ಮುದ್ದೇಬಿಹಾಳ: ಧ್ಯಾನ, ಯೋಗ ಸಾಧನೆಯನ್ನು ಬಾಲ್ಯದಿಂದಲೇ ರೂಢಿಸಿಕೊಂಡಲ್ಲಿ ಜೀವನದ ಯಾವುದೇ ಹಂತದಲ್ಲಿ ಏನೇ ಸಮಸ್ಯೆಗಳು ಬಂದರೂ ನಾವು ಎದುರಿಸಬಹುದು ಎಂದು ತಂಗಡಗಿ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಶ್ರೀಮಾಣಿಕ್ ಕುಲಕರ್ಣಿ ಹೇಳಿದರು.
ತಾಲೂಕಿನ ಬಿದರಕುಂದಿ ಗ್ರಾಮದ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಪಿ.ಯು. ಕಾಲೇಜಿನಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೩ರ ತಾಲೂಕಾ ಮಟ್ಟದ ಸಪ್ತಾಹದ ಸಮಾಪ್ತಿ ದಿನದ ಉಪನ್ಯಾಸಮಾಲಿಕೆ ಕಾರ್ಯಕ್ರಮದಲ್ಲಿ ವಿಶ್ವವಂದಿತೆ ಭಗವದ್ಗೀತೆಯೆ ಎನ್ನುವ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.
ಭಾರತದಲ್ಲಿ ಸ್ವಾಮಿ ವಿವೇಕಾನಂದ, ಗಾಂಧೀಜಿಯವರಿಂದ ಹಿಡಿದು ಬಹುತೇಕ ಉನ್ನತಾದರ್ಶ ಹೊಂದಿದ ವ್ಯಕ್ತಿಗಳ ಬದುಕಿನ ಹಿಂದೆ ಭಗವದ್ಗೀತೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿಯೇ ಸ್ವಾಮಿ ವಿವೇಕಾನಂದರು ಗೀತೆಯ ಮಹತ್ವವನ್ನು ಪ್ರಪಂಚಕ್ಕೆ ಸಾರಿ ಬಂದು ಶತಮಾನಗಳೇ ಸಂದುಹೋಗಿದೆ. ಆವತ್ತಿನ ದಿವಸ ಭಾರತಕ್ಕೆ ಅಮೇರಿಕಾ ರಾಷ್ಟ್ರ ಗೌರವಿಸಿರುವುದು ಭಾರತದ ಸಂಸ್ಕೃತಿಯ ಸಹೋದರತ್ವ ಭಾವನೆಗೆ ಗಾಂಧೀಜಿಯವರು ಗೀತೆಯೇ ನನ್ನ ತಾಯಿಯೆಂದು ನಿಲುಮೆ ತಾಳಿದ್ದನ್ನು ನೆನೆಯಬಹುದು. ವಿದೇಶಿಯ ದಾರ್ಶನಿಕರು ಭಾರತಕ್ಕೆ ಬಂದು ಸಂಸ್ಕೃತ ಕಲಿತು ಭಗವದ್ಗೀತೆಯನ್ನು ಬೇರೆ ಬೇರೆ ಭಾಷೆಗೆ ತರ್ಜುಮೆ ಮಾಡಿಸಿರುವುದನ್ನು ನೋಡಬಹುದಾಗಿದೆ. ಅಲ್ಲದೆ ತನ್ಮೂಲಕ ಅನ್ವೇಷಣೆಗೆ ತೊಡಗಿಸಿಕೊಂಡಿದನ್ನು ಗಮನಿಸಬಹುದಾಗಿದೆ. ಭಾರತ ವೇದ ಪುರಾಣಗಳ ಅನ್ವಯಕ್ಕೆ ಸಕ್ರೀಯವಾದ ಅನುಭವ ಪಡೆದ ವಿಚಾರ ಹಂಚಿಕೊಂಡಿದ್ದನ್ನು ನಿದರ್ಶನದೊಂದಿಗೆ ವಿವರಿಸಿದರು.
ಕೋಳೂರು ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರುದ್ರೇಶ ಕಿತ್ತೂರ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕನಗೌಡ ಪಾಟೀಲ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಂತಾ ಭಟ್ಟ, ರೇಣುಕಾ ಸಜ್ಜನ, ಲೀಲಾ ಭಟ್ಟ, ಎಮ್.ಪಿ.ಪಡದಾಳಿ, ರಮೇಶ ಮಡಿವಾಳರ್, ಶಂಕರಗೌಡ ಹಿರೇಗೌಡರ್, ಅನ್ನಪೂರ್ಣ ನಾಗರಾಳ, ರೂಪಾ ನಾಟೇಕಾರ್ ಸೇರಿದಂತೆ ಮತ್ತೀತರರು ಇದ್ದರು. ಜ್ಞಾನ ಭಾರತಿ ವಿದ್ಯಾ ಮಂದಿರದ ಗೀತ ಗಾಯನ ತಂಡದವರು ಗುರುಮಾತೆ ರಂಜಿತಾ ಹೆಗಡೆ ನೇತೃತ್ವದಲ್ಲಿ ಸಾಮೂಹಿಕವಾಗಿ ಭಗವದ್ಗೀತೆಯ ೧೦ನೇ ಅಧ್ಯಾಯವನ್ನು ಪಠಿಸಿದರು. ಪ್ರಾಚಾರ್ಯ ಜಗದೀಶ ಬಿರಾದಾರ ಸ್ವಾಗತಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಆಶಯದ ನುಡಿಗಳನ್ನಾಡಿದರು. ಉಪನ್ಯಾಸಕ ಶಂಕರ ಬೇವಿನಗಿಡದ ನಿರ್ವಹಿಸಿದರು. ಉಪನ್ಯಾಸಕಿ ಶ್ರೀದೇವಿ ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

