ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಜರುಗಿದ ಹುಲ್ಲೂರು ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಹುಲ್ಲೂರಿನ ಎಸ್.ಎನ್.ಡಿ ಶಾಲೆಯ ವಿದ್ಯಾರ್ಥಿಗಳು ಸಮಗ್ರ ವಿರಾಗ್ನಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
೧೦೦ಮೀ ಓಟ-ವಿನುತ ಬಿಸಲದಿನ್ನಿ, ೪೦೦ಮೀ ಓಟ-ಧರೆಪ್ಪ ತೋಳಮಟ್ಟಿ, ಗುಂಡು ಎಸೆತ- ರಾಕೇಶ್ ಜಟ್ಟಗಿ, ಚಕ್ರ ಎಸೆತ-ಶಿವುಕುಮಾರ್ ಚಿಮ್ಮಲಗಿ ಮತ್ತು ಚಂದ್ರಶೇಖರ ಪಾಟೀಲ, ಉದ್ದ ಜಿಗಿತ-ಸಿದ್ದಾರೂಢ ಬಿರಾದಾರ ಮತ್ತು ವಿನುತ ಬಿಸಳದಿನ್ನಿ, ಎತ್ತರ ಜಿಗಿತ-ಸಿದ್ದಾರೂಢ ಬಿರಾದಾರ, ಗುಂಪು ಆಟಗಳಲ್ಲಿ ಖೋ ಖೋ ಪ್ರಥಮ, ರಿಲೇ ದ್ವಿತೀಯ, ವಾಲಿಬಾಲ್ ಪ್ರಥಮ, ಥ್ರೋ ಬಾಲ ಪ್ರಥಮ, ವಿದ್ಯಾರ್ಥಿನಿಯರ ವೀಭಾಗದಲ್ಲಿ ಗುಂಡು ಎಸೆತ ಸುಶ್ಮಿತಾ ಚಿಮ್ಮಲಗಿ, ಕಬಡ್ಡಿ ದ್ವಿತೀಯ, ವಾಲಿಬಾಲ್ ಪ್ರಥಮ, ಥ್ರೋ ಬಾಲ ಪ್ರಥಮ ಹೀಗೆ ಸಮಗ್ರ ವೀರ ಪ್ರಶಸ್ತಿಗಳನ್ನು ಪಡೆದರು.
ಪ್ರಶಸ್ತಿ ವಿಜೇತ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೋಚ ನೀಡಿದ ಮಹಾಂತೇಶ ಹಿರೇಮಠರಿಗೆ ಶಾಲೆಯ ವತಿಯಿಂದ ಸನ್ಮಾನಿಸುವ ಮೂಲಕ ಅಭಿನಂದನೆಯನ್ನು ಸಲ್ಲಿಸಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪದ, ಶಾಲೆಯ ಮುಖ್ಯಗುರು ರೇಖಾ ಎಂ.ಎಸ್ ಸೇರಿದಂತೆ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
ಎಸ್.ಎನ್.ಡಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ವಿರಾಗ್ನಿ ಪ್ರಶಸ್ತಿ
Related Posts
Add A Comment

