Author: editor.udayarashmi@gmail.com

ಮುದ್ದೇಬಿಹಾಳ: ಮಹಾರಾಷ್ಟçದ ಕೋಲ್ಹಾಪುರದ ಉದ್ಯಮಿಗೆ ಸಿನಿಮೀಯ ರೀತಿಯಲ್ಲಿ ಸುಲಿಗೆ ಮಾಡಿದ ಆರೋಪಿಗಳನ್ನು ಇಲ್ಲಿನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಉದ್ಯಮಿ ಅಶೋಕ ಕುಲಕರ್ಣಿಯವರು ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಶ ಕಂಪನಿಗೆ ವ್ಯಾಪಾರಕ್ಕಾಗಿ ಭೇಟಿ ನೀಡಿ ಮರಳುವಾಗ ಕೋಳೂರ ಕ್ರಾಸ್ ಬಳಿ ಕಾರ್ ಗೆ ಅಡ್ಡಗಟ್ಟಿ ನಿಲ್ಲಿಸಿ, ಚಾಕು ತೋರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಆಭರಣಗಳು ಹಾಗೂ ಹಣವನ್ನು ಕಸಿದು ಪರಾರಿಯಾಗಿದ್ದರು.ಪ್ರಕರಣದ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಪ್ರಾರಂಭಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಸಿಬ್ಬಂದಿಗಳಾದ ಬಿ,ಕೆ,ಗುಡಿಮನಿ, ಆರ್.ಎಸ್.ಪಾಟೀಲ, ವಿ.ಎಸ್.ಹಾಲಗಂಗಾಧರಮಠ, ಸಿ.ಎಸ್.ಬಿರಾದಾರ, ಆರ್.ಎಸ್.ಮಾದರ, ಎಲ್.ಎಸ್.ಹತ್ತರಕಿಹಾಳ ಇವರು ಆರೋಪಿತರಾದ ನಿಪ್ಪಾಣಿ ಮೂಲದ ರಾಕೇಶ ಸಾವಂತ, ರೋಹನ ನಿಪ್ಪಾಣಿ, ಪ್ರಥಮೇಶ ಹವಾಲ್ದಾರ ಈ ಮೂವರನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಎಸ್‌ಪಿ ಅವರಿಂದ ಶ್ಲಾಘನೆ, ಪ್ರಶಂಸನಾ ಪತ್ರದ ಜೊತೆಗೆ ನಗದು ಬಹುಮಾನವನ್ನು ಪಡೆದಿದ್ದಾರೆ.

Read More

ಇಂಡಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುವ ಹೇಮಂತ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಖಾಯಂ ಆಡಳಿತಾಧಿಕಾರಿ ನೇಮಿಸಬೇಕೆಂದು ಕರವೇ ಕಾರ್ಯಕರ್ತರು ಎಸಿ ಯವರಿಗೆ ಮನವಿ ಸಲ್ಲಿಸಿದರು.ವಿಜಯಪುರ ಆಸ್ಪತ್ರೆಯಲ್ಲಿ ಖಾಯಂ ಹುದ್ದೆ ಇರುವದರಿಂದ ಇಂಡಿ ಸರಕಾರಿ ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಹಾಗೂ ನಿತ್ಯ ಬರುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಆಡಳಿತ ತೊಂದರೆಯಾಗುತ್ತಿದೆ. ಕೂಡಲೇ ಹೇಮಂತ ಅವರನ್ನು ಇಂಡಿ ಸರಕಾರಿ ಆಸ್ಪತ್ರೆಯಲ್ಲಿ ಇರುವ ನಿಯೋಜನ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಅಲ್ಲಾಬಕ್ಷ ಗೋರೆ ಹೇಳಿದರು.ಸಾರ್ವಜನಿಕ ಮಾಹಿತಿ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಇಂಡಿ ಸರಕಾರಿ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಜಯಕುಮಾರ ರಾಠೋಡ, ಮಾಳಪ್ಪ ಪೂಜಾರಿ, ಪೈಗಂಬರ ಹಚ್ಯಾಳ, ಶುಕುರ ಮಡ್ಡಿಮಣೂರ, ಮುನ್ನಾ ನಾರಾಯಣಪುರ, ಸಿದ್ದು ಚವ್ಹಾಣ, ನಾತು ರಾಠೋಡ, ಶರಣಪ್ಪ ನಾವಿ, ಚಂದ್ರಶೇಖರ ಹೊಸಮನಿ ಮತ್ತಿತರಿದ್ದರು.

Read More

ಇಂಡಿ: ರಾಜ್ಯದಲ್ಲಿ ಗತ ವೈಭವವನ್ನು ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತ್ತೊಮ್ಮೆ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ಜೋಗೂರ ಹೇಳಿದರು.ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನ, ಇಂಡಿ ಮಂಡಲ ಕಾರ್ಯಾಗಾರ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಬಿಜೆಪಿ ವಿಶ್ವದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡು ಅತಿ ವೇಗವಾಗಿ ದೇಶದಲ್ಲಿ ಬೆಳೆಯುತ್ತಿದೆ. ಪ್ರತಿಯೊಬ್ಬರು ಸಮರ್ಪಣಾ ಭಾವದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನ ಸೆ. ೨ ರಂದು ಆರಂಭಗೊಂಡು ೧೭ ರ ವರೆಗೆ ನಡೆಯಲಿದ್ದು ೨ ರಂದು ದೇಶದ್ಯಾದಂತ ನಡೆಯುವ ಸದಸ್ಯತ್ವ ನೊಂದಣಿ ಕಾರ‍್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಿದ್ದಾರೆ. ಬಿಜೆಪಿ ಪಕ್ಷವನ್ನು ಮತಷ್ಟು ಬಲ ಪಡಿಸುವ ಉದ್ದೇಶದಿಂದ ೫ ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ…

Read More

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಜಾತ್ರಾಮಹೋತ್ಸವದಂಗವಾಗಿ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಗೆಳೆಯರ ಬಳಗವು ಹಮ್ಮಿಕೊಂಡಿದ್ದ ೫೫ ಎಚ್ಪಿ ಟ್ರ‍್ಯಾಕ್ಟರ್ ಜಗ್ಗುವ ಸ್ಪರ್ಧೆ ಕಿಕ್ಕಿರಿದ ಯುವಕರನ್ನು, ಜನಸ್ತೋಮವನ್ನು ಕಾತರ ಮೂಡಿಸುವ ಜೊತೆಗೆ ರೋಮಾಂಚನಗೊಳಿಸಿತು.ಪಟ್ಟಣದಲ್ಲಿ ಜಾತ್ರೆಯಂಗವಾಗಿ ಎರಡನೇ ಬಾರಿಗೆ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಲಮೇಲ, ಇಂಡಿ, ಬಬಲೇಶ್ವರ, ಬುದ್ನಿ, ಕುಂಟೋಜಿ, ಜಮಖಂಡಿಯ ಹಿಪ್ಪರಗಿ ಸೇರಿದಂತೆ ವಿವಿಧ ಭಾಗಗಳಿಂದ ೨೬ ಟ್ರ‍್ಯಾಕ್ರ‍್ಗಳು ಬಂದಿದ್ದವು.ಸ್ಪರ್ಧೆಗೆ ಹಿರೇಮಠದ ಶಿವಪ್ರಕಾಶ ಶಿವಾಚಾರ‍್ಯ ಸ್ವಾಮೀಜಿ, ಶಿವಾನಂದ ಈರಕಾರಮುತ್ಯಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಚಾಲನೆ ನೀಡಿದರು.ಸ್ಪರ್ಧೆ ಆರಂಭವಾಗುತ್ತಿದ್ದಂತೆ ನಂದಿ ತರಕಾರಿ ಮಾರುಕಟ್ಟೆ ಆವರಣ, ವಿವಿಧ ಕಟ್ಟಡಗಳ ಮಾಳಿಗೆಯ ಮೇಲೆ ನಿಂತಿದ್ದ ಯುವ ಪಡೆಯ ರ‍್ಷೋದ್ಘಾರ ಮುಗಿಲು ಮುಟ್ಟಿತು. ಟ್ರ‍್ಯಾಕ್ಟರ್ ಜಗ್ಗಾಟ ನೆರೆದ ಜನರಲ್ಲಿ ಕಾತರತೆ ಮೂಡಿಸಿತು. ನಂದಿ ತರಕಾರಿ ಮಾರುಕಟ್ಟೆ ಸುತ್ತಮುತ್ತ ಎಲ್ಲಿ ನೋಡಿದರೂ ದ್ವಿಚಕ್ರವಾಹನಗಳು, ಅಪಾರ ಸಂಖ್ಯೆಯ ಜನರು ಕಂಡುಬಂದರು. ಸ್ರ‍್ಧೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಟ್ರ‍್ಯಾಕ್ಟರ್ ಜಗ್ಗಾಟ ನಡೆಯುವ ಪ್ರದೇಶದ…

Read More

ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ, ಅವರ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಹೇಳಿದರು.ಪಟ್ಟಣದ ಇವಣಗಿ ರಸ್ತೆಯಲ್ಲಿರುವ ನ್ಯೂ ಹೈಸ್ಕೂಲ್ದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ನ್ಯೂ ಹೈಸ್ಕೂಲ್ ಸಹಯೋಗದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಲಿಂ.ಬಿ.ಎಸ್.ಪಾಟೀಲ ಮಹಾರಾಜರು, ಲಿಂ. ಶ್ರೀಶೈಲಪ್ಪ ಬಾಪುರಾಯ ಧನಶೆಟ್ಟಿ, ಲಿಂ.ಸಿದ್ಲಿಂಗಪ್ಪ ಮತ್ತು ಬಸಲಿಂಗಯ್ಯ ಹಿರೇಮಠ ಸ್ಮರಣಾರ್ಥಿ ಗುರುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುತ್ತೂರಿನ ಲಿಂ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಜನಸಾಮಾನ್ಯರಿಗೆ ಶರಣರ ಸಂದೇಶ, ಸಾಹಿತ್ಯ ತಲುಪಬೇಕು. ನಾಡಿನಲ್ಲಿ ಶರಣರ ವಿಚಾರಗಳು ಹರಡಬೇಕೆಂಬ ಉದ್ದೇಶದಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದ್ದಾರೆ. ಸಾಮಾನ್ಯವಾಗಿ ಮಠಗಳು ಎಂದರೆ ಒಂದು ರೀತಿಯ ಸಂಪ್ರದಾಯದ ವ್ಯವಸ್ಥೆಯ ದೃಷ್ಟಿಕೋನದಲ್ಲಿ ನೋಡುವ ಕಾಲದಲ್ಲಿ ಇಡೀ ಸಮಾಜದ ವ್ಯವಸ್ಥೆಯನ್ನು ಬದಲಾವಣೆ ತರುವ ಉದ್ದೇಶದಿಂದ ಸತ್ಸಂಪ್ರದಾಯ ಪಾಲಿಸುತ್ತಾ ಸಮಕಾಲೀನ ಅಗತ್ಯಗಳಿಗೆ…

Read More

ಮುದ್ದೇಬಿಹಾಳ: ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಎಲ್ಲ ಶಿಕ್ಷಕರು, ಸಿಬ್ಬಂದಿಗಳು, ಮುಖಂಡರು, ಪಾಲಕರು ಸೇರಿದಂತೆ ಸಾರ್ವಜನಿಕರ ಪ್ರೋತ್ಸಾಹ ದೊರೆಯುತ್ತಿದ್ದು ಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ ವಕೀಲರು ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ವಿಜಯಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ನಡೆದ ವೀರಶೈವ ವಿದ್ಯಾವರ್ಧಕ ಅಸೋಸಿಯೇಶನ್ ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಸಧ್ಯ ಹೆಮ್ಮರವಾಗಿ ಬೆಳೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಮುನ್ನುಗ್ಗುತ್ತಿದೆ. ಈ ಸಾಧನೆಗೆ ಎಲ್ಲ ಶಿಕ್ಷಕರ, ಸಿಬ್ಬಂದಿ ವರ್ಗದ ಶ್ರಮ ಇದೆ. ಅವರೆಲ್ಲರಿಗೂ ನಾನು ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಬರುವ ದಿನಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ಮಹದಾಸೆ ಕಮೀಟಿಯವರದ್ದಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯ ಎಂದರು.ನಿಕಟಪೂರ್ವ ಕಾರ್ಯದರ್ಶಿ ಎಂ.ಬಿ.ನಾವದಗಿ ಪ್ರಮುಖರಾದ ಪ್ರಭು ಕಡಿ, ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿ ಸಂಸ್ಥೆಯ ಪದಾಧಿಕಾರಿಗಳು ಸಾಕಷ್ಟು ಕ್ರಿಯಾಶೀಲರಾಗಿದ್ದಾರೆ. ಸಂಘದ ಅಡಿಯಲ್ಲಿರುವ ವಿಜಯಮಹಾಂತೇಶ ಮಂಗಲಭವನಕ್ಕೆ…

Read More

ಚಡಚಣ: ಸನ್ ೨೦೨೪-೨೫ನೇ ಸಾಲಿನ ಪಟ್ಟಣ ಪಂಚಾಯತ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಶ್ರೀ ಸಂಗಮೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಜರುಗಿತು.ಈ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಚಡಚಣ ಮರಡಿ ಶಾಲೆಯ ಮಕ್ಕಳು ಭಾಗವಹಿಸಿ ಬಾಲಕಿಯರು ಖೋಖೋದಲ್ಲಿ ಪ್ರಥಮ ಸ್ಥಾನ,ಬಾಲಕರು ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ,ಎತ್ತರ ಜಿಗಿತದಲ್ಲಿ ಸೇವಂತಿ ಕ್ಷತ್ರಿ ತೃತೀಯ ಸ್ಥಾನ,೬೦೦ ಮೀಟರ್ ಓಟದಲ್ಲಿ ನಂದಿನಿ ಕ್ಷತ್ರಿ ಪ್ರಥಮ ಸ್ಥಾನ,ರಕ್ಷಾ ಕೋಳಿ ಸಂಗಡಿಗರು ೪೦೦ಮೀಟರ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶಾಲಾ ಮುಖ್ಯ ಗುರುಗಳು,ಸಹ ಶಿಕ್ಷಕರು,ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು ಹಾಗೂ ಅಡುಗೆ ಸಹೋದರಿಯರು ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಚಡಚಣ: ಪಠ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಗಳಿಗೆ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ನಿರ್ದೇಶಕ, ಸಾಹಿತಿ ಬಸವರಾಜ ಯಂಕಂಚಿ ಹೇಳಿದರು.ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ವಿಜಯಪೂರ ಮತ್ತು ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಚಡಚಣ ತಾಲೂಕಾ ಮಟ್ಟದ ಅಥ್ಲೆಟಿಕ್ಸ ಕ್ರೀಡಾ ಕೂಟದ ಧ್ವಜಾರೋಣವನ್ನು ನೆರವೇರಿಸಿ ಅವರು ಮಾತನಾಡಿದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್.ಚೋರಗಿ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಹೆಸರಿನೊಂದಿಗೆ ಹಣವನ್ನು ಮತ್ತು ನೌಕರಿಯನ್ನು ಪಡೆಯಬಹುದು ಎಂದು ಹೇಳಿದರು.ನಿವೃತ್ತ ಪ್ರಾಧ್ಯಾಪಕ ಆರ್.ಪಿ.ಬಗಲಿ ಮಾತನಾಡಿದರು.ಸಂಸ್ಥೆಯ ಹಿರಿಯ ನಿರ್ದೇಶಕ ಎಸ್.ಆರ್.ಅವಜಿ ಕಾರ್ಯಕ್ರಮ ಉಧ್ಘಾಟಿಸಿದರು. ಗೌರವ ಕಾರ್ಯದರ್ಶಿ ವಿ.ಎಸ್.ಗಿಡವೀರ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಮುತ್ತಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ನಾಗಮ್ಮ ಅಂಕದ, ನಿವೃತ್ತ ಪ್ರಾಚಾರ್ಯ ಎಸ,ಕೆ,ಕುಲಕರ್ಣಿ ಉಪಸ್ಥಿತರಿದ್ದರು.ಪ್ರಾಚಾರ್ಯ ಮನೋಜ ಕಟಗೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಮಲ್ಲಿಕಾರ್ಜುನ…

Read More

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಚಿವ ಶಿವಾನಂದ ಎಸ್.ಪಾಟೀಲ ಮಾಹಿತಿ ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸುವ ಮೂಲಕ ಶೇ.೪೧.೪೦ ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ತಿಳಿಸಿದರು.ಶನಿವಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ೧೯೧೯ರಲ್ಲಿ ಸ್ಥಾಪಿತವಾದ ಬ್ಯಾಂಕು ಈಗ ೧೦೫ ವರ್ಷಗಳ ನಿರಂತರ ಸಮರ್ಪಕ ಸೇವೆ ಪೂರ್ಣಗೊಳಿಸಿ ೧೦೬ನೇ ವರ್ಷದಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಾಧನೆ ಮಾಡಿ ಬ್ಯಾಂಕಿನ ಸಾಂಪತ್ತಿಕ ಸ್ಥಿತಿಯು ಸದೃಢಗೊಂಡಿದೆ. ೨೦೨೩-೨೪ನೇ ಸಾಲಿನಲ್ಲಿ ತೆರಿಗೆ ಪೂರ್ವ ರೂ.೨೭.೧೦ ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ೬.೮೮ ಕೋಟಿ ರೂ. ತೆರಿಗೆ ಪಾವತಿಸಿ ನಂತರ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಗಳಿಸಿದ…

Read More