ವಿಜಯಪುರ:ನಗರದ ಯತ್ನಾಳ ರಸ್ತೆಯಲ್ಲಿರುವ ಮಹೇಂದ್ರಗಿರಿ ಕ್ಷೇತ್ರದಲ್ಲಿ ಭಗವಾನ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಮಹೋತ್ಸವವನ್ನು ಪರಮ ಪೂಜ್ಯ ಶ್ರೀಮಧ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರವಣಬೆಳಗೋಳ ಇವರ ಪಾವನ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ೫.೩೦ ರಿಂದ ಮಂಗಲ ವಾದ್ಯ ಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ, ರಥಯಾತ್ರೆ, ಜನಕಲ್ಯಾಣ ಯೋಜನೆಗಳ ಉದ್ಘಾಟನೆ ಭಗವಂತರಿಗೆ ಮಹಾ ಮಸ್ತಾಭಿಷೇಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನಪ್ರಸಾದ ನೆರವೇರಿತು. ಕೊನೆಯಲ್ಲಿ ನಡೆದ ಧರ್ಮಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಾದ ಸುಭಾಸ ಹೊಸಕಲ್ಲೆ ಹಾಗೂ ನಿವೃತ್ತರಾದ ಬಾಬು ಕೆ ಅನಾಜೆ, ಶಾಂತಿನಾಥ ಎಸ್ ಶಿವಣ್ಣವರ ಅವರನ್ನು ಸನ್ಮಾನಿಸಲಾಯಿತು.
ಧರ್ಮಸಭೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಸೌ.ಸ್ಮೀತಾ ಮಾಲಗುಂದಿ, ಲೋಕೇಶ ಹವಲೆ, ರಮೇಶ ಮಹಾಜನ ಹಾಗೂ ಕೆ.ಜೆ.ಎ. ಸದಸ್ಯರಾದ ಪ್ರವೀಣ ಕಾಸಾರ, ಟ್ರಸ್ಟಿಗಳಾದ ಪ್ರಕಾಶ ಚಂಕೇಶ್ವರ, ಸಮಾಜದ ಗಣ್ಯರಾದ ಮಿಲಿಂದ ಪಾಟೀಲ, ಭರಮಣ್ಣ ಶೆಟ್ಟಿ, ಶೀತಲ ಪಾಟೀಲ, ಬಾಹುಬಲಿ ಕಡಕೋಳ, ಅಶೋಕ ಬೋಗಾರ, ಚೇತನ ಸಗರೆ,ರವಿ ನಾಗಾವಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರಾದ ಶೀತಲ ಓಗಿಯವರು ಮಾತನಾಡುತ್ತ, ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ಅನ್ನದಾಸೋಹದ ವ್ಯವಸ್ಥೆ ಆರಂಭಿಸಲಾಗಿದ್ದು, ಯಾತ್ರಿಕರ ಸಕಲ ಸೌಲಭ್ಯಗಳನ್ನು ನೀಡಲು ಟ್ರಸ್ಟ್ ಬದ್ದವಾಗಿದೆ ಹಾಗಾಗಿ ಕ್ಷೇತ್ರದ ಅಭಿಮಾನಿಗಳ ಸಹಕಾರ ಅಪೇಕ್ಷಿತ ಎಂದರು.
ಪಾರ್ಶ್ವನಾಥ ಸೇವಾ ಸಮಿತಿ ಅದ್ಯಕ್ಷರಾದ ಸಂತೋಷ ಕವಟೇಕರ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

