ಢವಳಗಿ:ಗ್ರಾಮದಲ್ಲಿ ಅಗಸ್ಟ15 ಗುರುವಾರದಂದು ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಎಮ್ ಜಿ ಬಿರಾದಾರ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಮೇಲಿನಮನಿ, ಮ ಬ ಪಾಟೀಲ ಪ್ರೌಢಶಾಲೆಯಲ್ಲಿ ಎಸ್ ಎಸ್ ಪಾಟೀಲ,ಮಡಿವಾಳೇಶ್ವರ ಉಚಿತ ಪ್ರಸಾದನಿಲಯದಲ್ಲಿ ಜಿ ಎಸ್ ಕೋರಿ, ಪ್ರಾಥಮಿಕ ಸಹಕಾರಿ ಸಂಘದ ಕಛೇರಿಯಲ್ಲಿ ಅಧ್ಯಕ್ಷ ರುದ್ರಗೌಡ ಪಾಟೀಲ ಹಾಗೂ ಹುತಾತ್ಮ ಯೋಧ ಮಡಿವಾಳಪ್ಪ ನಾಯನೇಗಲಿ ಅವರ ಪ್ರತಿಮೆಯ ಮುಂದೆ ರಾಜುಗೌಡ ಗೌಡರ, ನಾಡ ಕಛೇರಿ ಆವರಣದಲ್ಲಿ ಉಪ ತಹಶೀಲ್ದಾರ್ ಎಸ್ ಬಾವಿಕಟ್ಟಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಗ್ರಾಪಂ ಸಭಾ ಭವನದಲ್ಲಿ ಗ್ರಾಮದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸರಕಾರಿ ನೌಕರ ಸಂಘದಿಂದ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ಢವಳಗಿ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಮ್ ಕೆ ಗುಡಿಮನಿ ಅವರಿಗೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಲಾದ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಜಿ ಎನ್ ಬೀರಗೊಂಡ(ಮುತ್ತು) ಅವರಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಗ್ರಾಮದ ಪಂಚಾಯತಿ ಹತ್ತಿರವಿರುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗ್ರಾಮಸ್ಥರು ಪೂಜೆ ಸಲ್ಲಿಸುವ ಮುಖಾಂತರ ರಾಯಣ್ಣನ ಜನ್ಮ ದಿನಾಚರಣೆಯನ್ನು ಆಚರಿಸಿದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಆನಂದ ಹೀರೆಮಠ, ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ಸದಸ್ಯರಾದ ದುಂಡಪ್ಪ ಅರಸುಣಗಿ,ಸುನೀಲಗೌಡ ಬಿರಾದಾರ,ಸುಭಾಷ ಗುಡಿಮನಿ, ವಿನೋದ ಕೊಣ್ಣೂರ, ಶಾಂತು ಹೊಸಮನಿ, ಶಾಂತಮ್ಮ ಜಮದರಖಾನಿ,ಹಣಮವ್ವ ಗುಡಿಮನಿ, ಮಲ್ಲಮ್ಮ ನಾಗರಾಳ,ಆಶಾಬಿ ನದಾಫ ಹಾಗೂ ಗಣ್ಯರಾದ ಬಾಪುಗೌಡ ಅಂಗಡಗೇರಿ,ಕಾಶಿನಾಥಗೌಡ ಕೊಣ್ಣೂರ, ಮಡಿವಾಳಪ್ಪಗೌಡ ಬಿರಾದಾರ, ಸೇರಿದಂತೆ ಎಲ್ಲಾ ಶಾಲೆಯ ಮುಖ್ಯ ಗುರುಗಳಾದ ಬಿ ಎಸ್ ಶೇಕಣ್ಣವರ,ಬಿ ಎಸ್ ಪಾಟೀಲ, ರಮೇಶ ಮೂಲಿಮನಿ,ಶಾರದಾ ಸಜ್ಜನ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
Subscribe to Updates
Get the latest creative news from FooBar about art, design and business.
ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಗ್ರಾಮಸ್ಥರು.
Related Posts
Add A Comment

