ಇಂಡಿ: ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು ಎಲ್ಲರೂ ಸಂಪನ್ಮೂಲ ವ್ಯಕ್ತಿಗಳಾದರೆ ಭಾರತ ಶಕ್ತಿಶಾಲಿ ಮತ್ತು ಸರ್ವಶಕ್ತ ಶ್ರೇಷ್ಠ ಭಾರತವಾಗುತ್ತದೆ.ಇದು ಅಂಬೇಡ್ಕರ್ ಮತ್ತು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ ಅಗತ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ತಾಲೂಕಾ ಆಡಳಿತ ವತಿಯಿಂದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ೭೮ನೆಯ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತವು ೭೮ ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವಾಗ ಅಲ್ಲಿಂದ ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ಮತ್ತು ಇಂದಿನ ಅಭಿವೃದ್ದಿ ಹೊಂದಿದ ದೇಶದ ಕಲ್ಪನೆಯನ್ನು ಅವಲೋಕಿಸಿದಾಗ ಹೆಮ್ಮೆ ಎನಿಸುತ್ತದೆ.
ಸ್ವಾವಲಂಬಿ ಅರ್ಥಿಕತೆಯನ್ನು ನಿರ್ಮಿಸುವತ್ತ ಪ್ರಾಥಮಿಕ ಗಮನ ಹರಿಸಿದ್ದ ಭಾರತ ತಂತ್ರಜ್ಞಾನ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಜಾಗತಿಕ ನಾಯಕನಾಗಿ ಮಾರ್ಪಟ್ಟಿದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ,ತಹಶೀಲ್ದಾರ್ ಬಿ ಎಸ್ ಕಡಕಬಾವಿ,ಶಿಕ್ಷಕ ಬಸವರಾಜ ಗೋರನಾಳ ಮಾತನಾಡಿದರು.
ವೇದಿಕೆಯ ಮೇಲೆ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್,ಇಒ ಗುರುಶಾಂತ ಬಳುಂಡಗಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮತ್ತಿತರಿದ್ದರು.
ಲಚ್ಯಾಣದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸುವಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಆರೋಗ್ಯ ಇಲಾಖೆಯ ಟಿಎಚ್‌ಒ ಅರ್ಚನಾ ಕುಲಕರ್ಣಿ,ಸರಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ|| ವಿಪುಲ್ ಕೋಳೇಕರ, ಡಾ|| ಚೈತ್ರಾ ಬಜಂತ್ರಿ,ಶಾಂತಾಬಾಯಿ ಶಹಾಪುರ,ಎಂ.ಎಫ್. ದರ್ಗಾ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕಂದಾಯ ಇಲಾಖೆಯ ಎಚ್.ಎಸ್.ಗುನ್ನಾಪುರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಅವಜಿ, ಪೋಲಿಸ ಇಲಾಖೆಯ ಎಸ್.ಎಂ.ಬಗಲಿ,ಎ ಆಯ್ ಮಠಪತಿ,ಎಸ್ ವಾಯ್ ಜೆರಟಗಿ,ಆರ್ ಎಸ್ ಪಡಗಾನೂರ ಮತ್ತು ವಿ.ಜಿ.ಪರಮಗೊಂಡ ಇವರನ್ನು ಸನ್ಮಾನಿಸಲಾಯಿತು..
ಅಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ,ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅದಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ಪ್ರಾಢಶಾಲೆ ಸಾತಲಗಾಂವದ ವಿಜಯಲಕ್ಷ್ಮೀ ಆಲಮೇಲ ಇವರಿಗೆ ಇಂಡಿಯ ಶ್ರೀ ಶಾಂತೇಶ್ವರ ಶಾಲೆಯಲ್ಲಿ ೧೯೮೯ ರಲ್ಲಿ ಕಲಿತ ಗೆಳೆಯರ ಬಳಗದ ವತಿಯಿಂದ ಹತ್ತು ಸಾವಿರ ರೂ. ಸುರೇಶ ಕೋಳೆಕರ ಗುರುಗಳ ಸ್ಮರಣಾರ್ಥ ನೀಡಿ ಗೌರವಿಸಲಾಯಿತು.
ಇದಕ್ಕೂ ಮೊದಲು ಎಸಿ ಅಬೀದ್ ಗದ್ಯಾಳ ಇವರಿಗೆ ಪೋಲಿಸ, ಹೋಮಗಾರ್ಢ, ಎನ್.ಸಿ.ಸಿ ಮತ್ತು ವಿವಿಧ ಶಾಲೆಯ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಪುರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜು ಮುಖ್ಯಸ್ಥರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ಶಕ್ತಿ ಶಾಲಿ ಶ್ರೇಷ್ಠ ಭಾರತ ನಮ್ಮ ಕನಸಾಗಬೇಕು: ಯಶವಂತರಾಯಗೌಡ
Related Posts
Add A Comment

