ಸಿಂದಗಿ: ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿರಬೇಕಾದರೆ ಗುರುವಿನ ಮಾರ್ಗದರ್ಶನವಿರಬೇಕು ಎಂದು ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಮಂಗಳವಾರ ನಡೆದ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿಯವರ ೧೩೦ನೆಯ ಜಯಂತೋತ್ಸವ ಹಾಗೂ ಶಿವಶರಣೆಯರ ಜೀವನ ಚರಿತಾಮೃತ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಮಾರ್ಗದರ್ಶವಿದ್ದೆಡೆ ನಮ್ಮ ಮನಸ್ಸು ನಮ್ಮ ಮಾತು ಕೇಳುತ್ತದೆ. ನಮ್ಮ ಮನಸ್ಸು ನಾವು ಹೇಳಿದ ಹಾಗೆ ಕೇಳ್ತದೆ ಮತ್ತು ಸಂಸ್ಕಾರ ನೀಡುತ್ತದೆ ಇಲ್ಲ ಅಂದರೆ ಸಂಸ್ಕಾರ ನೀಡುವುದಿಲ್ಲ. ಗುರು ನಮ್ಮನ್ನು ಕಾಯುತ್ತಾನೆ ಆ ಗುರುವನ್ನು ನಾವೆಂದು ಮರೆಯಬಾರದು. ನಾವೆಷ್ಟು ಗುರವಿನ ಸ್ಮರಣೆ, ಗುರುವಿನ ಸೇವೆ ಮಾಡುತ್ತೇವೆ ಅಷ್ಟು ನಮಗೆ ದೊರಕುತ್ತಾನೆ ಎಂದರು.
ಈ ವೇಳೆ ಭೀಮಾಶಂಕರ ಶ್ರೀಮಠದ ದತ್ತಪ್ಪಯ್ಯ ಮಹಾರಾಜರು, ಗುರುದೇವಾಶ್ರಮದ ಶಾಂತಗಂಗಾಧರ ಶ್ರೀಗಳು, ವಿರಕ್ತಮಠದ ಬಸವಪ್ರಭು ಶ್ರೀಗಳು ಮಾತನಾಡಿದರು.
ಶಿವಶರಣೆ ತೋಂಗಿನ ಮಹಾದೇವಿಯ ವಚನಾಮೃತವನ್ನು ವಿಶ್ರಾಂತ ಪ್ರಾಧ್ಯಾಪಕ, ಪ್ರವಚನಕಾರ ಬಿ.ಎನ್. ಪಾಟೀಲ ಇಬ್ರಾಹಿಂಪುರ ಪ್ರವಚನವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಡಾ.ಶರಣಬಸವ ಜೋಗುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೃತ್ಯುಂಜಯ ಚನ್ನಪ್ಪ ಕತ್ತಿ ಕುಟುಂಬ ದಾಸೋಹ ಸೇವೆಗೈದರು.
ಈ ವೇಳೆ ಚನ್ನಪ್ಪ ಕತ್ತಿ, ಎಸ್.ಡಿ ಜೋಗುರ, ಸೋಮನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಸಂಚಾಲಕ ವ್ಹಿ.ಡಿ.ವಸ್ತçದ, ಗಂಗಾಧರ ಜೋಗೂರ, ಜೆ.ಸಿ.ನಂದಿಕೋಲ, ಎಸ್.ಎಮ್.ಬಿರಾದಾರ, ಶ್ರೀಶೈಲ ನಂದಿಕೋಲ, ಕೆ.ಎಚ್.ಸೋಮಾಪೂರ, ವಿಶ್ವನಾಥ ನಂದಿಕೋಲ, ವಿರೇಶ ಜೋಗೂರ, ಶಿವಕುಮಾರ ಜೋಗೂರ, ಭಾಗ್ಯಶ್ರೀ ನಂದಿಮಠ, ಮುಕ್ತಾಯಕ್ಕ ಕತ್ತಿ, ನೀಲಾಂಬಿಕಾ ಕತ್ತಿ ಸೇರಿದಂತೆ ಶ್ರೀಮಠದ ಭಕ್ತರಿದ್ದರು.
Related Posts
Add A Comment