ಚಿಕ್ಕಪಡಸಲಗಿ: ಇಂದಿನ ಯುವಜನತೆ ಸ್ವಾತಂತ್ರ್ಯದ ಸೂಕ್ಷ್ಮತೆ ಅರಿತು ನಡೆಯಬೇಕು. ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಸ್ವಚ್ಛಂದಕ್ಕೆ ಎಂದೂ ಬಳಸಿಕೊಳ್ಳಬಾರದು. ಸ್ವಾತಂತ್ರ್ಯದ ಪವಿತ್ರತೆಯಡಿಯಲ್ಲಿ ನೆಮ್ಮದಿ ಕಾಣಬೇಕು ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹೇಳಿದರು.
ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಭವಿಷ್ಯತ್ತಿನ ಯುವ ತಲೆಮಾರುಗಳಲ್ಲಿ ಸ್ವಾತಂತ್ರ್ಯದ ಅರಿವು ಮೂಡಲಿ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ರ ವಿರುದ್ಧ ಭಾರತೀಯರು ತೊಡೆತಟ್ಟಿ ನಿಂತರು. ಕಠಿಣಾತೀತಿ ಶಿಕ್ಷೆ ಅನುಭವಿಸಿ ನರಳಾಡಿದರು.ಇಡೀ ಜೀವನ ಭಾರತದ ಚರಿತ್ರೆಯ ಭವಿಷ್ಯಕ್ಕಾಗಿ ಮುಡಪಾಗಿಟ್ಟು ಜೀವ ತೆತ್ತಿದ್ದಾರೆ. ಅಸಂಖ್ಯಾತ ಮಹನೀಯರ ತ್ಯಾಗ,ಬಲಿದಾನದ ಮೂಲಕ ಗಿಟ್ಟಿಸಿರುವ ಸ್ವಾತಂತ್ರ್ಯದ ಇತಿಹಾಸ ಬಿಕ್ಕಳಿಕೆಗಳನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ಶಾಲಾ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ರಾಜು ಹಣಮಂತ ತೇರದಾಳ, ಅಸಂಖ್ಯಾತ ಹುತಾತ್ಮ ದೇಶಭಕ್ತ ಧ್ರುವಗಳೇ ನಮಗೆಲ್ಲ ಪ್ರೇರಕರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಶಾಲಾ ಆಡಳಿತ ಮಂಡಳಿ ಸದಸ್ಯ ರಾಮಪ್ಪ ಕಲ್ಖಾಣಿ, ತ್ಯಾಗ,ಬಲಿದಾನದ ಫಲವೇ ಸ್ವಾತಂತ್ರ್ಯ ಎಂದರು.
ಮುಖ್ಯ ಗುರು ಎಸ್.ಎಸ್.ಅರಬಳ್ಳಿ, ಹನಮಂತ ಗದಿಗೆಪ್ಪಗೋಳ, ಸುರೇಶ ಸಂತಿ, ಕುಮಾರ ವಾಣಿ, ಜಿ.ಆರ್.ಜಾಧವ, ಶೋಭಾ ಹಿರೇಮಠ, ಭಾಗ್ಯಾ ಹಿರೇಮಠ, ರೇಣುಕಾ ಲಾಲಸಂಗಿ,ಸುನಂದಾ ಬಬಲಾದಿಮಠ, ಚಂಪಾ ದಯಗೊಂಡ, ರೇಶ್ಮಾ ಕನಾಳ, ಲಕ್ಷ್ಮೀಬಾಯಿ ಸನದಿ ಸೇರಿದಂತೆ ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ಎಸ್.ಜಿ.ಬಾಳೇಕುಂದ್ರಿ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಗುರುಮಾತೆ, ಸಿಬ್ಬಂದಿಗಳು ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

