ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪಾಡ್ಯ ಆಚರಣೆ ಮಂಗಳವಾರ ಜನರು ಮಾಡುತ್ತಿದ್ದರೆ ಪುರಸಭೆ ಪೌರಕಾರ್ಮಿಕರು ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸುವ ಕಾಯಕದಲ್ಲಿ ತೊಡಗಿರುವುದು ಕಂಡುಬಂದಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಕಸ ಸಂಗ್ರಹವಾಗಿದೆ.
ಸೋಮವಾರ ಒಂದು ಟ್ರ್ಯಾಕ್ಟರ್ ಬಾಳೆದೆಲೆಯ ಮೂರು ಟನ್ವರೆಗೆ , ಮಂಗಳವಾರ ಒಂದು ಟ್ರ್ಯಾಕ್ಟರ್, ಎರಡು ಟಿಪ್ಪರ್ ಬಾಳೆದಿಂಡು ಸೇರಿ ೧೦ ಟನ್ವರೆಗೆ ಕಸ ಸಂಗ್ರಹವಾಗಿದೆ. ದೀಪಾವಳಿ ಹಬ್ಬದ ಎರಡು ದಿನಗಳಲ್ಲಿ ಅಂದಾಜು ೧೩ ಟನ್ ಕಸ ಸಂಗ್ರಹವಾಗಿದೆ. ನಮ್ಮ ಸಿಬ್ಬಂದಿಗಳು ಸಂಗ್ರಹಿಸಿದ ಕಸವನ್ನು ಘನ್ಯತಾಜ್ಯ ಘಟಕಕ್ಕೆ ತಂದ ನಂತರ ಅದನ್ನು ಹಸಿ,ಒಣ ಕಸ ಎಂದು ಬೇರ್ಪಡಿಸಿ ಅದನ್ನು ಕೊಳೆಯಿಸಿ ಗೊಬ್ಬರ ಮಾಡಲಾಗುತ್ತದೆ. ಬುಧವಾರ ಅಂದಾಜು ಒಂದು ಟ್ಯಾಕ್ಟರನ್, ಮೂರು ಟಿಪ್ಪರ್ ಬಾಳೆದಿಂಡು ಸೇರಿದಂತೆ ೧೫ ಟನ್ ವರೆಗೂ ಕಸ ಸಂಗ್ರಹವಾಗಬಹುದು ಎಂದು ಪುರಸಭೆ ಕಿರಿಯ ಆರೋಗ್ಯ ಸಹಾಯಕ ಮಹೇಶ ಹಿರೇಮಠ ಪತ್ರಿಕೆಗೆ ಮಾಹಿತಿ ನೀಡಿದರು.
Related Posts
Add A Comment