ಇಂಡಿ:ನಾಟಕ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಕಲಿಕೆಯು ಕರಗತ ಮಾಡಿಕೊಳ್ಳುವ ಪೂರಕ ವಾತಾವರಣ ಒದಗಿಸಿ ಕೊಟ್ಟಂತೆ ಆಗುತ್ತದೆ ಎಂದು ಉಪನ್ಯಾಸಕ ಸದಾನಂದ ಈರನಕೇರಿ ಹೇಳಿದರು.
ಪಟ್ಟಣದ ಅಮರ ಫಂಕ್ಷನ್ ಹಾಲನಲ್ಲಿ ವಿಜಯಪುರ ರಂಗಸಿರಿ ಪ್ರತಿಷ್ಠಾನ ಹಾಗೂ ವಿವಿಧ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾಟಕ ಪ್ರದರ್ಶನ ವೀಕ್ಷಿಸಿ ಮಾತನಾಡುತ್ತಾ, ಮೌಲ್ಯಯುತ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.
ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಪಿಯುಸಿ ದ್ವಿತೀಯ ವರ್ಷದ ದೀರ್ಘ ಗದ್ಯ ಕೃಷ್ಣೇಗೌಡನ ಆನೆ, ಡಾಕ್ಟರ್ ಚಂದ್ರಶೇಖರ ಕಂಬಾರ ಬರೆದಿರುವ ಬೋಳೇಶಂಕರ ನಾಟಕಗಳು ಪ್ರದರ್ಶನಗೊಂಡವು. ವಿವಿಧ ಕಾಲೇಜು ವಿದ್ಯಾರ್ಥಿಗಳು, ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ವೇದಿಕೆಯ ಮೇಲೆ ಅಂಜುಮನ್ ಕಾಲೇಜು ಪ್ರಾಚಾರ್ಯ ಜೆ.ಡಿ. ಪೂಜಾರಿ, ದೂಮಗೊಂಡ, ಶಕೀನಾ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಹಿರಿಯ ಉಪನ್ಯಾಸಕರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

