ಆಲಮಟ್ಟಿ: ಈ ಭಾಗದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಶಿಕ್ಷಣ ದೊರೆಯಲಿ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಶಾಲೆಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಸ್ಮಾರ್ಟ್ ಕ್ಲಾಸ್ ಇದೇ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಕೊಡಲಾಗುವುದು ಎಂದು ಕೆಬಿಜೆಎನ್‌ಎಲ್ ಎಂಡಿ ಕೆ.ಪಿ.ಮೋಹನರಾಜ್ ತಿಳಿಸಿದರು.
ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ಬಸವಣ್ಣನವರ ವೈಚಾರಿಕ ಕ್ರಾಂತಿ, ೨೦ ನೇ ಶತಮಾನದಲ್ಲಿ ಆಲಮಟ್ಟಿ ಜಲಾಶಯದಿಂದಾದ ನೀರಾವರಿ ಕ್ರಾಂತಿ ಈ ಭಾಗದ ಜನರ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಮೂಲ ಕಾರಣವಾಗಿವೆ ಎಂದರು.
ಪAಚವಾರ್ಷಿಕ ಯೋಜನೆಯ ಫಲವಾಗಿ ೧೯೬೪ ರಲ್ಲಿ ಅಡಿಗಲ್ಲು ಹಾಕಿ ೨೦೦೨ ರಿಂದ ನೀರಾವರಿಗಾಗಿ ಐದು ಜಿಲ್ಲೆಗಳ ಸುಮಾರು ೬.೫ ಲಕ್ಷ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತಿರುವ ಆಲಮಟ್ಟಿ ಜಲಾಶಯದ ಭಾಗ ನಾವೆಲ್ಲರೂ ಆಗಿದ್ದೇವೆ ಎಂಬ ಹೆಮ್ಮೆ ಇದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಕೆಬಿಜೆಎನ್‌ಎಲ್ ಅಧಿಕಾರಿಗಳಾದ ವಿ.ಆರ್. ಹಿರೇಗೌಡ್ರ, ಬಿ.ಎಸ್. ಪಾಟೀಲ, ವಿ.ಜಿ. ಕುಲಕರ್ಣಿ, ಐ.ಎಲ್. ಕಳಸಾ, ತಾರಾಸಿಂಗ ದೊಡಮನಿ, ಡಿಎಫ್ ಓ ಆರ್.ಎನ್. ನಾಗಶೆಟ್ಟಿ, ಕೆಎಸ್‌ಐಎಸ್‌ಎಫ್ ಕಮಾಂಡೆಂಟ್ ಅರುಣ ಡಿ.ವಿ., ಇನ್ಸಪೆಕ್ಟರ್ ಶಿವಲಿಂಗ ಕುರೆನ್ನವರ, ಪಿ.ಎ. ಹೇಮಗಿರಿಮಠ, ಎಸ್.ಐ.ಗಿಡ್ಡಪ್ಪಗೋಳ, ಜಿ.ಎಂ. ಕೊಟ್ಯಾಳ, ಬಿ.ಎಸ್. ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಪಿಎ??? ಎಫ್.ಎಸ್. ಇಂಡಿಕರ, ಜಿ.ಸಿ. ದ್ಯಾವಣ್ಣವರ, ಕೆ.ಎನ್. ಹಿರೇಮಠ, ತನುಜಾ ಪೂಜಾರಿ, ವೈ.ಎಂ. ಪಾತ್ರೋಟ, ಎಂ.ಎಸ್. ದಂದರಗಿ, ನಿಸ್ಸಾರ್ ಪಿಂಜಾರ ಮತ್ತೀತರರು ಇದ್ದರು.ಗಂಗಾಧರ ಎಂ.ಹಿರೇಮಠ. ಪ್ರಾರ್ಥಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು.
ಆಲಮಟ್ಟಿಯ ೧೦ ಕ್ಕೂ ಅಧಿಕ ವಿವಿಧ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ಹಾಗೂ ಡಿಸ್ ಪ್ಲೇ ನೃತ್ಯವನ್ನು ಪ್ರದರ್ಶಿಸಿದರು.
ಶಾಲೆಯಲ್ಲಿ: ಆಲಮಟ್ಟಿ ಡ್ಯಾಂಸೈಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಳ ಆವರಣದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಬಿ.ಎಸ್. ಯರವಿನತೆಲಿಮಠ, ಸಾವಿತ್ರಿ ಅಂಗಡಿ, ಸುರೇಶ ಹುರಕಡ್ಲಿ, ಬಿ.ಜಿ. ಪೊಲೀಸ್ ಪಾಟೀಲ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಆಲಮಟ್ಟಿಯ ಶಾಲೆಗಳಿಗೆ ಕೆಬಿಜೆನ್ನೆಲ್ ನಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆ
Related Posts
Add A Comment

