ಚಡಚಣ: ಸನ್ ೨೦೨೪-೨೫ನೇ ಸಾಲಿನ ಪಟ್ಟಣ ಪಂಚಾಯತ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಶ್ರೀ ಸಂಗಮೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಜರುಗಿತು.
ಈ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಚಡಚಣ ಮರಡಿ ಶಾಲೆಯ ಮಕ್ಕಳು ಭಾಗವಹಿಸಿ ಬಾಲಕಿಯರು ಖೋಖೋದಲ್ಲಿ ಪ್ರಥಮ ಸ್ಥಾನ,ಬಾಲಕರು ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ,ಎತ್ತರ ಜಿಗಿತದಲ್ಲಿ ಸೇವಂತಿ ಕ್ಷತ್ರಿ ತೃತೀಯ ಸ್ಥಾನ,೬೦೦ ಮೀಟರ್ ಓಟದಲ್ಲಿ ನಂದಿನಿ ಕ್ಷತ್ರಿ ಪ್ರಥಮ ಸ್ಥಾನ,ರಕ್ಷಾ ಕೋಳಿ ಸಂಗಡಿಗರು ೪೦೦ಮೀಟರ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶಾಲಾ ಮುಖ್ಯ ಗುರುಗಳು,ಸಹ ಶಿಕ್ಷಕರು,ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು ಹಾಗೂ ಅಡುಗೆ ಸಹೋದರಿಯರು ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

