ಸಿಂದಗಿ: ಗೋವು ಸಮೃದ್ಧಿಯ ಸಂಕೇತ. ಮನೆಗಳಲ್ಲಿ ಗೋವುಗಳು ಇರುವುದರಿಂದ ನೂರಾರು ರೋಗ ರೂಜಿನಗಳು ದೂರವಾಗುತ್ತವೆ. ಇದು ವೈಜ್ಞಾನಿಕವಾಗಿ ಸತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿ ಗೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವಿಗೆ ಆಹಾರವನ್ನುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಐಶ್ವರ್ಯ ಮತ್ತು ಮೋಕ್ಷದ ಪ್ರತೀಕವಾಗಿದೆ. ಗೋವಿನ ಪೂಜೆ ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಮಾಡುತ್ತಾ ಬಂದಿದ್ದಾರೆ. ಗೋಪೂಜೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಗೋವಿನ ದೇಹದಲ್ಲಿ ಅನೇಕ ದೇವತೆಗಳು ವಾಸ ಮಾಡಿರುತ್ತಾರೆ ಎಂಬ ಪ್ರತೀತಿ ಇದೆ. ನಮ್ಮ ಹಿರಿಯರು ಗೋವುಗಳನ್ನ ಸಾಕುವ ಮೂಲಕ ನಮಗೆಲ್ಲ ಒಂದು ಸಂಸ್ಕೃತಿಯನ್ನು ಕಲಿಸಿದ್ದಾರೆ ಆ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಮಾತನಾಡಿದರು. ವೇದಿಕೆಯ ಮೇಲೆ ಪಶು ವೈದ್ಯಾಧಿಕಾರಿ ಡಾ. ಮಾರುತಿ ತಡಲಗಿ ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಎಂ ಬಿರಾದಾರ, ರಾಜಶೇಖರ ಹೆಬ್ಬಾಳ ಸೇರಿದಂತೆ ತಾಲೂಕಾಡಳಿತ ಇಲಾಖೆಯ ಸಿಬ್ಬಂದಿಗಳು ಇದ್ದರು.
Related Posts
Add A Comment