ಚಿಮ್ಮಡ: ಗ್ರಾಮದಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಸಡಗರ ಸಂಭ್ರಮದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಕವಾಯತು, ಪ್ರಭಾತ್ ಫೇರಿ, ಸೈನಿಕರು ಹಾಗೂ ಸಾಧಕರ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಧ್ವಜಾರೊಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಮೋಟಗಿ ನೆರೆವೇರಿಸಿದರು. ಉಪಾಧ್ಯಕ್ಷೆ ಪ್ರೇಮಾ ಗೋವಿಂದಗೋಳ,ಮಾಜಿ ಅಧ್ಯಕ್ಷ ಆನಂದ ಕವಟಗೋಪ್ಪ, ಗುರಲಿಂಗಪ್ಪಾ ಪೂಜಾರಿ, ಪ್ರಭು ನೇಸೂರ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಹಣಮಂತ ನೇಸೂರ ನೆರವೇರಿಸಿದರು. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ನಿರ್ದೆಶಕರಾದ ನಿಂಗಣ್ಣ ಪೂಜಾರಿ, ರಾಮಪ್ಪ ಜಗದಾಳ, ಚನ್ನಪ್ಪ ಬಿಳ್ಳೂರ, ಸೇರಿದಂತೆ ಅನೇಕ ರೈತಪ್ರಮುಖರು ಆಗಮಿಸಿದ್ದರು.
ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಎಂ ಎಸ್ ಜಿಟ್ಟಿ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ಇದ್ದರು. ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರ ಪ್ರಾಚಾರ್ಯ ಬಿ ಬಿ ಕುದರಿಮನಿ ಧ್ವಜಾರೋಹಣ ನಡೆಸಿದರು. ಸಮಿತಿಯ ಅಧ್ಯಕ್ಷ ಬಸವರಾಜ ಕುಂಚನೂರ, ಉಪನ್ಯಾಸಕ ಎಚ್ ಎಂ ಕುಂಬಾರ ಇದ್ದರು. ಪಿ ಪಿ ಮಾಳಿಗಡ್ಡಿ, ಮಠದ ಹಿ.ಪ್ರಾ ಶಾಲೆಯಲ್ಲಿ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಧ್ವಜಾರೋಹಣವನ್ನು ಯೋಧ ಗಂಗಾಧರ ನಾವಿಯವರಿಂದ ನೆರವೇರಿಸಲಾಯಿತು. ರಾಮಣ್ಣ ಮುಗಳಖೋಡ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ರಾಮಪ್ಪ ಬಗನಾಳ, ಪರಪ್ಪಾ ಪಾಲಭಾವಿ ಉಪಸ್ಥಿತರಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಡಿವೆಪ್ಪ ಪರೀಟ, ಸರಕಾರಿ ಹೆಣ್ಣು ಮಕ್ಕಳ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಹಿರಿಯ ಶಿಕ್ಷಕಿ ಪಿ.ಕೆ. ಮಳಲಿ, ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ ನೆರವೇರಿಸಿದರು.ಗ್ರಾಮ ಚಾವಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ನೆರವೇರಿಸಿದರು.
ಅಲ್ಲದೇ ಓಂ ಪ್ರಭುಲಿಂಗ ಐಟಿಐ ಕಾಲೇಜು, ಭೂಮಿಕಾ ಸಮೂಹ ಸಂಸ್ಥೆಯ ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಶ್ರೀ ಬನಶಂಕರಿ ವಿದ್ಯುತ ಮಗ್ಗಗಳ ಸಹಕಾರಿ ಸಂಘ, ಪಶು ಚಿಕಿತ್ಸಾಲಯ, ಪ್ರಭುಲಿಂಗೇಶ್ವರ ಸಹಕಾರಿ ಬ್ಯಾಂಕ, ವಿಶ್ವಭಾರತಿ ಪ್ರಾಥಮಿಕ ಶಾಲೆ, ಗುರುಪ್ರಿಯಾ ವಿವಿದ್ಧೋದೇಶಗಳ ಸೌಹಾರ್ದ ಬ್ಯಾಂಕ, ಗಜಾನನ ನೇಕಾರರ ಸಹಕಾರಿ ಸಂಘ, ಗರೀಬಿ ಹಟಾವೋ ಸಹಕಾರಿ ಸಂಘ, ಬಸವೇಶ್ವರ ಯುವಕ ಸಂಘ, ನವಜ್ಯೋತಿ ವಿವಿದೋದ್ದೆಶಗಳ ಸೌಹಾರ್ದ ಬ್ಯಾಂಕ, ಸದ್ಗುರುನಾಥ ಸಹಕಾರಿ ಬ್ಯಾಂಕ ಸೇರಿದಂತೆ ಇನ್ನೂ ಹಲವಾರು ಸಂಸ್ಥೆ, ವಿದ್ಯಾಕೇಂದ್ರಗಳಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಲವಾರು ಜನ ಪ್ರಮುಖರು ದೇಶಪ್ರೇಮಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

