತ್ತಮ ನೆಮ್ಮದಿ ಬದುಕಿಗಾಗಿ ಜೀವನದಲ್ಲಿ ಶ್ರದ್ಧೆ, ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಎಂದು ಸಾನಿಧ್ಯ ವಹಿಸಿದ್ದ ತಡವಲಗ ಹಿರೇಮಠ ಸ್ವಾಮೀಜಿ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಬೊಳೆಗಾಂವ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ನಂದಿ ಬಸವೇಶ್ವರ ಜಾತ್ರೆಯ ಪ್ರಯುಕ್ತ ಅಡ್ಡ ಪಲ್ಲಕ್ಕಿ ಹಾಗೂ ಕಳಸಾರೋಹಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿದವು.ಜಾತ್ರೆಯಲ್ಲಿ ಚಿತ್ರ ವಿಚಿತ್ರ ಮದ್ದುಗಳ ಸುಡುತ್ತಾ ಪಲ್ಲಕ್ಕಿ ಮೆರವಣಿಗೆ ಹಾಗೂ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಚಂದ್ರಶೇಖರ ಹಿರೇಮಠ ಅವರ ಶ್ರವಣ ದೋಷವುಳ್ಳ ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ರಸಮಂಜರಿ, ನಾಟಕ ಕಾರ್ಯಕ್ರಮವು ಅತಿ ವಿಜ್ರಂಭಣೆಯಿಂದ ಜರುಗಿತು.ಬಸವಣ್ಣನವರ ಕುರಿತು ಪ್ರಭು ಸಾರವಾಡ ಉಪನ್ಯಾಸ ನೀಡಿದರು.ಡಿ.ಬಿ. ಚಾಂದಕವಟೆ ಉದ್ಘಾಟಿಸಿದರು.ಡಾ ಜಿ ಕೆ ಮಿರಗಿ ಅಧ್ಯಕ್ಷತೆ ವಹಿಸಿದ್ದರು. ಹಣಮಂತ ಗುಂಜುಟಗಿ,ಕಾಶೀನಾಥ, ಬಸಲಿಂಗಯ್ಯ ಹಿರೇಮಠ, ಶಿವಶಂಕರ ಕಪ್ಪೆನವರ, ನಿವೃತ್ತ ಯೋಧ ಸೋಮಶೇಖರ…
