ದೇವರಹಿಪ್ಪರಗಿ: ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ಯ ಮಠಾಧೀಶರುಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು.
ಪಟ್ಟಣದ ವೀರಭದ್ರೆಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸೇರಿದ ಭಕ್ತಮಂಡಳಿ ಹಿಂದೂ ಧರ್ಮ ಪರಂಪರೆಯ ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯ ಪೂಜಿತ ವೀರಗೋತ್ರ ಪುರುಷ ಶ್ರೀವೀರಭದ್ರೇಶ್ವರ ದೇವರ ಪ್ರತಿಮೆಗೆ ಶಾಸ್ತೊçಕ್ತವಾಗಿ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಯ್ಯನಮಠ ಪೀಠಾಧಿಪತಿಗಳಾದ ವೀರಗಂಗಾಧರಶ್ರೀ ಆಶೀರ್ವಚನ ನೀಡಿ, ಪುರಾಣಗಳ ಪ್ರಕಾರ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿAದ ಅವತರಿಸಿ ಶಿವಭಕ್ತರನ್ನು ಸಂರಕ್ಷಿಸುತ್ತಿರುವ ವೀರಭದ್ರೇಶ್ವರ ದೇವರು ವೀರಶೈವ ಲಿಂಗಾಯತ ಪರಂಪರೆಯಲ್ಲಿ ಪ್ರಮುಖನಾಗಿದ್ದಾನೆ. ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರ ಪುರುಷರು ಜನಜನಿತರಾಗಿದ್ದು, ಇವರಲ್ಲಿ ವೀರಭದ್ರೇಶ್ವರ ಪ್ರಥಮ ಪುರುಷನಾಗಿದ್ದಾನೆ. ಇಂದು ನಾವೆಲ್ಲ ಭಕ್ತರು ಸ್ವಾರ್ಥಭಾವನೆ ತೊಡೆದು ಧರ್ಮಮಾರ್ಗದಲ್ಲಿ ನಡೆದು ಅವನ ಕೃಪೆಗೆ ಪಾತ್ರರಾಗಬೇಕು ಎಂದರು.
ಪರದೇಶಿಮಠದಶ್ರೀ, ತಾಲ್ಲೂಕು ನಿವೃತ್ತನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಮಾತನಾಡಿದರು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ತಾಲ್ಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಆರ್.ಬಿರಾದಾರ, ಎಸ್.ವ್ಹಿ.ಆಲಾಳಮಠ, ಎಸ್.ಎಮ್.ಬೆನಕನಹಳ್ಳಿ, ಅಜ್ಜಯ್ಯ ಹಿರೇಮಠ, ಮಡಿವಾಳಪ್ಪ ಮಣೂರ, ಯಲಗೂರೇಶ ದೇವೂರ, ಸಿದ್ದು ಆನಂದಿ, ಗುರಪ್ಪ ಸಜ್ಜನ, ರವೀಂದ್ರ ಮಣೂರ, ಪಿ.ಎಸ್.ಮಿಂಚನಾಳ, ಸಿದ್ರಾಮಪ್ಪ ನಂದ್ಯಾಳ, ರಮೇಶ ಮಶಾನವರ, ಮುತ್ತು ತೋಟದ, ಕಾಶೀನಾಥ ಕೋರಿ, ಆನಂದ ಜಡಿಮಠ, ರಮೇಶ ಮಾಳನೂರ, ಶ್ರೀಕಾಂತ ನಾಶಿಮಠ, ಭದ್ರಯ್ಯ ಮಲ್ಲಿಕಾರ್ಜುನಮಠ, ಮಲ್ಲಯ್ಯ ನಂದಿಕೋಲ, ದಾನು ಯರನಾಳ, ಶ್ರೀಶೈಲ ಯಾಳಗಿ, ಶ್ರೀಶೈಲ ಮಲ್ಲಿಕಾರ್ಜುನಮಠ, ನಿಂಬೆಣ್ಣಪ್ಪ ಧುತ್ತರಗಾಂವಿ ಸೇರಿದಂತೆ ಮಹಿಳೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

