ವಿಜಯಪುರ:ಸ್ವಾತಂತ್ರ್ಯ ಎಂದರೆ ಕತ್ತಲೆಯಿಂದ ಬೆಳಕಿನಡೆಗೆ ಬರುವುದು. ಆದಿ ಕಾಲದಿಂದಲೂ ಬ್ರಿಟಿಷರಿಂದ ತುಳಿತಕ್ಕೊಳಗಾಗಿ ನಮ್ಮ ಹಕ್ಕನ್ನು ಕಳೆದುಕೊಂಡು ಜೀವಂತ ಶವದಂತಾಗಿರುವ ಜೀವನವೂ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬರು ತಮ್ಮ ಹಕ್ಕಿನಂತೆ ಬದುಕುವುದಕ್ಕಾಗಿ ನಾನಾರೀತಿಯ ಹೋರಾಟಗಾರರು ತಮ್ಮ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಎಂದು ಪ್ರಕಾಶ ಆರ್ ಕೆ ಹೇಳಿದರು.
ಅವರು ನಗರದ ಹೊರವಲಯದ ಭೂತನಾಳ ಕ್ರಾಸ್, ಸೋಲಾಪೂರ ಬೈಪಾಸ್ ರಸ್ತೆಗೆ ಅಂಟಿಕೊಂಡಿರುವ ಅಂಡರ್‌ಗ್ರೌಂಡ್ ಮೇಲೆ ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಕೆಚ್ಚದೆಯ ಹೋರಾಟಗಾರ ಕಿತ್ತೂರ ಸಾಮ್ರಾಜ್ಯದ ಅಪ್ರತಿಮ ವೀರ, ಭಾರತ ಮಾತೆಯ ಹೆಮ್ಮೆಯ ಪುತ್ರ ಕ್ರಾಂತಿವೀರ ಸಂಗೋಳ್ಳಿರಾಯಣ್ಣನ ಭಾವಚಿತ್ರವು ಗಾನಯೋಗಿ ಸಂಘದ ವತಿಯಿಂದ ಬಿಡಿಸುವುದರ ಮೂಲಕ ನಮ್ಮ ಯುವ ಪೀಳಿಗೆಗೆ ಸಂದೇಶ ನೀಡವಲ್ಲಿ ಮುಂದಾಗಿದೆ ಎಂದರು.
ಆಧುನಿಕ ಯುಗದಲ್ಲಿ ಯುವಜನತೆ ಮೊಬೈಲ್ ಬಂಧನಗೊಂಡು ನಮ್ಮ ಭಾರತೀಯ ಸಂಸ್ಕೃತಿ, ನಮ್ಮ ದೇಶದ ಪ್ರಗತಿಯ ಚಿಂತನಗಳು ಮರೀಚಿಕೆಯಾದಂತಿವೆ. ಆದ ಕಾರಣ ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ದೇಶಕ್ಕಾಗಿ ಜೀವ ತ್ಯಾಗಗೈದ ಮಹನೀಯರ ಕುರಿತು ಸ್ಮರಿಸಬೇಕು. ಹಾಗೂ ದುಶ್ಚಟದಿಂದ ಹೊರಬಂದು ಅವರು ಸಹಿತ ದೇಶದ ಅಭಿವೃದ್ಧಿಗಾಗಿ ಚಿಂತಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗಾನಯೋಗಿ ಸಂಘದ ಸದಸ್ಯರುಗಳಾದ ಬಾಹುಬಲಿ ಶಿವಣ್ಣವರ, ರಾಜಕುಮಾರ ಹೊಸಟ್ಟಿ, ವೀರೇಶ ಸೊನ್ನಲಗಿ, ಸಚೀನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಸಚಿನ ಚವ್ಹಾಣ, ಬಾಬು ರೇವಣಸಿದ್ದಯ್ಯ ವಾಸುಕಿ, ಶ್ರೀನಾಥ, ಪ್ರದೀಪ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
ರಾಷ್ಟ್ರ ನಾಯಕರನ್ನು ಇಂದಿನ ಯುವ ಜನತೆ ಸ್ಮರಿಸಲಿ: ಪ್ರಕಾಶ ಆರ್ ಕೆ
Related Posts
Add A Comment

