ವಿಜಯಪುರ: ಜಿಲ್ಲೆಯಾದ್ಯಂತ ಸೆ.೭ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ಉಪವಿಭಾಗಕ್ಕೆ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ (ಮೊ:೯೫೯೯೯೦೯೭೨೪), ಇಂಡಿ ಉಪವಿಭಾಗಕ್ಕೆ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ (ಮೊ:೯೦೦೮೬೯೦೦೩೯) ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನಿಯೋಜಿಸಿ ಆದೇಶಿಸಲಾಗಿದೆ.
ದಿನಾಂಕ : ೦೭-೦೯-೨೦೨೪ ರಂದು ಪ್ರತಿಷ್ಠಾಪನೆ ದಿನ ಹಾಗೂ ಸೆ.೧೧, ೧೩, ೧೫ ಹಾಗೂ ೧೭ರವರೆಗೆ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ (ಮೊ:೯೪೪೮೬೯೨೩೫೮) ಅವರನ್ನು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ.೦೧ ರಿಂದ ೧೭ರವರೆಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಈರಣ್ಣ ಆಶಾಪೂರ (ಮೊ:೯೭೩೧೦೪೨೦೬೩) ಅವರನ್ನು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ. ೧೮ರಿಂದ ೩೫ ರವರೆಗೆ ಹಾಗೂ ಪ್ರಭಾರ ತಹಶೀಲ್ದಾರ ವ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಸ್.ಎಚ್.ಅರಕೇರಿ ಅವರನ್ನು ತಿಕೋಟಾ ತಾಲೂಕಿಗೆ ನಿಯೋಜಿಸಿ ಆದೇಶಿಸಲಾಗಿದೆ.
ವಿಜಯಪುರ ತಾಲೂಕಿಗೆ ತಹಶೀಲ್ದಾರ ಪಿ.ಎಸ್.ಚನಗೊಂಡ (ಮೊ:೯೪೮೨೮೯೬೩೭೦), ಇಂಡಿ ತಾಲೂಕಿಗೆ ತಹಶೀಲ್ದಾರ ಬಿ.ಎಸ್.ಕಡಕಭಾವಿ (ಮೊ:೯೯೦೨೭೪೮೨೪೦), ಬಸವನಬಾಗೇವಾಡಿ ತಾಲೂಕಿಗೆ ತಹಶೀಲ್ದಾರರಾದ ವಾಯ್.ಎಸ್.ಸೋಮನಕಟ್ಟಿ (ಮೊ:೯೦೦೮೭೧೨೭೬೫), ಮುದ್ದೇಬಿಹಾಳ ತಾಲೂಕಿಗೆ ತಹಶೀಲ್ದಾರ ಬಲರಾಮ್ ಕಟ್ಟಿಮನಿ (ಮೊ:೯೫೩೮೨೮೪೪೨೬), ಸಿಂದಗಿ ತಾಲೂಕಿಗೆ ತಹಶೀಲ್ದಾರ ಪ್ರದೀಪ ಹಿರೇಮಠ (ಮೊ:೮೦೭೩೬೮೮೫೧೫) ಹಾಗೂ ಬಬಲೇಶ್ವರ ತಾಲೂಕಿಗೆ ತಹಶೀಲ್ದಾರ ಎಂ.ಎಸ್.ಅರಕೇರಿ (ಮೊ:೯೫೩೮೩೮೫೧೦೬) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಕೊಲ್ಹಾರ ತಾಲೂಕಿಗೆ ತಹಶೀಲ್ದಾರ ಎಸ್.ಎಸ್.ನಾಯಕಲಮಠ (ಮೊ:೯೬೧೧೧೦೧೩೭೯), ನಿಡಗುಂದಿ ತಾಲೂಕಿಗೆ ತಹಶೀಲ್ದಾರ ಎ.ಡಿ.ಅಮರಾವದಗಿ (ಮೊ:೯೪೮೨೨೬೮೫೩೩), ತಾಳಿಕೊಟೆ ತಾಲೂಕಿಗೆ ತಹಶೀಲ್ದಾರ ಶ್ರೀಮತಿ ಕೀರ್ತಿ ಚಾಲಕ(ಮೊ:೮೮೬೧೪೩೮೫೫೪), ದೇವರಹಿಪ್ಪರಗಿ ತಾಲೂಕಿಗೆ ತಹಶೀಲ್ದಾರ ಪ್ರಕಾಶ ಸಿಂದಗಿ (ಮೊ:೯೯೪೫೮೫೬೨೭೪), ಆಲಮೇಲ ತಾಲೂಕಿಗೆ ತಹಶೀಲ್ದಾರ ಸುರೇಶ ಚಾವಲರ (ಮೊ:೯೪೪೯೯೪೩೦೨೨), ಚಡಚಣ ತಾಲೂಕಿಗೆ ತಹಶೀಲ್ದಾರ ಎಸ್.ಬಿ.ಇಂಗಳೆ (ಮೊ:೯೯೦೦೭೭೬೦೦೯) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
Subscribe to Updates
Get the latest creative news from FooBar about art, design and business.
ಗಣೇಶ ಚತುರ್ಥಿ: ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳ ನೇಮಕ
Related Posts
Add A Comment
