ವಿಜಯಪುರ: ಹಬ್ಬ ಹರಿದಿನಗಳು ಸೇರಿ ಇತರೆ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಕರೆ ನೀಡಿದ್ದಾರೆ.
ಈ ಕುರಿತು ರವಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಹಿಂದೂ ಧರ್ಮ ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿ ಜೊತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ ವ್ಯಾಪಾರಸ್ಥರ ಹತ್ತಿರ ದಿನಸಿ, ಬಟ್ಟೆ, ಹಣ್ಣು, ತರಕಾರಿ ಯಾವುದೇ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ನಮ್ಮ ಧರ್ಮಕ್ಕೆ ಗೌರವ ಮತ್ತು ಕೊಡುಗೆ ನೀಡಿದಂತಾಗುತ್ತದೆ.
ನಾವು ನಮ್ಮ ಹಿಂದುಸ್ಥಾನವನ್ನು, ಈಗ ಹಿಂದುಗಳ ಮೇಲೆ ಅನ್ಯಾಯ, ದೌರ್ಜನ್ಯವಾಗುತ್ತಿರುವ ಬಾಂಗ್ಲಾ ದೇಶದಂತಾಗಲು ಬಿಡಬಾರದು. ಆದ್ದರಿಂದ ನಮ್ಮ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಯಾವುದೇ ಚೌಕಾಸಿ ಮಾಡದೇ, ನಮ್ಮ ಧರ್ಮವನ್ನು ಗೌರವಿಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರವೇ ವ್ಯವಹರಿಸಲು ಪ್ರತಿಯೊಬ್ಬರೂ ಮುಂದಾಗಬೇಕು.
ನಮ್ಮ ಧರ್ಮವನ್ನು ಆಚರಿಸುವ ಮೂಲಕ ಧರ್ಮವನ್ನು ಗೌರವಿಸುವ, ಉಳಿಸಿ, ಬೆಳೆಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರ ವ್ಯಾಪಾರ ಮಾಡುವುದರಿಂದ ಅವರ ಜೀವನೋಪಾಯಕ್ಕೆ ಮತ್ತು ನಮ್ಮ ಹಿಂದೂ ಧರ್ಮಕ್ಕೆ ಪರೋಕ್ಷವಾಗಿ ಬೆಂಬಲ ಸಹಾಯ, ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಹೀಗಾಗಿ ನಮ್ಮ ದೇಶ, ನಮ್ಮ ಧರ್ಮವನ್ನು ಉಳಿಸಿ-ಬೆಳೆಸುವ, ಪ್ರೀತಿಸುವ, ಗೌರವಿಸುವ ಜನರೊಂದಿಗೆ ಮಾತ್ರ ವ್ಯವಹರಿಸಲು, ನಾವೆಲ್ಲ ನಮ್ಮ ಸಣ್ಣ-ಪುಟ್ಟ ಜಾತಿ-ಭೇಧವನ್ನು ಮರೆತು ಹೊಸ ಹೆಜ್ಜೆ ಇಡಬೇಕೆಂದು ನಗರ ಶಾಸಕ ಯತ್ನಾಳ ಕರೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

