ವಿಜಯಪುರ: ಅಂಚೆ ಇಲಾಖೆಯಿಂದ ೬ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ ಸ್ಪರ್ಷ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಅಂಚೆ ಚೀಟಿಗಳ ಮೌಲ್ಯ ಮತ್ತು ಸಂಶೋಧನೆಯ ಕುರಿತಾದ ಹವ್ಯಾಸವನ್ನು ಬೆಳೆಸಲು ವಿದ್ಯಾರ್ಥಿವೇತನ ನೀಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜನೆ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೆ.೬೦ ರಷ್ಟು ಅಂಕ ಪಡೆದಿರಬೇಕು ಮತ್ತು ಅಂಚೆ ಚೀಟಿಗಳ ಠೇವಣಿ ಖಾತೆಯನ್ನು ಅಥವಾ ಅಂಚೆ ಚೀಟಿಗಳ ಕ್ಲಬ್‌ನಲ್ಲಿ ಸದಸ್ಯರಾಗಿರಬೇಕು.
ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೬ ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ದಿನಾಂಕ : ೦೩-೦೯-೨೦೨೪ ಕೊನೆಯ ದಿನಾಂಕವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಂತರ್ಜಾಲಗಳಾದ www.indiapost.govin and www.karnatakapost.gov.inಮತ್ತು ದೂ: ೦೮೩೫೨-೨೫೦೨೬೫, ೨೫೩೦೦೦, ಮೊ: ೯೯೪೫೪೫೭೯೭೬, ೭೦೧೯೪೯೪೮೪೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
