ಮುದ್ದೇಬಿಹಾಳ: ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಎಲ್ಲ ಶಿಕ್ಷಕರು, ಸಿಬ್ಬಂದಿಗಳು, ಮುಖಂಡರು, ಪಾಲಕರು ಸೇರಿದಂತೆ ಸಾರ್ವಜನಿಕರ ಪ್ರೋತ್ಸಾಹ ದೊರೆಯುತ್ತಿದ್ದು ಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ ವಕೀಲರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಿಜಯಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ನಡೆದ ವೀರಶೈವ ವಿದ್ಯಾವರ್ಧಕ ಅಸೋಸಿಯೇಶನ್ ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಸಧ್ಯ ಹೆಮ್ಮರವಾಗಿ ಬೆಳೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಮುನ್ನುಗ್ಗುತ್ತಿದೆ. ಈ ಸಾಧನೆಗೆ ಎಲ್ಲ ಶಿಕ್ಷಕರ, ಸಿಬ್ಬಂದಿ ವರ್ಗದ ಶ್ರಮ ಇದೆ. ಅವರೆಲ್ಲರಿಗೂ ನಾನು ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಬರುವ ದಿನಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ಮಹದಾಸೆ ಕಮೀಟಿಯವರದ್ದಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯ ಎಂದರು.
ನಿಕಟಪೂರ್ವ ಕಾರ್ಯದರ್ಶಿ ಎಂ.ಬಿ.ನಾವದಗಿ ಪ್ರಮುಖರಾದ ಪ್ರಭು ಕಡಿ, ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿ ಸಂಸ್ಥೆಯ ಪದಾಧಿಕಾರಿಗಳು ಸಾಕಷ್ಟು ಕ್ರಿಯಾಶೀಲರಾಗಿದ್ದಾರೆ. ಸಂಘದ ಅಡಿಯಲ್ಲಿರುವ ವಿಜಯಮಹಾಂತೇಶ ಮಂಗಲಭವನಕ್ಕೆ ಹೊಸ ಕಳೆ ಕೊಟ್ಟಿದ್ದಾರೆ. ಲೆಕ್ಕ ಪತ್ರಗಳನ್ನು ಸಾಕಷ್ಟು ಪಾರದರ್ಶಕವಾಗಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಟೀಕೆ ಟಿಪ್ಪಣೆಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿರದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಂಸಜ್ಜನ, ಪ್ರ.ಕಾರ್ಯದರ್ಶಿ ಪಿ.ಡಿ.ನಾಗಠಾಣ, ಕಾರ್ಯದರ್ಶಿ ಬಿ.ಜಿ.ನಾವದಗಿ, ಸದಸ್ಯರಾದ ಆರ್.ಎಸ್.ಪಾಟೀಲ, ವಿ.ಎಸ್.ತಡಸದ, ಎಂ.ವಿ.ತೋಟಗಿ, ಜಿ.ಎಸ್.ಕಡಿ, ಅಪ್ಪು ಸಿದ್ದಾಪೂರ, ನಿಕಟಪೂರ್ವ ಅಧ್ಯಕ್ಷ ಬಿ.ಸಿ.ಮೋಟಗಿ, ಪ್ರಮುಖರಾದ ಬಿ.ಆರ್.ನಾವದಗಿ, ಅಶೋಕ ತಡಸದ, ಮುತ್ತಣ್ಣ ತಡಸದ ಇದ್ದರು. ಸಂಸ್ಥೆಯ ಚೇರಮನ್ ಎಂ.ಎಸ್.ನಾವದಗಿ ವಕೀಲರು ವರದಿ ವಾಚಿಸಿದರು. ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿದರು. ಎಂ.ವಿ.ಮೋಟಗಿ ಸ್ವಾಗತಿಸಿದರು. ಶಿಕ್ಷಕಿಯರಾದ ಸುಧಾರಾಣಿ ಮೇಟಿ ಮತ್ತು ಶೋಭಾ ಹನಗಂಡಿ ನಿರ್ವಹಿಸಿದರು. ಸುಧೀರ ನಾವದಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

