ವಿಜಯಪುರ: ಮಹಾರಾಷ್ಟ್ರದ ಪಂಢರಪುರ ಶ್ರೀ ವಿಠ್ಠಲ- ರುಕ್ಮಿಣಿ ದರ್ಶನಕ್ಕೆ ಹೊರಟಿರುವ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದ ಕಾರ್ತಿಕ ಪಾದಯಾತ್ರೆಯ ದಿಂಡಿ ಉತ್ಸವದ ಯಾತ್ರಾರ್ಥಿಗಳ ತಂಡ ಸಚಿವ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪಂಢರಪುರ ಕರ್ನಾಟಕ ವಾಸ್ಕರ ಶಿವೂರಕರ ಸೇವಾ ಮಂಡಳಿಯವರು ತಂದಿದ್ದ ಪಲ್ಲಕ್ಕಿಯನ್ನು ಸಚಿವ ಎಂ. ಬಿ. ಪಾಟೀಲ ಅವರು ಹೆಗಲ ಮೇಲೆ ಹೊತ್ತುಕೊಂಡು ಪಲ್ಲಕ್ಕಿ ಸೇವೆ ಮಾಡಿದರು.
ಈ ವೇಳೆ ಉಪಸ್ಥಿತರಿದ್ದ ಸಮಿತಿಯ ಮುಖ್ಯಸ್ಥ ಪುಂಡಲಿಕ ಮಹಾರಾಜರು ಸಚಿವರಿಗೆ ಇನ್ನೂ ಉನ್ನತ ಸ್ಥಾನ ಸಿಗಲಿ ಎಂದು ಶುಭ ಹಾರೈಸಿದರು.
ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವಾರಕರಿಗಳಿಗೆ ಸಚಿವರು ಶುಭ ಕೋರಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಎ. ಎಸ್. ಪಾಟೀಲ(ಹೊನ್ನುಟಗಿ), ಎಸ್. ಎ. ಬಿರಾದಾರ(ಕನ್ನಾಳ), ಜಗದೀಶ ಪಾಟೀಲ, ಬಸವರಾಜ ಬಾಗೇವಾಡಿ, ಎಂ. ಬಿ. ಬಗಲಿ ಮುಂತಾದವರು ಉಪಸ್ಥಿತರಿದ್ದರು.
Related Posts
Add A Comment