ಇಂಡಿ: ಸತ್ತ ಮೇಲೆ ಏನನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಇರುವುದರೊಳಗೆ ಸಮಾಜದಲ್ಲಿ ಉತ್ತಮ ಕಾರ್ಯಗಳು ಮಾಡಬೇಕು. ಉತ್ತಮ ನೆಮ್ಮದಿ ಬದುಕಿಗಾಗಿ ಜೀವನದಲ್ಲಿ ಶ್ರದ್ಧೆ, ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಎಂದು ಸಾನಿಧ್ಯ ವಹಿಸಿದ್ದ ತಡವಲಗ ಹಿರೇಮಠ ಸ್ವಾಮೀಜಿ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಬೊಳೆಗಾಂವ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ನಂದಿ ಬಸವೇಶ್ವರ ಜಾತ್ರೆಯ ಪ್ರಯುಕ್ತ ಅಡ್ಡ ಪಲ್ಲಕ್ಕಿ ಹಾಗೂ ಕಳಸಾರೋಹಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ಜಾತ್ರೆಯಲ್ಲಿ ಚಿತ್ರ ವಿಚಿತ್ರ ಮದ್ದುಗಳ ಸುಡುತ್ತಾ ಪಲ್ಲಕ್ಕಿ ಮೆರವಣಿಗೆ ಹಾಗೂ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಚಂದ್ರಶೇಖರ ಹಿರೇಮಠ ಅವರ ಶ್ರವಣ ದೋಷವುಳ್ಳ ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ರಸಮಂಜರಿ, ನಾಟಕ ಕಾರ್ಯಕ್ರಮವು ಅತಿ ವಿಜ್ರಂಭಣೆಯಿಂದ ಜರುಗಿತು.
ಬಸವಣ್ಣನವರ ಕುರಿತು ಪ್ರಭು ಸಾರವಾಡ ಉಪನ್ಯಾಸ ನೀಡಿದರು.
ಡಿ.ಬಿ. ಚಾಂದಕವಟೆ ಉದ್ಘಾಟಿಸಿದರು.ಡಾ ಜಿ ಕೆ ಮಿರಗಿ ಅಧ್ಯಕ್ಷತೆ ವಹಿಸಿದ್ದರು. ಹಣಮಂತ ಗುಂಜುಟಗಿ,ಕಾಶೀನಾಥ, ಬಸಲಿಂಗಯ್ಯ ಹಿರೇಮಠ, ಶಿವಶಂಕರ ಕಪ್ಪೆನವರ, ನಿವೃತ್ತ ಯೋಧ ಸೋಮಶೇಖರ ಕೋಟೆನವರ, ರಾಜು ಹುಣಸಗಿ, ದತ್ತಾತ್ರೇಯ ತಾರಾಪುರ, ಮಲ್ಲು ಹುಣಸಗಿ, ಅಭಿಯಂತರ ಈರಣ್ಣ ಇಂಡಿ, ಬಸವರಾಜ ಹೊನ್ನಳ್ಳಿ, ಸಿದ್ದು ಹುಣಶ್ಯಾಳ, ಸೋಮನಿಂಗ ಸಿದ್ದಾಪುರ, ಚಂದು ಏಳೆಗಾ೦ವ, ಮಲ್ಲು ಮಿರಗಿ, ರಾಜು ಗೊಳ್ಳಗಿ, ಸಾಯಬಣ್ಣ ಗುಂಜಟಗಿ, ಗಣಪತಿ ನಾಗಶೆಟ್ಟಿ , ಮುದುಕಪ್ಪ ತಳವಾರ ಹಾಗೂ ಗ್ರಾಪಂ ಸದಸ್ಯ ಮಹಾದೇವಪ್ಪ ಹುಣಸಗಿ, ದಯಾನಂದ ಮಿರಗಿ, ಈರಣ್ಣ ಕಪ್ಪೇನವರ, ಸಂತೋಷ ಗೊಳಗಿ, ಶಿವಾನಂದ ಪೂಜಾರಿ, ಮಲ್ಲಪ್ಪ ಗೌಡ ಬಿರಾದಾರ,ಚಂದ್ರಶೇಖರ ಮಿರ್ಗಿ, ಹೊನಮಲ್ಲ ಕಪ್ಪೆನವರ, ಬಲವಂತರಾಗೌಡ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಶಿಕ್ಷಕ ಪ್ರಶಾಂತ ತಳವಾರ ನಿರೂಪಿಸಿದರು.ಶಿಕ್ಷಕ ರಮೇಶ ಮುಂಜಣ್ಣಿ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

