Author: editor.udayarashmi@gmail.com

ಸಿಂದಗಿಯಲ್ಲಿ ವಿವಿಧೆಡೆ ಸಂಭ್ರಮದ ೭೮ನೆಯ ಸ್ವಾತಂತ್ರ‍್ಯ ದಿನಾಚರಣೆ ಸಿಂದಗಿ: ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ವಿದ್ಯಾರ್ಥಿಗಳು ಇತಿಹಾಸ ಸೃಷ್ಠಿಸುವ ಕಾರ್ಯ ಮಾಡುವ ಮೂಲಕ ದೇಶ ಅಭಿವೃದ್ಧಿಯ ಕನಸು ನನಸು ಮಾಡಬೇಕು ಎಂದು ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಹೇಳಿದರು.ಪಟ್ಟಣದ ಹೊರ ವಲಯದ ರಾಂಪೂರ ರಸ್ತೆಯಲ್ಲಿರುವ ಶ್ರೀ ಸಮರ್ಥ ವಿದ್ಯಾ ವಿಕಾಸ ಹಾಗೂ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ೭೮ನೆಯ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮಾತನಾಡಿದರು. ಅವರು, ಮಕ್ಕಳು ಓದಿಗಾಗಿ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಓದಿನಲ್ಲಿ ತೊಡಗಿಸಿಕೊಂಡು ಪರಸ್ಪರ ಚರ್ಚಿಸಬೇಕು. ವಿದ್ಯಾರ್ಥಿಗಳಲ್ಲಿ ಏನಾದರೂ ಗೊಂದಲಗಳಿದ್ದರೆ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೋರಾಟಗಳನ್ನು ಮಾಡಿದ ವೀರರನ್ನು ಸ್ಮರಿಸಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದೆಡೆಗೆ ಹೆಚ್ಚಿನ ಗಮನ ಹರಿಸುವಂತೆ ಕಿವಿಮಾತು ಹೇಳಿದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಶಾಲೆಯ ಮುಖ್ಯ ಗುರುಮಾತೆ ಸಾವಿತ್ರಿ ಅಸ್ಕಿ, ಸಂಸ್ಥೆಯ ಮಾರ್ಗದರ್ಶಕರಾದ ಎಸ್.ಬಿ.ಸಾಲೋಟಗಿ, ಪಾಲಕ ಪ್ರತಿನಿಧಿ ಶಶಿಕಾಂತ…

Read More

ಚಿಕ್ಕಪಡಸಲಗಿ: ಇಂದಿನ ಯುವಜನತೆ ಸ್ವಾತಂತ್ರ್ಯದ ಸೂಕ್ಷ್ಮತೆ ಅರಿತು ನಡೆಯಬೇಕು. ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಸ್ವಚ್ಛಂದಕ್ಕೆ ಎಂದೂ ಬಳಸಿಕೊಳ್ಳಬಾರದು. ಸ್ವಾತಂತ್ರ್ಯದ ಪವಿತ್ರತೆಯಡಿಯಲ್ಲಿ ನೆಮ್ಮದಿ ಕಾಣಬೇಕು ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹೇಳಿದರು.ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಭವಿಷ್ಯತ್ತಿನ ಯುವ ತಲೆಮಾರುಗಳಲ್ಲಿ ಸ್ವಾತಂತ್ರ್ಯದ ಅರಿವು ಮೂಡಲಿ ಎಂದರು.ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ರ ವಿರುದ್ಧ ಭಾರತೀಯರು ತೊಡೆತಟ್ಟಿ ನಿಂತರು. ಕಠಿಣಾತೀತಿ ಶಿಕ್ಷೆ ಅನುಭವಿಸಿ ನರಳಾಡಿದರು.ಇಡೀ ಜೀವನ ಭಾರತದ ಚರಿತ್ರೆಯ ಭವಿಷ್ಯಕ್ಕಾಗಿ ಮುಡಪಾಗಿಟ್ಟು ಜೀವ ತೆತ್ತಿದ್ದಾರೆ. ಅಸಂಖ್ಯಾತ ಮಹನೀಯರ ತ್ಯಾಗ,ಬಲಿದಾನದ ಮೂಲಕ ಗಿಟ್ಟಿಸಿರುವ ಸ್ವಾತಂತ್ರ್ಯದ ಇತಿಹಾಸ ಬಿಕ್ಕಳಿಕೆಗಳನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.ಧ್ವಜಾರೋಹಣ ನೆರವೇರಿಸಿದ ಶಾಲಾ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ರಾಜು ಹಣಮಂತ ತೇರದಾಳ, ಅಸಂಖ್ಯಾತ ಹುತಾತ್ಮ ದೇಶಭಕ್ತ ಧ್ರುವಗಳೇ ನಮಗೆಲ್ಲ ಪ್ರೇರಕರು ಎಂದರು.ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಶಾಲಾ ಆಡಳಿತ ಮಂಡಳಿ ಸದಸ್ಯ…

Read More

ಮುದ್ದೇಬಿಹಾಳ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಂದು ರಾಜ್ಯದಲ್ಲಿ ಭಾಷೆ, ಅಹಾರ, ಉಡುಪು, ಆಚಾರ, ಧರ್ಮ ಎಲ್ಲರದಲ್ಲೂ ವ್ಯತ್ಯಾಸ ವಿದ್ದರೂ ನಾವೆಲ್ಲ ಒಂದಾಗಿ ಬಾಳುತ್ತಿದ್ದೇವೆ ಇದೇ ಭಾರತ ದೇಶದ ಸಂವಿಧಾನದ ವಿಶೇಷತೆ ಎಂದು ಶಾಸಕ, ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ತಾಲೂಕು ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ನನ್ನ ದೇಶ ಮೊದಲು ನಂತರ ನಾನು ನನ್ನ ಕುಟುಂಬ ಎನ್ನುವ ಭಾವನೆ ನಮ್ಮೆಲ್ಲರಲ್ಲಿ ಬರಬೇಕು. ಎಲ್ಲರೂ ಒಂದಾಗಿ ಬಾಳುವದು ಮುಖ್ಯ ಎನ್ನುವದು ಅರಿತುಕೊಳ್ಳಬೇಕು. ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದಲ್ಲಿ ಮುಂದೆ ಕರಾಳವಾದ ದಿನಗಳನ್ನು ಎದುರಿಸಬೇಕಾಗಬಹುದು ಎಂದರು.ತಹಶೀಲ್ದಾರ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರö್ಯ ಸುಲಭವಾಗಿ ಸಿಕ್ಕಿಲ್ಲ. ಹಲವಾರು ವರ್ಷಗಳ ಕಾಲ ಹೋರಾಟಗಳು ತ್ಯಾಗ ಬಲಿದಾನಗಳು ನಡೆದಿವೆ. ದೇಶದ…

Read More

ಆಲಮಟ್ಟಿ: ಈ ಭಾಗದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಶಿಕ್ಷಣ ದೊರೆಯಲಿ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಶಾಲೆಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಸ್ಮಾರ್ಟ್ ಕ್ಲಾಸ್ ಇದೇ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಕೊಡಲಾಗುವುದು ಎಂದು ಕೆಬಿಜೆಎನ್‌ಎಲ್ ಎಂಡಿ ಕೆ.ಪಿ.ಮೋಹನರಾಜ್ ತಿಳಿಸಿದರು.ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.೧೨ ನೇ ಶತಮಾನದಲ್ಲಿ ಬಸವಣ್ಣನವರ ವೈಚಾರಿಕ ಕ್ರಾಂತಿ, ೨೦ ನೇ ಶತಮಾನದಲ್ಲಿ ಆಲಮಟ್ಟಿ ಜಲಾಶಯದಿಂದಾದ ನೀರಾವರಿ ಕ್ರಾಂತಿ ಈ ಭಾಗದ ಜನರ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಮೂಲ ಕಾರಣವಾಗಿವೆ ಎಂದರು.ಪAಚವಾರ್ಷಿಕ ಯೋಜನೆಯ ಫಲವಾಗಿ ೧೯೬೪ ರಲ್ಲಿ ಅಡಿಗಲ್ಲು ಹಾಕಿ ೨೦೦೨ ರಿಂದ ನೀರಾವರಿಗಾಗಿ ಐದು ಜಿಲ್ಲೆಗಳ ಸುಮಾರು ೬.೫ ಲಕ್ಷ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತಿರುವ ಆಲಮಟ್ಟಿ ಜಲಾಶಯದ ಭಾಗ ನಾವೆಲ್ಲರೂ ಆಗಿದ್ದೇವೆ ಎಂಬ ಹೆಮ್ಮೆ ಇದೆ ಎಂದರು.ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ…

Read More

ಸಿಂದಗಿ:ಎಲ್ಲೆಡೆ ೭೮ನೇ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಆದರೆ ಕೆಲವೊಂದು ಕಡೆ ಒಂದಲ್ಲ ಒಂದು ಯಡವಟ್ಟುಗಳು ಆಗುತ್ತವೆ. ಆದರೂ ಅದಕ್ಕೆ ಸಂಬಂಧಿಸಿದವರು ಕೂಡಲೇ ಎಚ್ಚೆತ್ತುಕೊಳ್ಳದೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಾರೆ. ಅಂತಹದ್ದೆ ಒಂದು ಘಟನೆ ಪಟ್ಟಣದಲ್ಲಿರುವ ಪುರಸಭೆ ಕಚೇರಿ ಮೇಲೆ ನೆರವೇರಿಸಿದ ಧ್ವಜಾರೋಹಣದ ವೇಳೆ ನಡೆದಿದೆ. ಆದರೂ ಅದನ್ನು ಸರಿಪಡಿಸುವ ಕೆಲಸ ಮಾಡದೆ ಹೋಗಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ ಘಟನೆ ಸಿಂದಗಿ ಪುರಸಭೆಯಲ್ಲಿ ನಡೆದಿದೆ. ೭೮ನೇ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಾವುಟ ಉಲ್ಟಾ ಹಾರಿಸಲಾಗಿದೆ. ಇದನ್ನು ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಗಮನಿಸದೆ ಹೋಗಿರುವುದು ನಿಜಕ್ಕೂ ವಿಷಾದನೀಯ.ಈ ಬಗ್ಗೆ ಸ್ಪಷ್ಟನೆ ಕೇಳಲು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಫೋನ್ ಮಾಡಿ ಮಾತನಾಡಿದಾಗ ಅವರು ಹೇಳಿದ್ದು, ನನಗೆ ಆಲಮೇಲದ ಚಾರ್ಜ್ ಸಹ ಇದೆ. ಇಲ್ಲಿ ಮುಂಜಾನೆ ಧ್ವಜಾರೋಹಣ ಮಾಡುವಾಗ ಸರಿಯಾಗಿಯೇ ಇದೆ. ಈ ಬಗ್ಗೆ ನಮ್ಮಲ್ಲಿ ವಿಡಿಯೋ ಸಹ ಇದೆ. ಆದರೆ,…

Read More

ಸಿಂದಗಿ:ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ಅನೇಕರ ಜೀವನದಲ್ಲಿ ಬೆಳಕು ಚೆಲ್ಲುವಲ್ಲಿ ಈ ಯೋಜನೆಗಳು ಸಹಕಾರಿಯಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ೭೮ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ದೇಶ ಸ್ವತಂತ್ರ ಬಂದ ನಂತರ ಭಾರತವನ್ನು ಅತ್ಯಂತ ಪ್ರಗತಿಯತ್ತ ಕೊಂಡ್ಯೊಯಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಜಗತ್ತಿನಲ್ಲಿಯೇ ಮುನ್ನಡೆಯ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಹಿರಿಯ ನಾಯಕರ ಪ್ರಯತ್ನದ ಫಲವಾಗಿ ಇಂದು ೭೮ನೆಯ ಸ್ವಾತಂತ್ರೋತ್ಸವವನ್ನು ಬಹಳ ಅಭಿಮಾನದಿಂದ ಆಚರಣೆ ಮಾಡುತ್ತಿದ್ದೇವೆ. ಜಾತಿ, ಧರ್ಮ, ಮತಗಳಿಗಿಂತ ದೇಶ ಪ್ರೇಮ ದೊಡ್ಡದು. ಸಂವಿಧಾನದಿಂದ ಭಾರತ ಬದಲಾಗಿದೆ. ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನ. ಇಂದು ನಾವೆಲ್ಲರೂ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು. ಈ ಭಾಗದ ಶಾಸಕನಾಗಿ ಆಯ್ಕೆಯಾದ ಬಳಿಕ ಸಿಂದಗಿ ಮತಕ್ಷೇತ್ರವನ್ನು ಅಭಿವೃದ್ಧಿ…

Read More

ಚಡಚಣ: ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್.ಎನ್.ಹತ್ತಳ್ಳಿ ಹೇಳಿದರು.ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೮ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸುವಂತಾಗಬೇಕು ಎಂದರು.ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ ಮಾತನಾಡುತ್ತ,ಭಾರತ ಸ್ವಾತಂತ್ರ್ಯ ಕ್ಕಾಗಿ ಲಕ್ಷಾಂತರ ಮಂದಿ ದೇಶ ಭಕ್ತರು, ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ೨೦೦ ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು ಎಂದರು.ಈ ವೇಳೆ ವಿದ್ಯಾರ್ಥಿಗಳು ಭಾರತ ಮಾತೆ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿಕೊಂಡು,ದೇಶಭಕ್ತಿ ಹಾಡು, ನೃತ್ಯ ಹಾಗೂ…

Read More

ಇಂಡಿ: ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು ಎಲ್ಲರೂ ಸಂಪನ್ಮೂಲ ವ್ಯಕ್ತಿಗಳಾದರೆ ಭಾರತ ಶಕ್ತಿಶಾಲಿ ಮತ್ತು ಸರ್ವಶಕ್ತ ಶ್ರೇಷ್ಠ ಭಾರತವಾಗುತ್ತದೆ.ಇದು ಅಂಬೇಡ್ಕರ್ ಮತ್ತು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ ಅಗತ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ತಾಲೂಕಾ ಆಡಳಿತ ವತಿಯಿಂದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ೭೮ನೆಯ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತವು ೭೮ ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವಾಗ ಅಲ್ಲಿಂದ ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ಮತ್ತು ಇಂದಿನ ಅಭಿವೃದ್ದಿ ಹೊಂದಿದ ದೇಶದ ಕಲ್ಪನೆಯನ್ನು ಅವಲೋಕಿಸಿದಾಗ ಹೆಮ್ಮೆ ಎನಿಸುತ್ತದೆ.ಸ್ವಾವಲಂಬಿ ಅರ್ಥಿಕತೆಯನ್ನು ನಿರ್ಮಿಸುವತ್ತ ಪ್ರಾಥಮಿಕ ಗಮನ ಹರಿಸಿದ್ದ ಭಾರತ ತಂತ್ರಜ್ಞಾನ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಜಾಗತಿಕ ನಾಯಕನಾಗಿ ಮಾರ್ಪಟ್ಟಿದೆ ಎಂದರು.ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ,ತಹಶೀಲ್ದಾರ್ ಬಿ ಎಸ್ ಕಡಕಬಾವಿ,ಶಿಕ್ಷಕ ಬಸವರಾಜ ಗೋರನಾಳ ಮಾತನಾಡಿದರು.ವೇದಿಕೆಯ ಮೇಲೆ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್,ಇಒ ಗುರುಶಾಂತ ಬಳುಂಡಗಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮತ್ತಿತರಿದ್ದರು.ಲಚ್ಯಾಣದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸುವಲ್ಲಿ…

Read More

ಢವಳಗಿ:ಗ್ರಾಮದಲ್ಲಿ ಅಗಸ್ಟ15 ಗುರುವಾರದಂದು ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಎಮ್ ಜಿ ಬಿರಾದಾರ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಮೇಲಿನಮನಿ, ಮ ಬ ಪಾಟೀಲ ಪ್ರೌಢಶಾಲೆಯಲ್ಲಿ ಎಸ್ ಎಸ್ ಪಾಟೀಲ,ಮಡಿವಾಳೇಶ್ವರ ಉಚಿತ ಪ್ರಸಾದನಿಲಯದಲ್ಲಿ ಜಿ ಎಸ್ ಕೋರಿ, ಪ್ರಾಥಮಿಕ ಸಹಕಾರಿ ಸಂಘದ ಕಛೇರಿಯಲ್ಲಿ ಅಧ್ಯಕ್ಷ ರುದ್ರಗೌಡ ಪಾಟೀಲ ಹಾಗೂ ಹುತಾತ್ಮ ಯೋಧ ಮಡಿವಾಳಪ್ಪ ನಾಯನೇಗಲಿ ಅವರ ಪ್ರತಿಮೆಯ ಮುಂದೆ ರಾಜುಗೌಡ ಗೌಡರ, ನಾಡ ಕಛೇರಿ ಆವರಣದಲ್ಲಿ ಉಪ ತಹಶೀಲ್ದಾರ್ ಎಸ್ ಬಾವಿಕಟ್ಟಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.ಗ್ರಾಪಂ ಸಭಾ ಭವನದಲ್ಲಿ ಗ್ರಾಮದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸರಕಾರಿ ನೌಕರ ಸಂಘದಿಂದ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ಢವಳಗಿ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಮ್ ಕೆ ಗುಡಿಮನಿ ಅವರಿಗೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ…

Read More

ಚಿಮ್ಮಡ: ಗ್ರಾಮದಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಸಡಗರ ಸಂಭ್ರಮದೊಂದಿಗೆ ಹಮ್ಮಿಕೊಳ್ಳಲಾಗಿದೆ.ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಕವಾಯತು, ಪ್ರಭಾತ್ ಫೇರಿ, ಸೈನಿಕರು ಹಾಗೂ ಸಾಧಕರ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.ಸ್ಥಳೀಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಧ್ವಜಾರೊಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಮೋಟಗಿ ನೆರೆವೇರಿಸಿದರು. ಉಪಾಧ್ಯಕ್ಷೆ ಪ್ರೇಮಾ ಗೋವಿಂದಗೋಳ,ಮಾಜಿ ಅಧ್ಯಕ್ಷ ಆನಂದ ಕವಟಗೋಪ್ಪ, ಗುರಲಿಂಗಪ್ಪಾ ಪೂಜಾರಿ, ಪ್ರಭು ನೇಸೂರ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಹಲವಾರು ಜನ ಪ್ರಮುಖರು ಆಗಮಿಸಿದ್ದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಹಣಮಂತ ನೇಸೂರ ನೆರವೇರಿಸಿದರು. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ನಿರ್ದೆಶಕರಾದ ನಿಂಗಣ್ಣ ಪೂಜಾರಿ, ರಾಮಪ್ಪ ಜಗದಾಳ, ಚನ್ನಪ್ಪ ಬಿಳ್ಳೂರ, ಸೇರಿದಂತೆ ಅನೇಕ ರೈತಪ್ರಮುಖರು ಆಗಮಿಸಿದ್ದರು.ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಎಂ ಎಸ್ ಜಿಟ್ಟಿ…

Read More