ಮುದ್ದೇಬಿಹಾಳ: ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯವೋ ಅದರಷ್ಟೇ ಕ್ರೀಡಾ ಮತ್ತು ಮನರಂಜನೆ ಚಟುವಟಿಕೆ ಕೂಡ ಮುಖ್ಯ ಎಂದು ವಿದ್ಯಾಭಾರತಿ ಶಾಲೆಯ ಸಂಸ್ಥಾಪಕ ಎನ್.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ ನಲ್ಲಿರುವ ವಿದ್ಯಾಭಾರತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಪರ್ದೆ, ಹಾಡು, ಡಾನ್ಸ್, ಭರತನಾಟ್ಯ, ಡಿಸ್ಕೋ ಚೇರ್, ಕಾಲಾ ಚಸಮಾ, ಲಿಂಬೆಹಣ್ಣು ಚಾಲೆಂಜ್ ಸೇರಿದಂತೆ ಮತ್ತೀತರ ಆಟಗಳು ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಶಾಲೆಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡು ಸಂಭ್ರಮಿಸಿದರು.
Related Posts
Add A Comment