ಸಿಂದಗಿಯಲ್ಲಿ ವಿವಿಧೆಡೆ ಸಂಭ್ರಮದ ೭೮ನೆಯ ಸ್ವಾತಂತ್ರ‍್ಯ ದಿನಾಚರಣೆ
ಸಿಂದಗಿ: ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ವಿದ್ಯಾರ್ಥಿಗಳು ಇತಿಹಾಸ ಸೃಷ್ಠಿಸುವ ಕಾರ್ಯ ಮಾಡುವ ಮೂಲಕ ದೇಶ ಅಭಿವೃದ್ಧಿಯ ಕನಸು ನನಸು ಮಾಡಬೇಕು ಎಂದು ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಹೇಳಿದರು.
ಪಟ್ಟಣದ ಹೊರ ವಲಯದ ರಾಂಪೂರ ರಸ್ತೆಯಲ್ಲಿರುವ ಶ್ರೀ ಸಮರ್ಥ ವಿದ್ಯಾ ವಿಕಾಸ ಹಾಗೂ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ೭೮ನೆಯ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮಾತನಾಡಿದರು. ಅವರು, ಮಕ್ಕಳು ಓದಿಗಾಗಿ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಓದಿನಲ್ಲಿ ತೊಡಗಿಸಿಕೊಂಡು ಪರಸ್ಪರ ಚರ್ಚಿಸಬೇಕು. ವಿದ್ಯಾರ್ಥಿಗಳಲ್ಲಿ ಏನಾದರೂ ಗೊಂದಲಗಳಿದ್ದರೆ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೋರಾಟಗಳನ್ನು ಮಾಡಿದ ವೀರರನ್ನು ಸ್ಮರಿಸಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದೆಡೆಗೆ ಹೆಚ್ಚಿನ ಗಮನ ಹರಿಸುವಂತೆ ಕಿವಿಮಾತು ಹೇಳಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಶಾಲೆಯ ಮುಖ್ಯ ಗುರುಮಾತೆ ಸಾವಿತ್ರಿ ಅಸ್ಕಿ, ಸಂಸ್ಥೆಯ ಮಾರ್ಗದರ್ಶಕರಾದ ಎಸ್.ಬಿ.ಸಾಲೋಟಗಿ, ಪಾಲಕ ಪ್ರತಿನಿಧಿ ಶಶಿಕಾಂತ ಚಿಕ್ಕಯ್ಯನಮಠ, ಯಶೋಧ ಕುಲಕರ್ಣಿ, ಸುಹಾಸಿನಿ ಹಂಚಿನಾಳ, ಮಹಾನಂದ ದೇವಣಗಾವ್, ನಂದಿನಿ ಚವ್ಹಾಣ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸ್ವಾತಂತ್ರ ಹೋರಾಟಗಾರರ ಛದ್ಮವೇಷದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಬಾಲಕಿಯರ ವಸತಿ ನಿಲಯ: ಪಟ್ಟಣದ ಆರ್.ಡಿ.ಪಾಟೀಲ್ ಕಾಲೇಜಿನ ಎದುರುಗಡೆಯಿರುವ ಶ್ರೀ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಜರುಗುವ ಮಹಿಳಾ ವಸತಿ ನಿಲಯದಲ್ಲಿ ಸಿಂದಗಿ ಪಿಎಸ್‌ಐ ಆರೀಫ ಮುಷಾಪುರಿ ಧ್ವಜಾರೋಹಣ ನೇರವೇರಿಸಿದರು.
ಇದೇ ವೇಳೆ ವಸತಿ ನಿಲಯ ಮೇಲ್ವಿಚಾರಕಿ ಜಯಶ್ರೀ ಬಿರಾದಾರ, ಸುಜಾತಾ ಕಲಬುರಗಿ, ರಶ್ಮಿ ನೂಲಾನವರ, ವಿದ್ಯಾ ದೇಸಾಯಿ ಸೇರಿದಂತೆ ವಸತಿ ನಿಲಯದ ಸಿಬ್ಬಂದಿ, ಶಿಶು ಪಾಲನ ಕೇಂದ್ರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಜ್ಞಾನ ಭಾರತಿ ಶಾಲೆ: ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಅವರು ಧ್ವಜಾರೋಹಣ ನೆರವೇರಿಸಿ, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್‌ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ, ಜಗನ್ನಾಥ ಪಾಟೀಲ, ಮಾಳು ಹೊಸುರ, ಬುಳ್ಳಪ್ಪ ಡಿ, ಪ್ರೇಮಾ ನಾಯಕ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಶ್ರೀ ಪದ್ಮರಾಜ ಮಹಿಳಾ ಕಾಲೇಜ: ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ೭೮ನೇ ಸ್ವತಂತ್ರ ದಿನಾಚರಣೆಯಲ್ಲಿ ಪ್ರಾಚಾರ್ಯ ಎಮ್.ಎಸ್.ಹೈಯ್ಯಾಳಕರ್ ಮಾತನಾಡಿದರು.
ಇದೇ ವೇಳೆ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಪೂಜಾರಿ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಸಾಯಬಣ್ಣ ಸಜ್ಜನ, ರೇವಣಸಿದ್ದ ಹಾಲಕೇರಿ, ಎಸ್.ಎಮ್. ಹೂಗಾರ, ಎಮ್.ಕೆ.ಬಿರಾದಾರ, ಎಸ್.ಸಿದುದ್ದಗಿ, ಎಲ್.ಎಮ್ ಮಾರ್ಸನಳ್ಳಿ, ಹೇಮಾ ಕಾಸರ, ಹೇಮಾ ಹಿರೇಮಠ, ಜಿ.ವಿ ಪಾಟೀಲ್, ವರ್ಷಾ ಪಾಟೀಲ್, ಶ್ರೀದೇವಿ ದುದ್ದಗಿ, ಬಸಮ್ಮ ಧರಿ, ಯು.ಸಿ.ಪೂಜೇರಿ, ಡಿ.ಎಂ.ಪಾಟೀಲ, ಸತೀಶ ಕಕ್ಕಸಗೇರಿ, ಮಮತಾ ಹರನಾಳ, ವಿಜಯಲಕ್ಷ್ಮಿ ಭಜಂತ್ರಿ, ಶಂಕರ ಕುಂಬಾರ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.
ಸರಕಾರಿ ನೌಕರರ ಬ್ಯಾಂಕ್: ಪಟ್ಟಣದ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ವಿಜಯಪುರ ಸಿಂದಗಿ ಶಾಖೆಯಲ್ಲಿ ೭೮ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ಬ್ಯಾಂಕನ್ ಮಾಜಿ ಉಪಾಧ್ಯಕ್ಷೆ ಜಯಶ್ರೀ ಬೆಣ್ಣಿ, ಎನ್.ಎಸ್.ನ್ಯಾಮಗೌಡ, ಅಮಿತ, ಬಸವರಾಜ ಗುರುಶೆಟ್ಟಿ, ಪ್ರಭು, ಲಕ್ಷ್ಮೀ, ಪರಶುರಾಮ ಇದ್ದರು.
ವಿವೇಕ ಇಂಟರ್ ನ್ಯಾಶನಲ್ ಶಾಲೆ: ಪಟ್ಟಣದ ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ೭೮ನೆಯ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಈ ವೇಳೆ ವಿನೋದ ಚವ್ಹಾಣ, ಎ.ಆರ್.ಹೆಗ್ಗಣದೊಡ್ಡಿ, ಪ್ರಾಚಾರ್ಯ ಶಾನಿಮೂಲ್ ರಾಬಿನ್, ಟೆನಿ ರಾಬಿನ್ ಜಿಲ್ಲೆಯಲ್ಲ, ಸಂಸ್ಥೆಯ ಅಧ್ಯಕ್ಷೆ ನಿಲಮ್ಮ ಹೆಗ್ಗಣದೊಡ್ಡಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.

