ಇಂಡಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುವ ಹೇಮಂತ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಖಾಯಂ ಆಡಳಿತಾಧಿಕಾರಿ ನೇಮಿಸಬೇಕೆಂದು ಕರವೇ ಕಾರ್ಯಕರ್ತರು ಎಸಿ ಯವರಿಗೆ ಮನವಿ ಸಲ್ಲಿಸಿದರು.
ವಿಜಯಪುರ ಆಸ್ಪತ್ರೆಯಲ್ಲಿ ಖಾಯಂ ಹುದ್ದೆ ಇರುವದರಿಂದ ಇಂಡಿ ಸರಕಾರಿ ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಹಾಗೂ ನಿತ್ಯ ಬರುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಆಡಳಿತ ತೊಂದರೆಯಾಗುತ್ತಿದೆ. ಕೂಡಲೇ ಹೇಮಂತ ಅವರನ್ನು ಇಂಡಿ ಸರಕಾರಿ ಆಸ್ಪತ್ರೆಯಲ್ಲಿ ಇರುವ ನಿಯೋಜನ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಅಲ್ಲಾಬಕ್ಷ ಗೋರೆ ಹೇಳಿದರು.
ಸಾರ್ವಜನಿಕ ಮಾಹಿತಿ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಇಂಡಿ ಸರಕಾರಿ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಯಕುಮಾರ ರಾಠೋಡ, ಮಾಳಪ್ಪ ಪೂಜಾರಿ, ಪೈಗಂಬರ ಹಚ್ಯಾಳ, ಶುಕುರ ಮಡ್ಡಿಮಣೂರ, ಮುನ್ನಾ ನಾರಾಯಣಪುರ, ಸಿದ್ದು ಚವ್ಹಾಣ, ನಾತು ರಾಠೋಡ, ಶರಣಪ್ಪ ನಾವಿ, ಚಂದ್ರಶೇಖರ ಹೊಸಮನಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
ಸರಕಾರಿ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿ ನೇಮಕಕ್ಕೆ ಕರವೇ ಆಗ್ರಹ
Related Posts
Add A Comment

