ಮುದ್ದೇಬಿಹಾಳ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಂದು ರಾಜ್ಯದಲ್ಲಿ ಭಾಷೆ, ಅಹಾರ, ಉಡುಪು, ಆಚಾರ, ಧರ್ಮ ಎಲ್ಲರದಲ್ಲೂ ವ್ಯತ್ಯಾಸ ವಿದ್ದರೂ ನಾವೆಲ್ಲ ಒಂದಾಗಿ ಬಾಳುತ್ತಿದ್ದೇವೆ ಇದೇ ಭಾರತ ದೇಶದ ಸಂವಿಧಾನದ ವಿಶೇಷತೆ ಎಂದು ಶಾಸಕ, ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ನನ್ನ ದೇಶ ಮೊದಲು ನಂತರ ನಾನು ನನ್ನ ಕುಟುಂಬ ಎನ್ನುವ ಭಾವನೆ ನಮ್ಮೆಲ್ಲರಲ್ಲಿ ಬರಬೇಕು. ಎಲ್ಲರೂ ಒಂದಾಗಿ ಬಾಳುವದು ಮುಖ್ಯ ಎನ್ನುವದು ಅರಿತುಕೊಳ್ಳಬೇಕು. ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದಲ್ಲಿ ಮುಂದೆ ಕರಾಳವಾದ ದಿನಗಳನ್ನು ಎದುರಿಸಬೇಕಾಗಬಹುದು ಎಂದರು.
ತಹಶೀಲ್ದಾರ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರö್ಯ ಸುಲಭವಾಗಿ ಸಿಕ್ಕಿಲ್ಲ. ಹಲವಾರು ವರ್ಷಗಳ ಕಾಲ ಹೋರಾಟಗಳು ತ್ಯಾಗ ಬಲಿದಾನಗಳು ನಡೆದಿವೆ. ದೇಶದ ರಕ್ಷಣೆಗೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕು ಎಂದರು.
ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ ಮತ್ತು ಗೈಡ್ಸ್, ಶಾರದಾ ವಿದ್ಯಾ ಮಂದಿರ, ಆಕ್ಸ್ಫರ್ಡ ಪ್ರೌಢ ಶಾಲೆ, ಅಂಜುಮನ ಪ್ರೌಢ ಶಾಲೆ, ಜವಾಹರಲಾಲ ನೆಹೆರು ಪ್ರೌಢ ಶಾಲೆ, ವಿಬಿಸಿ ಪ್ರೌಢ ಶಾಲೆ, ಶಾಂತಲಾ ಪ್ರೌಢ ಶಾಲೆ, ಅಭ್ಯುದಯ ಇಂಟರ್ ನ್ಯಾಷನಲ್ ಶಾಲೆಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ತಾಲೂಕು ಪಂಚಾಯತ ಇಓ ಎನ್.ಎಸ್.ಮಸಳಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ರಾಜುಗೌಡ ತುಂಬಗಿ, ಪುರಸಭೆ ಸದಸ್ಯರುಗಳಾದ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಶಹಜಾದಬಿ ಹುಣಚಗಿ, ಮಹೆಬೂಬ ಗೊಳಸಂಗಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ರಿಯಾಜ ಢವಳಗಿ, ಸಂಗಮ್ಮದೇವರಳ್ಳಿ ವೇದಿಕೆ ಮೇಲಿದ್ದರು. ಬಿಇಓ ಬಸವರಾಜ ಸಾವಳಗಿ ಸ್ವಾಗತಿಸಿದರು, ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿನ್ಮಯ ಜೆಸಿ ಪ್ರಥಮ, ಕೆ.ಬಿ.ಎಂ.ಪಿ.ಎಸ್ ದ್ವಿತೀಯ, ಬಿ.ಎಸ್.ಸೆಂಟ್ರಲ್ ಸ್ಕೂಲ್ ತೃತೀಯ ಬಹುಮಾನ ಪಡೆದುಕೊಂಡವು.
ತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ನನ್ನ ದೇಶ ಮೊದಲು ನಂತರ ನಾನು ನನ್ನ ಕುಟುಂಬ ಎನ್ನುವ ಭಾವನೆ ನಮ್ಮೆಲ್ಲರಲ್ಲಿ ಬರಬೇಕು. ಎಲ್ಲರೂ ಒಂದಾಗಿ ಬಾಳುವದು ಮುಖ್ಯ ಎನ್ನುವದು ಅರಿತುಕೊಳ್ಳಬೇಕು. ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದಲ್ಲಿ ಮುಂದೆ ಕರಾಳವಾದ ದಿನಗಳನ್ನು ಎದುರಿಸಬೇಕಾಗಬಹುದು ಎಂದರು.
ತಹಶೀಲ್ದಾರ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಹಲವಾರು ವರ್ಷಗಳ ಕಾಲ ಹೋರಾಟಗಳು ತ್ಯಾಗ ಬಲಿದಾನಗಳು ನಡೆದಿವೆ. ದೇಶದ ರಕ್ಷಣೆಗೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕು ಎಂದರು.
ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ ಮತ್ತು ಗೈಡ್ಸ್, ಶಾರದಾ ವಿದ್ಯಾ ಮಂದಿರ, ಆಕ್ಸ್ಫರ್ಡ ಪ್ರೌಢ ಶಾಲೆ, ಅಂಜುಮನ ಪ್ರೌಢ ಶಾಲೆ, ಜವಾಹರಲಾಲ ನೆಹೆರು ಪ್ರೌಢ ಶಾಲೆ, ವಿಬಿಸಿ ಪ್ರೌಢ ಶಾಲೆ, ಶಾಂತಲಾ ಪ್ರೌಢ ಶಾಲೆ, ಅಭ್ಯುದಯ ಇಂಟರ್ ನ್ಯಾಷನಲ್ ಶಾಲೆಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಾಲೂಕು ಪಂಚಾಯತ ಇಓ ಎನ್.ಎಸ್.ಮಸಳಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ರಾಜುಗೌಡ ತುಂಬಗಿ, ಪುರಸಭೆ ಸದಸ್ಯರುಗಳಾದ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಶಹಜಾದಬಿ ಹುಣಚಗಿ, ಮಹೆಬೂಬ ಗೊಳಸಂಗಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ರಿಯಾಜ ಢವಳಗಿ, ಸಂಗಮ್ಮದೇವರಳ್ಳಿ ವೇದಿಕೆ ಮೇಲಿದ್ದರು. ಬಿಇಓ ಬಸವರಾಜ ಸಾವಳಗಿ ಸ್ವಾಗತಿಸಿದರು, ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್ :
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿನ್ಮಯ ಜೆಸಿ ಪ್ರಥಮ, ಕೆ.ಬಿ.ಎಂ.ಪಿ.ಎಸ್ ದ್ವಿತೀಯ, ಬಿ.ಎಸ್.ಸೆಂಟ್ರಲ್ ಸ್ಕೂಲ್ ತೃತೀಯ ಬಹುಮಾನ ಪಡೆದುಕೊಂಡವು.

