Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮವಿಜಯಪುರ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಆಸಕ್ತ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ:೧೫-೦೯-೨೦೨೪ರವರೆಗೆ ವಿಸ್ತರಿಸಲಾಗಿದೆ.ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಬಸವ ಬೆಳಗು (ಶೈಕ್ಷಣಿಕ ಸಾಲ), ಜೀವಜಲ (ಗಂಗಾ ಕಲ್ಯಾಣ) ಯೋಜನೆ, ಕಾಯಕಕಿರಣ (ಸ್ವಯಂ ಉದ್ಯೊಗ), ಭೋಜನಾಲಯ, ವಿಭೂತಿ ನಿರ್ಮಾಣ ಘಟಕ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ (ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯಡಿ ಸಾಲ-ಸೌಲಭ್ಯ ಪಡೆಯಲಿಚ್ಚಿಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಶೈಕ್ಷಣಿಕ ಸಾಲಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://www.kvldcl.karnataka.gov.inಅಥವಾ ದೂರವಾಣಿ ಸಂಖ್ಯೆ ೦೮೦-೨೨೮೬೫೫೨೨ / ೯೯೦೦೦೧೨೩೫೧ ಹಾಗೂ ವಿಜಯಪುರ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ವಿಶ್ವಕರ್ಮ…
ವಿಜಯಪುರ: ಜಿಲ್ಲೆಯಾದ್ಯಂತ ಸೆ.೭ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ವಿಜಯಪುರ ಉಪವಿಭಾಗಕ್ಕೆ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ (ಮೊ:೯೫೯೯೯೦೯೭೨೪), ಇಂಡಿ ಉಪವಿಭಾಗಕ್ಕೆ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ (ಮೊ:೯೦೦೮೬೯೦೦೩೯) ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನಿಯೋಜಿಸಿ ಆದೇಶಿಸಲಾಗಿದೆ.ದಿನಾಂಕ : ೦೭-೦೯-೨೦೨೪ ರಂದು ಪ್ರತಿಷ್ಠಾಪನೆ ದಿನ ಹಾಗೂ ಸೆ.೧೧, ೧೩, ೧೫ ಹಾಗೂ ೧೭ರವರೆಗೆ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ (ಮೊ:೯೪೪೮೬೯೨೩೫೮) ಅವರನ್ನು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ.೦೧ ರಿಂದ ೧೭ರವರೆಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಈರಣ್ಣ ಆಶಾಪೂರ (ಮೊ:೯೭೩೧೦೪೨೦೬೩) ಅವರನ್ನು ವಿಜಯಪುರ ಮಹಾನಗರ…
ದೇವರಹಿಪ್ಪರಗಿ: ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ಯ ಮಠಾಧೀಶರುಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು.ಪಟ್ಟಣದ ವೀರಭದ್ರೆಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸೇರಿದ ಭಕ್ತಮಂಡಳಿ ಹಿಂದೂ ಧರ್ಮ ಪರಂಪರೆಯ ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯ ಪೂಜಿತ ವೀರಗೋತ್ರ ಪುರುಷ ಶ್ರೀವೀರಭದ್ರೇಶ್ವರ ದೇವರ ಪ್ರತಿಮೆಗೆ ಶಾಸ್ತೊçಕ್ತವಾಗಿ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸದಯ್ಯನಮಠ ಪೀಠಾಧಿಪತಿಗಳಾದ ವೀರಗಂಗಾಧರಶ್ರೀ ಆಶೀರ್ವಚನ ನೀಡಿ, ಪುರಾಣಗಳ ಪ್ರಕಾರ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿAದ ಅವತರಿಸಿ ಶಿವಭಕ್ತರನ್ನು ಸಂರಕ್ಷಿಸುತ್ತಿರುವ ವೀರಭದ್ರೇಶ್ವರ ದೇವರು ವೀರಶೈವ ಲಿಂಗಾಯತ ಪರಂಪರೆಯಲ್ಲಿ ಪ್ರಮುಖನಾಗಿದ್ದಾನೆ. ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರ ಪುರುಷರು ಜನಜನಿತರಾಗಿದ್ದು, ಇವರಲ್ಲಿ ವೀರಭದ್ರೇಶ್ವರ ಪ್ರಥಮ ಪುರುಷನಾಗಿದ್ದಾನೆ. ಇಂದು ನಾವೆಲ್ಲ ಭಕ್ತರು ಸ್ವಾರ್ಥಭಾವನೆ ತೊಡೆದು ಧರ್ಮಮಾರ್ಗದಲ್ಲಿ ನಡೆದು ಅವನ ಕೃಪೆಗೆ ಪಾತ್ರರಾಗಬೇಕು ಎಂದರು.ಪರದೇಶಿಮಠದಶ್ರೀ, ತಾಲ್ಲೂಕು ನಿವೃತ್ತನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಮಾತನಾಡಿದರು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ತಾಲ್ಲೂಕು ವಚನ ಸಾಹಿತ್ಯ…
ದೇವರಹಿಪ್ಪರಗಿ: ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ಯ ಮಠಾಧೀಶರುಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು.ಪಟ್ಟಣದ ವೀರಭದ್ರೆಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸೇರಿದ ಭಕ್ತಮಂಡಳಿ ಹಿಂದೂ ಧರ್ಮ ಪರಂಪರೆಯ ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯ ಪೂಜಿತ ವೀರಗೋತ್ರ ಪುರುಷ ಶ್ರೀವೀರಭದ್ರೇಶ್ವರ ದೇವರ ಪ್ರತಿಮೆಗೆ ಶಾಸ್ತೊçಕ್ತವಾಗಿ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸದಯ್ಯನಮಠ ಪೀಠಾಧಿಪತಿಗಳಾದ ವೀರಗಂಗಾಧರಶ್ರೀ ಆಶೀರ್ವಚನ ನೀಡಿ, ಪುರಾಣಗಳ ಪ್ರಕಾರ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿAದ ಅವತರಿಸಿ ಶಿವಭಕ್ತರನ್ನು ಸಂರಕ್ಷಿಸುತ್ತಿರುವ ವೀರಭದ್ರೇಶ್ವರ ದೇವರು ವೀರಶೈವ ಲಿಂಗಾಯತ ಪರಂಪರೆಯಲ್ಲಿ ಪ್ರಮುಖನಾಗಿದ್ದಾನೆ. ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರ ಪುರುಷರು ಜನಜನಿತರಾಗಿದ್ದು, ಇವರಲ್ಲಿ ವೀರಭದ್ರೇಶ್ವರ ಪ್ರಥಮ ಪುರುಷನಾಗಿದ್ದಾನೆ. ಇಂದು ನಾವೆಲ್ಲ ಭಕ್ತರು ಸ್ವಾರ್ಥಭಾವನೆ ತೊಡೆದು ಧರ್ಮಮಾರ್ಗದಲ್ಲಿ ನಡೆದು ಅವನ ಕೃಪೆಗೆ ಪಾತ್ರರಾಗಬೇಕು ಎಂದರು.ಪರದೇಶಿಮಠದಶ್ರೀ, ತಾಲ್ಲೂಕು ನಿವೃತ್ತನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಮಾತನಾಡಿದರು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ತಾಲ್ಲೂಕು ವಚನ ಸಾಹಿತ್ಯ…
ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಜರುಗಿದ ಹುಲ್ಲೂರು ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಹುಲ್ಲೂರಿನ ಎಸ್.ಎನ್.ಡಿ ಶಾಲೆಯ ವಿದ್ಯಾರ್ಥಿಗಳು ಸಮಗ್ರ ವಿರಾಗ್ನಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.೧೦೦ಮೀ ಓಟ-ವಿನುತ ಬಿಸಲದಿನ್ನಿ, ೪೦೦ಮೀ ಓಟ-ಧರೆಪ್ಪ ತೋಳಮಟ್ಟಿ, ಗುಂಡು ಎಸೆತ- ರಾಕೇಶ್ ಜಟ್ಟಗಿ, ಚಕ್ರ ಎಸೆತ-ಶಿವುಕುಮಾರ್ ಚಿಮ್ಮಲಗಿ ಮತ್ತು ಚಂದ್ರಶೇಖರ ಪಾಟೀಲ, ಉದ್ದ ಜಿಗಿತ-ಸಿದ್ದಾರೂಢ ಬಿರಾದಾರ ಮತ್ತು ವಿನುತ ಬಿಸಳದಿನ್ನಿ, ಎತ್ತರ ಜಿಗಿತ-ಸಿದ್ದಾರೂಢ ಬಿರಾದಾರ, ಗುಂಪು ಆಟಗಳಲ್ಲಿ ಖೋ ಖೋ ಪ್ರಥಮ, ರಿಲೇ ದ್ವಿತೀಯ, ವಾಲಿಬಾಲ್ ಪ್ರಥಮ, ಥ್ರೋ ಬಾಲ ಪ್ರಥಮ, ವಿದ್ಯಾರ್ಥಿನಿಯರ ವೀಭಾಗದಲ್ಲಿ ಗುಂಡು ಎಸೆತ ಸುಶ್ಮಿತಾ ಚಿಮ್ಮಲಗಿ, ಕಬಡ್ಡಿ ದ್ವಿತೀಯ, ವಾಲಿಬಾಲ್ ಪ್ರಥಮ, ಥ್ರೋ ಬಾಲ ಪ್ರಥಮ ಹೀಗೆ ಸಮಗ್ರ ವೀರ ಪ್ರಶಸ್ತಿಗಳನ್ನು ಪಡೆದರು.ಪ್ರಶಸ್ತಿ ವಿಜೇತ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೋಚ ನೀಡಿದ ಮಹಾಂತೇಶ ಹಿರೇಮಠರಿಗೆ ಶಾಲೆಯ ವತಿಯಿಂದ ಸನ್ಮಾನಿಸುವ ಮೂಲಕ ಅಭಿನಂದನೆಯನ್ನು ಸಲ್ಲಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪದ, ಶಾಲೆಯ ಮುಖ್ಯಗುರು ರೇಖಾ ಎಂ.ಎಸ್ ಸೇರಿದಂತೆ ಶಿಕ್ಷಕ ವೃಂದ…
ವಿಜಯಪುರ: ಕ್ರೀಡೆಗಳು ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಹೇಳಿದ್ದಾರೆ.ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ನಡೆದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಕ್ರೀಡೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಆದರೆ, ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೋಂಡರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕವಾಗಿಯೂ ಸದೃಢರಾಗಬಹುದು. ಇದರಿಂದ ಆರೋಗ್ಯಯುತ ಸಮಾಜ ನಿರ್ಮಾಣಕ್ಕೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲ್ಮೊನ್ ಚೊಪಡೆ ಮಾತನಾಡಿ, ಕ್ರೀಡೆಗಳಲ್ಲಿ ಸೋಲು ಮತ್ತು ಗೆಲವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು. ಮರಳಿ ಪ್ರಯತ್ನ ಮಾಡಿದರೆ ಮುಂದಿನ ಪಂದ್ಯಗಳಲ್ಲಿ ಗೆಲವು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಾ. ಜಯಶ್ರೀ ಪೂಜಾರ ಮತ್ತು ರೂಪಾ, ಸಂಸ್ಥೆಯ…
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಚಿವ ಶಿವಾನಂದ ಎಸ್.ಪಾಟೀಲ ಮಾಹಿತಿ ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸುವ ಮೂಲಕ ಶೇ.೪೧.೪೦ ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ೧೯೧೯ರಲ್ಲಿ ಸ್ಥಾಪಿತವಾದ ಬ್ಯಾಂಕು ಈಗ ೧೦೫ ವರ್ಷಗಳ ನಿರಂತರ ಸಮರ್ಪಕ ಸೇವೆ ಪೂರ್ಣಗೊಳಿಸಿ ೧೦೬ನೇ ವರ್ಷದಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಾಧನೆ ಮಾಡಿ ಬ್ಯಾಂಕಿನ ಸಾಂಪತ್ತಿಕ ಸ್ಥಿತಿಯು ಸದೃಢಗೊಂಡಿದೆ. ೨೦೨೩-೨೪ನೇ ಸಾಲಿನಲ್ಲಿ ತೆರಿಗೆ ಪೂರ್ವ ರೂ.೨೭.೧೦ ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ೬.೮೮ ಕೋಟಿ ರೂ. ತೆರಿಗೆ ಪಾವತಿಸಿ ನಂತರ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಗಳಿಸಿದ ಗರಿಷ್ಠ…
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ಇಂಡಿ: ಮುಂಬರುವ ೨ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ರಸ್ತೆಗಳನ್ನು ಮಾಡಲಾಗುವದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.ಭಾನುವಾರ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ೨೭.೫ ಕೋಟಿ ಅನುದಾನದಲ್ಲಿ ಇಂಡಿ-ಆಲಮೇಲ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಜಲಧಾರೆ ಯೋಜನೆಯ ಅಡಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದಿಂದ ವಿಜಯಪೂರ, ಇಂಡಿ ಮತ್ತು ಬಸವನಬಾಗೇವಾಡಿ ತಾಲುಕುಗಳ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವದು. ಈಗಾಗಲೇ ಈ ಯೋಜನೆ ಕೈಗೆತ್ತಿಕೊಂಡಿದ್ದು ಕೆಲಸ ಭರದಿಂದ ಸಾಗಿದೆ. ಇದರಂತೆ ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳ ಎಲ್ಲಾ ಗ್ರಾಮಗಳಿಗೆ ನಾರಾಯಣಪೂರ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುವದು. ಈ ಎಲ್ಲಾ ಕೆಲಸಗಳು ಬರುವ ೨ ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ನೀಡಲು ಶ್ರಮಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಬರುವ ೨ ವರ್ಷಗಳಲ್ಲಿ…
ವಿಜಯಪುರ: ಹಬ್ಬ ಹರಿದಿನಗಳು ಸೇರಿ ಇತರೆ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಕರೆ ನೀಡಿದ್ದಾರೆ.ಈ ಕುರಿತು ರವಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಹಿಂದೂ ಧರ್ಮ ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿ ಜೊತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ ವ್ಯಾಪಾರಸ್ಥರ ಹತ್ತಿರ ದಿನಸಿ, ಬಟ್ಟೆ, ಹಣ್ಣು, ತರಕಾರಿ ಯಾವುದೇ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ನಮ್ಮ ಧರ್ಮಕ್ಕೆ ಗೌರವ ಮತ್ತು ಕೊಡುಗೆ ನೀಡಿದಂತಾಗುತ್ತದೆ.ನಾವು ನಮ್ಮ ಹಿಂದುಸ್ಥಾನವನ್ನು, ಈಗ ಹಿಂದುಗಳ ಮೇಲೆ ಅನ್ಯಾಯ, ದೌರ್ಜನ್ಯವಾಗುತ್ತಿರುವ ಬಾಂಗ್ಲಾ ದೇಶದಂತಾಗಲು ಬಿಡಬಾರದು. ಆದ್ದರಿಂದ ನಮ್ಮ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಯಾವುದೇ ಚೌಕಾಸಿ ಮಾಡದೇ, ನಮ್ಮ ಧರ್ಮವನ್ನು ಗೌರವಿಸುವ ನಮ್ಮ ಬಡ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಎಂಬ ಊರಿನಿಂದ ವಲಸೆ ಬಂದ ಸಂಪ್ರದಾಯಸ್ತ ಕೂಡು ಕುಟುಂಬದ ಕುಡಿ ನಮ್ಮ ಇಂದಿನ ಕಥಾನಾಯಕ ಗುರು ಹರಿ. “ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂಬ ಮಾತಿನಂತೆ ಕಲಾ ಸಾಧಕ ಗುರು ಹರಿ ಅವರ ಕಲಾಸಾಂಗತ್ಯ ಮತ್ತು ಜೀವನಯಾನಕ್ಕೆ ಜೊತೆಯಾಗಿದ್ದು ಚೇತನ ಎಂಬ ಕಲೋಪಾಸಕಿ. ದಂಡೆ ಸುಬ್ಬರಾಮಿ ರೆಡ್ಡಿ ಮತ್ತು ರಮಣಮ್ಮ ದಂಪತಿಗಳ ಆರು ಜನ ಮಕ್ಕಳಲ್ಲಿ ಮೂರು ಜನ ಅಕ್ಕಂದಿರು, ಓರ್ವ ಅಣ್ಣನ ನಂತರ ಹುಟ್ಟಿದ ಹರಿ ಅವರು ಓರ್ವ ತಮ್ಮ ಮತ್ತು ತಂಗಿಯನ್ನು ಹೊಂದಿದ್ದರು.ತಂದೆಯವರಿಗೆ ಬೆಂಗಳೂರಿನಹೆಚ್ಎಎಲ್ ನಲ್ಲಿ ಉದ್ಯೋಗ ದೊರೆತ ಕಾರಣ ಇಡೀ ಕುಟುಂಬ ಬೆಂಗಳೂರಿನ ಜಯನಗರ ಬಡಾವಣೆಗೆ ಸ್ಥಳಾಂತರಗೊಂಡಿತು. ತಂದೆಯವರು ಸಾಯಂಕಾಲ ಕೆಲಸಕ್ಕೆ ಹೋಗುತ್ತಿದ್ದುದರಿಂದ ಬಿಡುವಾಗಿರುತ್ತಿದ್ದ ಅವರ ತಾಯಿ ರಮಣಮ್ಮ ತಮ್ಮೆಲ್ಲ ಮಕ್ಕಳನ್ನು ಹತ್ತಿರದ ಶಿವ ಬಾಲಯೋಗಿ ಸ್ವಾಮೀಜಿಯವರ ಆಶ್ರಮಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಪ್ರತಿದಿನ ಪೂಜೆ, ಪ್ರವಚನ, ಪುರಾಣ, ಪುಣ್ಯ ಕಥೆಗಳ…
