ಸಿಂದಗಿ: ಮಹಾವಿದ್ಯಾಲಯದ ಸಭಾಭವನದಲ್ಲಿ ನ.೧೭ ಮತ್ತು ೧೮ರಂದು ಅಂತರ್ ಕಾಲೇಜು ಮಟ್ಟದ್ ಏಕವಲಯ ಕುಸ್ತಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಜರುಗಲಿದೆ ಎಂದು ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ ತಿಳಿಸಿದರು.
ನಗರದ ಸಿ.ಎಂ ಮನಗೂಳಿ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಿ.ಎಮ್. ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಬಾಗಲಕೋಟ, ಚಿಕ್ಕೋಡಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳು ಸೇರಿ ನಾಲ್ಕು ವಲಯದ ಪುರುಷ ಮತ್ತು ಮಹಿಳೆಯರ ಏಕವಲಯ ಕುಸ್ತಿ ಪಂದ್ಯಾವಳಿ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ೫೫ ಕೆ.ಜಿ ಯಿಂದ ೧೨೦ ಕೆ.ಜಿ ವರೆಗಿರುವ ೧೫೦ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸುವ ನಿರಿಕ್ಷೇಯಿದೆ ಎಂದರು.
ಈ ವೇಳೆ ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ ಮಾತನಾಡಿ, ೧೭ರಂದು ನಡೆಯಲಿರುವ ಕಾರ್ಯಕ್ರಮವನ್ನು ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಮನಗೂಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಶ್ರಾಂತ ದೈಹಿಕ ನಿರ್ದೇಶಕ ಆರ್.ಬಿ.ಬೂದಿಹಾಳ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ರಾಣಿಚನ್ನಮ್ ವಿವಿಯ ದೈಹಿಕ ನಿರ್ದೇಶಕ ಜಗದೀಶ ಗಸ್ತಿ ಭಾಗವಹಿಸಲಿದ್ದಾರೆ. ಕೆ.ಹೆಚ್. ಸೋಮಾಪೂರ, ಹೆಚ್.ಎಮ್. ಉತ್ನಾಳ, ರವಿ ಗೋಲಾ ಗೌರವ ಉಪಸ್ಥಿತಿ ವಹಿಸಿಕೊಳ್ಳಲಿದ್ದಾರೆ. ಮೈದಾನ ಪೂಜೆಯನ್ನು ಕಲಕೇರಿಯ ಪಪೂ ಕಾಲೇಜಿನ ದೈಹಿಕ ಶಿಕ್ಷಕ ಶಾಂತು ದುರ್ಗಿ ಮಾಡಲಿದ್ದಾರೆ. ೧೮ರಂದು ನಡೆಯುವ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಜಗದೀಶ ಗಸ್ತಿ ಹಾಗೂ ಪ್ರಾಚಾರ್ಯ ಡಾ.ಬಿ.ಜಿ. ಪಾಟೀಲ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ವೇಳೆ ಎಸ್.ಎ ಜಾಹಗೀರದಾರ, ಕೆ.ಹೆಚ್. ಸೋಮಾಪೂರ, ಎಸ್.ಹೆಚ್. ಹೂಗಾರ, ಜಿ.ಜಿ. ಕಾಂಬಳೆ, ಎಸ್.ಎಂ. ಬಿರಾದಾರ ಸೇರಿದಂತೆ ಇತರರು ಇದ್ದರು.
Related Posts
Add A Comment